ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ

JANANUDI.COM NETWORK

 

ಕೊರೊನಾ ಭಯದ ಜೊತೆಗೆ ಪರೀಕ್ಷೆಯ ಭಯದೊಡನೆ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭ

 

 

ಕುಂದಾಪುರ, ಜೂ.25: ಪ್ರಪಂಚದಲ್ಲಿ ಕಂಡೂ ಕಂಡರಿಯದ ವಾತವರಣ ಕೊರೊನಾ ಸಾಂಕ್ರಮಿಕ ಕಣ್ಣಿಗೆ ಕಾಣದ ಚಿಕ್ಕ ವೈರಸ್ ಆದರೆ ಅತಿ ಭಯಂಕರ ರಕ್ಕಸ ಕೊರೊನಾ ಕೋವಿಡ್ 19 (ಕೆಲವರಿಗೆ ಕೊರೊನಾ ಸೊಂಕು ತಗುಲಿದ ನಂತರ ಕೋವಿಡ್ 19 ಆಗಿ ರೋಗವಾಗಿ ಬದಲ್ಲುತ್ತೆ) ಬಿಂಬಿಸಿದ ಈ ಪೀಡೆಯ ಜೊತೆ ಇವತ್ತು ಕರ್ನಾಟಕ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಯಿತು.
ಈ ಪರೀಕ್ಷೆಯಿಂದ ಯಾವ ಥರಹದ ಫಲಿತಾಂಶಗಳು ಬರಬಹುದೋ ಗೊತ್ತಿಲ್ಲ ಅಂದರೆ ಎಷ್ಟು ಜನ ವಿದ್ಯಾರ್ಥಿಗಳು ಫಾಸ್ ಆಗುತ್ತಾರೊ, ಫೇಲ್ ಆಗುತ್ತಾರೋ, ಎಷ್ಟು ವಿದ್ಯಾಥಿಗಳಿಗೆ ಸೊಂಕು ಹರಡುತ್ತೊ, ಎಷ್ಟು ಜನ ಪರೀಕ್ಷಾ ಮೇಲ್ವಿಚಾರಕರಿಗೆ ಹಾಗೂ ಇತರ ಸಿಬಂದಿಗೆ ಕೊರೊನಾ ಸೊಂಕಿನ ಪರಿಣಾಮ ತಟ್ಟುತ್ತೋ ಗೊತ್ತಿಲ್ಲಾ. ಬುದ್ದಿವಂತ ಮಕ್ಕಳಿಗೆ ಭಯವಿದ್ದರೆ ಅವರು ಹೇಗೆ ಬರೆಯುತ್ತಾರೊ ಗೊತ್ತಿಲ್ಲಾ, ಬುದ್ದಿವಂತರಲ್ಲ ಅಂತಾ ಹಣೆ ಪಟ್ಟಿಕೊಂಡ ವಿದ್ಯಾರ್ಥಿಗಳು, ಕೊರೊನಾದ ಭಯದ ಜೊತೆ ಹೇಗೆ ಬರೆಯುತ್ತಾರೋ ತಿಳಿಯದು. ಮಾನಸಿಕ ಸ್ತಿಮಿತ ಇದ್ದವರು ಮಾತ್ರ ಇಲ್ಲಿ ಗಟ್ಟಿಯಗಬಲ್ಲರೂ, ಕೊರೊನಾದ ಕುರಿತು ಮಾಧ್ಯಮದ ನಡೆಸುವ ಭಯಾನಕ ಸುದ್ದಿಯೂ ಇಲ್ಲಿ, ಪಾತ್ರವಹಿಸುತ್ತದೆ. ಈ ವಿಷಯದಲ್ಲಿ ಶಿಕ್ಷಣ ಮಂತ್ರಿ ಎಷ್ಟರ ಮಟ್ಟಿಗೆ ತೆರ್ಗಡೆ ಹೊಂದುತ್ತಾರೊ ತಿಳಿಯದು.
ಆದರೂ ಕೂಡ ಹಟದಂತೆ ನಡೆದ ಈ ಎಸ್.ಎಸ್.ಎಲ್.ಸಿ ಪರೀಕ್ಷೆ ಎಲ್ಲಾ ಕೇಂದ್ರಗಳಲ್ಲಿ ರಾಜ್ಯ ಸರಕಾರ ಅನುಸರಿಸಲು ಕೊಟ್ಟ ಮಾರ್ಗದರ್ಶನದಂತೆ ನಡೆಯಿತು.
ಮೊದಲೇ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಾನಿಟ್ಯಾಸ್ ಮಾಡಲಾಗಿತ್ತು. ಕುಂದಾಪುರದಲ್ಲಿ 8 ವಲಯದ 2457, ಬೈಂದೂರು 8 ವಲಯದ 2014 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು, ಇವತ್ತು ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂಬ ಅಂಕೆ ಸಂಖೆ ಮುಂದೆ ತಿಳಿಯ ಬೇಕಾಗಿದೆ.
ತಮ್ಮ ಶಾಲೆಯ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆಂದು ತಿಳಿದುಕೊಳ್ಳಲ್ಲು ಆಯಾಯ ಶಾಲೆಯ ಸಿಬಂದಿಗೆ ಪರೀಕ್ಷಾ ಕೇಂದ್ರದಲ್ಲಿ ಜವಾಬ್ದಾರಿಯನ್ನು ನೀಡಿತ್ತು. ಆ ಜವಾಬ್ದಾರಿ ಆದ ನಂತರ ವಿದ್ಯಾರ್ಥಿಗಳ ಮತ್ತು ಹೆತ್ತವರ ಸಂಪರ್ಕ ಆಗುವ ಸಾಧ್ಯತೆ ಇದ್ದುದರಿಂದ, ನಂತರ ಅವರು ಮನೆಗೆ ಹೋಗಿ ಸ್ನಾನ ಮಾಡಿಕೊಳ್ಳ ಬೇಕೆಂದು ತಾಕೀತು ಮಾಡಿದ್ದರು.
ಪರೀಕ್ಷೆ ಬರೆಯವ ವಿದ್ಯಾರ್ಥಿಗಳು ಮಾನವ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರದಗಳ ಮೈದನದಲ್ಲಿ ನಿಲ್ಲಿಸಲಾಗಿತ್ತು. ಪ್ರತಿಯೊಂದು ವಿದ್ಯಾರ್ಥಿಗೆ, ಹಾಗೇ ಪ್ರತಿಯೊಂದು ಪರೀಕ್ಷಾ ಮೇಲ್ವಿಚಾರಕರಿಗೆ, ಸಿಬಂದಿಗೆ ಥರ್ಮಲ್ ಟೆಸ್ಟ್ ನಡೆಸಲಾಯಿತು. ವಿದ್ಯಾರ್ಥಿಗಳಿಗೆ, ಮೇಲ್ವಿಚಾರಕರಿಗೆ, ಸಿಬಂದಿ ಎಲ್ಲರಿಗೂ ಮಾಸ್ಕ್ ಕಡ್ಡಾಯವಾಗಿತ್ತು.
ಪರೀಕ್ಷೆ ಆರಂಭಗೊಳ್ಳುವ ಮುನ್ನ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ, ಆರೋಗ್ಯ ಇಲಾಖೆಯಿಂದ ಮೇಲ್ವಿಚಾರಕರಿಗೆ ಇತರ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಸಲಹೆ ಸೂಚನೆ ಮರ್ಗದರ್ಶನದ ಕಾರ್ಯಕ್ರಮ ನಡೆಯಿತು.