ಕುಂದಾಪುರ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ : ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ

JANANUDI.COM NETWORK

 

ಕುಂದಾಪುರ:ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ : ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ 

 

 

ಕುಂದಾಪುರ, ಜೂ.23:  ಇತ್ತಿಚೆಗೆ ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ದೇಶದ ಸೈನಿಕರಿಗೆ ಇಂದು ಕುಂದಾಪುರದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.ಸೈನಿಕರ ಕುಟುಂಬಕ್ಕೆ ಕೆಲವು ರಾಜ್ಯ ಸರಕಾರಗಳು ಪರಿಹಾರ ಘೋಷಿಸಿದೆ ಆದರೆ ಹುಸಿ ದೇಶಪ್ರೇಮದ ವೇಷದಲ್ಲಿ ಅಧಿಕಾರ ನಡೆಸುತ್ತಿರುವ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡದಿರುವುದು ಖಂಡಿಸಲಾಯಿತು.
ಅನಂತರ ನಡೆದ ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಸಿಐಟಿಯು ಮುಖಂಡರಾದ ಎಚ್ ನರಸಿಂಹಮಾತನಾಡಿ;

ಕರೋನದ ಸಂಕಷ್ಟ
ಸಮಯದಲ್ಲಿ ಆದಾಯವಿಲ್ಲದ ಜನರನ್ನು ರಕ್ಷಿಸಬೇಕಾದ ಕೇಂದ್ರ ಸರಕಾರ ಸರಕಾರ ಪ್ರತಿನಿತ್ಯ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದು ಅಮಾನವೀಯವಾಗಿದೆ ಎಂದು ಸಿಐಟಿಯು ಮುಖಂಡರಾದ ಎಚ್ ನರಸಿಂಹ ಹೇಳಿದರು.
ಅವರು ಕುಂದಾಪುರದಲ್ಲಿ ಸಿಐಟಿಯು ನೇತ್ರತ್ವದಲ್ಲಿ ನಡೆದ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ ಆದರೆ ಅದರ ಲಾಭವನ್ನು ಜನರಿಗೆ ನೀಡದೆ ಖಾಸಗಿ ಕಂಪೆನಿಗಳಿಗೆ ನೀಡಿ ಜನರನ್ನು ಲೂಟಿ ಮಾಡಲು ಕೇಂದ್ರ ಸರಕಾರ ಅವಕಾಶಕೊಡುತ್ತಿದೆ ಎಂದು ದೂರಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಮಾತನಾಡಿ;ಸರಕಾರದ ಬೆಲೆ ಏರಿಕೆ,ಕರೋನದ ತಡೆಗಟ್ಟು ವೈಪಲ್ಯವನ್ನು ಜನರಿಂದ ಮರೆ ಮಾಚಲು ಎಡ ಸಂಘಟನೆಗಳ ಮೇಲೆ ಅಪಪ್ರಚಾರ ನಡೆಸಿ ಜನರನ್ನು ದಿಕ್ಕುತಪ್ಪಿಸಲು ಸಂಚು ನಡೆಸುತ್ತಿದೆ.ಕೇಂದ್ರ ಸರಕಾರ ಕೂಡಲೇ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುರೇಶ್ ಕಲ್ಲಾಗರ,ಮಹಾಬಲ ವಡೇರ ಹೋಬಳಿ,ಸಂತೋಷ ಹೆಮ್ಮಾಡಿ,ಜಗದೀಶ ಆಚಾರ್,ಲಕ್ಷ್ಮಣ ಬರೆಕಟ್ಟು,ಜಿ.ಡಿ ಪಂಜು,ಚಿಕ್ಕಮೊಗವೀರ,ಅರುಣ್ ಗಂಗೊಳ್ಳಿ,ಉದಯ ಟೈಲರ್ ಇದ್ದರು.ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜುದೇವಾಡಿಗ ವಂದಿಸಿದರು.