ಮಾಸ್ಕ್ ಧರಿಸಿ ಕೋವಿಡ್ ಓಡಿಸಿ : ಡಿಸಿ ಸತ್ಯಭಾಮ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಮಾಸ್ಕ್ ಧರಿಸಿ ಕೋವಿಡ್ ಓಡಿಸಿ ; ಡಿಸಿ ಸತ್ಯಭಾಮ 

 

 

 

 

ಕೋಲಾರ ಜೂ.18 : ಕೋವಿಡ್ 19 ಹೋರಾಟದಲ್ಲಿ ನಾಗರಿಕರ ಸಹಕಾರ ನಿರ್ಣಾಯಕ ಪಾತ್ರ ವಹಿಸುತ್ತದೆ, ಇದನ್ನು ನಿಯಂತ್ರಿಸಲು ಮಾಸ್ಕ ಧಾರಣೆ ಮತ್ತು ಸಾಮಾಜಿಕ ಅಂತರ ಅತಿಮುಖ್ಯವಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಕೋವಿಡ್ ಓಡಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಬಾಮ ತಿಳಿಸಿದರು
ತಮ್ಮ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ಮಾಸ್ಕ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಹರಡುವಿಕೆ ತಡೆಯುವಲ್ಲಿ ಮಾಸ್ಕ್‍ಗಳ ಪಾತ್ರ ಅತ್ಯುತ್ತಮವಾಗಿದ್ದು ಕಡ್ಡಾಯವಾಗಿ ಮಾಡಿಸುವ ಮೂಲಕ ಕೋವಿಡ್ನಿಂದ ರಕ್ಷಿಸಿಕೊಳ್ಳೋಣ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯು ಮಾಸ್ಕ್ ಧರಿಸುವುದರಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯ ಎಂದು ಉಡ ಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಮಾಸ್ಕ್ ಧರಿಸುವಂತೆ ಸೂಚಿಸಿದರು.
ಸಾರ್ವಜನಿಕರು ಕಚೇರಿ ಸಿಬ್ಬಂದಿ ಮತ್ತಿತರರಿಗೆ ಮಾಸ್ಕ್ ಸ್ಯಾನಿಟೈಸರ್ ಗಳನ್ನು ವಿತರಿಸಿದ ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಸ್ವಾಮಿ. ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಎನ್. ಗೋಪಾಲಕೃಷ್ಣ ಗೌಡ , ಡೆಪ್ಯುಟಿ ಚೇರ್ಮನ್ ಆರ್. ಶ್ರೀನಿವಾಸನ್ , ಖಜಾಂಚಿ ಜಿ.ಶ್ರೀನಿವಾಸ್, ಕಾರ್ಯದರ್ಶಿ ವಿಪಿ ಸೋಮಶೇಖರ್ , ರಾಜ್ಯ ಸಮಿತಿ ಸದಸ್ಯ ನಾಗಶೇಖರ್. ಸದಸ್ಯರುಗಳಾದ ಸೀನಪ್ಪ ವೆಂಕಟ ಕೃಷ್ಣಪ್ಪ. ಶ್ರೀರಾಮರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.
ಇದೇ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ನಾಗೇಶ್ ರವರನ್ನು ಭೇಟಿ ಮಾಡಿ ಮಾಸ್ಕ್ ನೀಡಿದರು. ಎಲ್ಲರೂ ಮಾಸ್ಕ್ ಧರಿಸುವ ಮೂಲಕ ವಾಸ್ತು ದಿನಾಚರಣೆ ದಿನಾಚರಣೆಗೆ ಅರ್ಥ ಕಲ್ಪಿಸಿ ಆರೋಗ್ಯವಂತರಾಗಲು ಸಚಿವರು ಕರೆ ನೀಡಿದರು.

ಚಿತ್ರ : ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ಮಾಸ್ಕ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.