ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 40 ಎಕರೆ ಜಮೀನು ಮಂಜೂರು ಮಾಡಿ ಜಾಗದ ಸಮಸ್ಯೆ ಬಗೆ ಹರಿಸಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 40 ಎಕರೆ ಜಮೀನು ಮಂಜೂರು ಮಾಡಿ ಜಾಗದ ಸಮಸ್ಯೆ ಬಗೆ ಹರಿಸಿ

 

 

ಕೋಲಾರ : ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಗೆ 40 ಎಕರೆ ಜಮೀನು ಮಂಜೂರು ಮಾಡಿ ಜಾಗದ ಸಮಸ್ಯೆ ಬಗೆ ಹರಿಸಿ, ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದಿಂದ ಟೋಮೋಟೋ ಸಮೇತ ಮಾಲೂರು ಸರ್ಕಲ್‍ನಲ್ಲಿ ಬಂದ್ ಮಾಡುವ ಮುಖಾಂತರ ತಹಸೀಲ್ದಾರ್ ರವರಿಗೆ ಮನವಿ ನೀಡಿ, ಆಗ್ರಹಿಸಲಾಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಸತತವಾದ ಬರಗಾಲ ಹಾಗೂ ಅತಿವೃಸ್ಟಿ ಅನಾವೃಸ್ಟಿ ಮತ್ತಿತರ ಜ್ವಲಂತ ಸಮಸ್ಯೆಗಳಿಂದ್ದರೂ ಕಷ್ಟಾಪಟ್ಟು ಬೆಳೆದಂತಹ ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗಬೇಕಾದರೆ ಮೂಲಭೂತ ಸೌಕರ್ಯಗಳಿರುವ ಮಾರುಕಟ್ಟೆ ವ್ಯವಸ್ಥೆ ಇರಬೇಕು. ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದು ಪ್ರಸಿದ್ದಿ ಪಡೆಯುವ ಜೊತೆಗೆ ನೂರಾರು ಕೋಟಿ ವ್ಯವಹಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದ ಸಮಸ್ಯೆ ಸತತ ಐದು ವರ್ಷಗಳಿಂದ ಸಂಬಂಧಪಟ್ಟ ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಗಮನಕ್ಕೂ ತಂದರೂ 40 ಎಕರೆ ಜಮೀನು ಮಂಜೂರು ಮಾಡಲು ಮೀನಾಮೇಷ ಏಣಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಿ ಜಮೀನು ವರ್ಷಾನುಗಟ್ಟಲೆ ಹುಡುಕಿದರೂ ಅಂಗೈ ಅಗಲ ಜಾಗ ಸಿಗುವುದಿಲ್ಲ. ಆದರೆ ರಿಯಲ್ ಎಸ್ಟೇಟ್ ದಂದೆಕೋರರಿಗೆ ಸಾವಿರಾರು ಎಕರೆ ಗೋಮಾಳ ಜಮೀನು ಮಂಜೂರು ಮಾಡಲು 24 ಗಂಟೆಯಲ್ಲಿ ನಿಯತ್ತಾಗಿ ಮಂಜೂರು ಮಾಡಿಸಿ ಅವರ ಮನೆ ಬಾಗಲಿಗೆ ದಾಖಲೆಗಳನ್ನು ತಲುಪಿಸುವ ದೊಡ್ಡ ಜಾಲವೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಾಗ ಕೊಡಿ ಸ್ವಾಮಿ ಎಂದು 5 ವರ್ಷಗಳಿಂದ ಅಂಗಲಾಚಿದರೂ ಅದರ ಕಡೆ ಗಮನ ಕೊಡದೆ ರೈತರು ಬೆಳೆದ ಟೆಮೆಟೋ ಪ್ರತಿ ವರ್ಷ ಅವಕ ಹೆಚ್ಚಾದಾಗ ಅವರು ಪಡುವ ಪಾಡು ಏಳಕೇಳಲಾರದು ಜಾಗದ ಸಮಸ್ಯೆಯಿಂದ ಮಂಡಿ ಮಾಲೀಕರಿಗೆ ದಲ್ಲಾಳಿಗಳಿಗೆ ತೊಂದರೆಯಾಗುವ ಜೊತೆಗೆ ರೈತರಿಗೆ ಅತಿ ಹೆಚ್ಚು ಸಮಸ್ಯೆಯಾಗಿ ಉತ್ತಮವಾದ ಬೆಲೆ ಇದ್ದರು. ಜಾಗದ ಸಮಸ್ಯೆಯಿಂದ ಪ್ರತಿ ಬಾಕ್ಸ್ ಮೆಲೆ 50 ರೂಪಾಯಿ ಕಡಿತ ಮಾಡುವ ಜೊತೆಗೆ ಸಮಯಕ್ಕೆ ಸರಿಯಾಗಿ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ. ಟ್ರಾಪಿಕ್ ಜಾಮ್‍ನಿಂದ ದಲ್ಲಾಳಿಗಳು ಕೇಳುವ ಬೆಲೆಗೆ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಇದ್ದರೂ ಅಧಿಕಾರಿಗಳು ಮೌನವಾಗಿರುವುದಕ್ಕೆ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಜಿಲ್ಲಾಡಳಿತ ಸೂಕ್ತ ಜಾಗವನ್ನು ಗುರುತಿಸಿ ತರಕಾರಿ ಮತ್ತು ಟೊಮೋಟೋ ಜಾಗವನ್ನು ಬೇರೆ ಬೇರೆ ಮಾಡದೇ ಹೋದರೆ ಮಾರುಕಟ್ಟೆ ಪಕ್ಕದ ಆಂದ್ರ ರಾಜ್ಯಕ್ಕೆ ವರ್ಗಾವಣೆಯಾಗುವ ಬೀತಿಯೂ ಎದ್ದು ಕಾಣುತ್ತಿದೆ. ಮಾರುಕಟ್ಟೆ ಸ್ಥಳವಕಾಶ ನೀಡದೇ ಇದ್ದರೇ ಇದರ ಲಾಭ ಪಡೆಯಲು ಪಕ್ಕದ ರಾಜ್ಯದವರು ಜಿಲ್ಲೆಯ ತರಕಾರಿ ಬೆಳೆಗಾರರಿಗೆ ಗುಣಮಟ್ಟದ ಮಾರುಕಟ್ಟೆ ಕಲ್ಪಿಸಲು ಮುಂದಾಗುತ್ತಿದ್ದು, ಇದು ನಡೆದರೆ ಸರ್ಕಾರಕ್ಕೆ ಬರುವ ಕೋಟ್ಯಾಂತರ ರೂಪಾಯಿ ಆದಾಯ ಕೈತಪ್ಪುತ್ತದೆ. ಹಾಗೂ ಜಿಲ್ಲೆಯ ರೈತರಿಗೆ ಸಾಗಾಣಿಕೆ ಮತ್ತು ಮಾರುಕಟ್ಟೆ ದುಬಾರಿಯಾಗಿ ಪರಿಗಣಿಸುತ್ತದೆ. ಪಕ್ಕದ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಸುಮಾರು 200 ಎಕರೆ ಜಮೀನಿನಲ್ಲಿ ಮಾರುಕಟ್ಟೆಯ ಅಭಿವೃದ್ಧಿ ಪಡಿಸುತ್ತಿದ್ದಾರೆ. ಕೋಲಾರ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರು ಹೊರ ರಾಜ್ಯದ ಮಾರುಕಟ್ಟೆಯನ್ನು ಅವಲಂಭಿಸಬೇಕಾಗುತ್ತದೆ. ಜೊತೆಗೆ ಜಿಲ್ಲಾಧ್ಯಂತ ಸಾವಿರಾರು ಎಕರೆ ಗೋಮಾಳ ಅರಣ್ಯ ಭೂಮಿ ಕೆರೆ ಅಂಗಳಗಳು ಒತ್ತುವರಿ ಮಾಡಿಕೊಂಡು ಪ್ರಭಾವಿಗಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ ಮಾರುಕಟ್ಟೆಗೆ ಗುರುತಿಸಿರುವ ಮಂಗಸಂದ್ರದ 40 ಎಕರೆ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ಮಾಡುತ್ತಿದ್ದಾರೆ. ಇವರ ಅರಣ್ಯ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ನುಂಗಿ ನೀರು ಕುಡಿಯುತ್ತಿದ್ದಾರೆ. ಮತ್ತೊಂದಡೆ ಜಿಲ್ಲೆಯ ಕೆರೆಗಳು ರಾತ್ರೋರಾತ್ರಿ ಮಾಯವಾಗುತ್ತಿವೆ. ಆದರೆ ಚಲುವನಹಳ್ಳಿಯ 40 ಎಕರೆ ಜಮೀನು ಕೆರೆ ಅಂಗಳ ಎಂದು ಅಧಿಕಾರಿಗಳು ಜಿಲ್ಲಾಡಳಿತದ ದಿಕ್ಕು ತಪ್ಪಿಸುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸುವ ಜೊತೆಗೆ ಒಂದು ವಾರದೊಳಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆ ಹರಿಸದೇ ಹೋದರೆ ಟೆಮೋಟೋ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್‍ಮಾಡುವ ಎಚ್ಚರಿಕೆಯನ್ನು ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಿತ ರವರು ಟೆಮೊಟೋ ಮಾರುಕಟ್ಟೆಯ ಜಾಗದ ಸಮಸ್ಯೆ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅತಿ ಶೀಘ್ರದಲ್ಲಿಯೇ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ,ಹಲ್ಕೂರ್ ಹರಿಕುಮಾರ್, ಮಾಈಕಂಬಳ್ಳಿ ಮಂಜುನಾಥ, ಅನುಶ್ರೀ, ಕಾವ್ಯಾಂಜಲಿ, ನಳಿನಿ,ವಿ. ವರಮಹಾಲಕ್ಷಿ, ವಕ್ಕಲೇರಿ ಹನುಮ್ಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಐತಂಡಹಳ್ಳಿ ಮಂಜುನಾಥ, ಸುಪ್ರೀಂಚಲ, ಸುಧಾಕರ್, ಮುಂತಾದವರಿದ್ದರು,