ಬಡ್ಡಿಮನ್ನಾ ಯೋಜನೆ ಸದುಪಯೋಗಕ್ಕೆ ಸಲಹೆ – ಕೆ.ಸಿ ಯತೀಶ್ ಕುಮಾರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

ಬಡ್ಡಿಮನ್ನಾ ಯೋಜನೆ ಸದುಪಯೋಗಕ್ಕೆ ಸಲಹೆ – ಕೆ.ಸಿ ಯತೀಶ್ ಕುಮಾರ್

 

 

 

ಕೋಲಾರ : ಜಿಲ್ಲೆಯ ರೈತರು ಸರ್ಕಾರದ ಬಡ್ಡಿ ಮನ್ನಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳವ ಮೂಲಕ ಆರ್ಥಿಕ ಲಾಭ ಹೊಂದಬೇಕು ಎಂದು ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ಕಾಸ್ಕಾರ್ಡ್ ಬ್ಯಾಂಕ್) ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ಸಿ ಯತೀಶ್ ಕುಮಾರ್ ಹೇಳಿದರು

ಇಂದು ಜಿಲ್ಲಾ ಯೂನಿಯನ್ ಸಭಾಂಗಣದಲ್ಲಿ ನಡೆದ ಬ್ಯಾಂಕ್‍ಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಾರ್ಚ್ ಅಂತ್ಯಕ್ಕೆ 405 ರೈತರು2.57 ಕೋಟಿ ರೂ ಬಡ್ಡಿ ಮನ್ನಾ ಪಡೆದುಕೊಂಡಿದ್ದಾರೆ. ಪ್ರಸ್ತುತ 1257 ರೈತರು 12.09 ಕೋಟಿ ಸಾಲ ಕಟ್ಟಿದ್ದಾರೆ. 12.35 ಕೋಟಿ ರೂ ಬಡ್ಡಿ ಮನ್ನಾ ಸಿಗುವುದರಿಂದ ಜೂನ್ 30 ರೊಳಗೆ ಅಸಲು ಪಾವತಿ ಮಾಡಬೇಕೆಂದು ಮನವಿ ಮಾಡಿದರು.

ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಯಲವಾರು ಸೊಣ್ಣೇಗೌಡ ಮಾತನಾಡಿ, ಬಡ್ಡಿ ಮನ್ನಾ ಯೋಜನೆಯಲ್ಲಿ ಕಾಸ್ಕಾರ್ಡ್ ಬ್ಯಾಂಕ್ ರೈತರನ್ನು ಸೇರಿಸುವ ಮೂಲಕ ಸೌಲಭ್ಯ ಒದಗಿಸಲಾಗಿದ್ದರೂ ಕೇವಲ 405 ರೈತರು ಮಾತ್ರವೇ ಸಾಲ ಮರುಪಾವತಿ ಮಾಡಿದ್ದು ಉಳಿದವರು ಸಹ ಯೋಜನೆಯ ಸದುಪಯೋಗ ಮಾಡಿಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.

ಪ್ರಸುತ್ತ ಕರೋನ ತುರ್ತು ಪರಿಸ್ಥಿತಿ ಇರುವುದರಿಂದ ಸಾಲ ಕಟ್ಟಲು ಒತ್ತಡ ಹೇರುವಂತಿಲ್ಲ ರೈತರು ಸ್ವಯಂ ಪ್ರೇರಿತವಾಗಿ ಹಣ ಪಾವತಿಸುವ ಮೂಲಕ ಋಣಮುಕ್ತರಾಗಬೇಕೆಂದು ಮನವಿ ಮಾಡಿದರು.

ಉಪಮುಖ್ಯ ವ್ಯವಸ್ಥಾಪಕಿ ಲತಾ ಪಾಟೀಲ್, ಜಿಲ್ಲಾ ವ್ಯವಸ್ಥಾಪಕಿ ಸುರೇಶ ಬಾಬು, ಮುಳಬಾಗಿಲು ಬ್ಯಾಂಕ್ ಅದ್ಯಕ್ಷ ರಾಜೇಂದ್ರ ಗೌಡ ಬಂಗಾರಪೇಟೆ ಅದ್ಯಕ್ಷ ನಾರಾಯಣಸ್ವಾಮಿ, ಮಾಲೂರು ಅದ್ಯಕ್ಷ ರಾಮಸ್ವಾಮಿ ಶಿಡ್ಲಘಟ್ಟ ಬ್ಯಾಂಕ ಅದ್ಯಕ್ಷ ನಾರಾಯಣಸ್ವಾಮಿ ಕೋಲಾರ ಬ್ಯಾಂಕ್ ಶಶಿಧರ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.