ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೋನಾ ಲಾಕ್ಡೌನ್ ನಂತರ ಕಲಾವಿದರ ಜೀವನ ದುಸ್ತರ – ಕೆ.ಗೌತಮ್
ಕೋಲಾರ : ಕಲೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಜಿಲ್ಲೆಯ ಅನೇಕ ಕಲಾವಿದರಿಗೆ ಸರ್ಕಾರ ನೀಡುವ ಕಾರ್ಯಕ್ರಮಗಳು ಹಾಗೂ ಬೇರೆ ಯಾವುದೇ ಖಾಸಗಿಕಾರ್ಯಕ್ರಮಗಳು ಇಲ್ಲದೆ ಕಲಾವಿದರು ಜೀವನ ನಡೆಸಲು ಕಷ್ಟವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಸಿ.ಟಿ. ರವಿರವರು ಕಲಾವಿದರಿಗೆ ಬೇಕಾದ ಸವಲತ್ತು ಒದಗಿಸಬೇಕು ಎಂದು ಕೆ.ಗೌತಮ್ ಕೋರಿದ್ದಾರೆ.
ಈಗಾಗಲೇ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಅನುಧಾನ ಘೋಷಣೆ ಮಾಡಿ ಅರ್ಜಿಗಳನ್ನು ಕಲಾದರಿಂದ ಆಹ್ವಾನಿಸಿತ್ತು. ಅದರಂತೆ ಅರ್ಜಿಗಳನ್ನು ಸಲ್ಲಿಸಿದ ಕೋಲಾರ ಜಿಲ್ಲೆಯ ಯಾವ ಕಲಾವಿದನಿಗೂ ಹಣ ಕಲಾವಿದರ ಬ್ಯಾಂಕ್ ಖಾತೆಗಳಿಗೆ ಬಂದಿಲ್ಲ. ಸರ್ಕಾರ ಈ ವಿಚಾರವಾಗಿ ಜರೂರು ಕ್ರಮ ವಹಿಸಲು ಒತ್ತಾಯಿಸಿದ್ದಾರೆ.
ಮಾಲೂರು ತಾಲ್ಲೂಕಿನ ಜಯಮಂಗಲ ಗ್ರಾಮದ ಕೆ.ಗೌತಮ್ ಸುಮಾರು 15 ವರ್ಷಗಳಿಂದ ಸಂಗೀತ ಸೇವೆ ಮಾಡುತ್ತಾ ಬಂದಿದ್ದು, ನಾರಾಯಣಕೆರೆಯ ವಿದ್ವಾನ್ ಶ್ರೀರಾಮರೆಡ್ಡಿ ರವರ ಹತ್ತಿರ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ಕರ್ನಾಟಕ ರಾಜ್ಯಾದ್ಯಂತ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಕ್ತಿಸಂಗೀತ, ವಚನ ಸಂಗೀತ, ತತ್ವಪದ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದಾರೆ.
ಕರೋನಾದಿಂದ ಲಾಕ್ಡೌನ್ ಆದ ಬಳಿಕ ಕಲೆ ಸಂಸ್ಕೃತಿ, ಜಾನಪದ ಸಂಗೀತ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಉಚಿತವಾಗಿ ಸುಮಾರು ನಾಲ್ಕು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ, ಸುಗಮ ಸಂಗೀತ, ತತ್ವಪದಗಳನ್ನು ಕಲಿಸುತ್ತಾ ಕಲೆ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸುಮಾರು ಮೂರು ತಿಂಗಳಿಂದ ಕಲಾವಿದರ ಬದುಕು ದುಸ್ತರವಾಗಿ ಒಂದು ಒತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಾವಿದರ ಮೇಲೆ ದಯೆತೋರಿ ಕಲೆಯನ್ನೆ ನಂಬಿಕೊಂಡು ಜೀವನ ಮಾಡುವ ಕಲಾವಿದರಿಗೆ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವರು ಕಲಾವಿದರಿಗೆ ಬೇಕಾದ ಸವಲತ್ತು ಒದಗಿಸಬೇಕು ಎಂದು ಕೋರಿದ್ದಾರೆ.