ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸುವುದು ನಮ್ಮ ಗುರಿ -ಸಿ ಸತ್ಯಭಾಮ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಿಸುವುದು ನಮ್ಮ ಗುರಿ -ಸಿ ಸತ್ಯಭಾಮ

 

 

 

 

ಕೋಲಾರ: ಕೋಲಾರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾನ್ನಾಗಿ ಮಾಡುವುದು ನಮ್ಮ ಗುರಿ ಎಂದು ಜಿಲ್ಲಾದಿಕಾರಿಗಳಾದ ಸಿ ಸತ್ಯಭಾಮ ತಿಳಿಸಿದ್ದಾರೆ

ಇಂದು ತೋಟಗಾರಿಕಾ ಕಾಲೇಜು ಮತ್ತು ಕೆ.ವಿ.ಕೆ.ಕೊಲಾರಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು ಮನುಷ್ಯನು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಪರಿಸರದ ಮುಂದೆ ಎಂದೆಂದಿಗೂ ಶೂನ್ಯನಾಗಿ ಉಳಿಯುತ್ತಾನೆ ಹಾಗೂ ಪರಿಸರದ ವಿರುದ್ಧವಾಗಿ ಮನುಷ್ಯನು ಎಂದೂ ಅಭಿವೃದ್ಧಿ ಹೊಂದಲಾರನು ಎಂಬ ಸಂದೇಶವನ್ನು ನೀಡಿ ಕೋವಿಡ್-19 ವೈರಸ್‍ನಿಂದಾದ ತಡೆಗಟ್ಟುವ ಕ್ರಮಗಳನ್ನು ಹಾಗೂ ಇಲ್ಲಿಯ ವರೆಗೂ ಅದನ್ನು ನಿಯಂತ್ರಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಕೋಲಾರದ ತೋಟಗಾರಿಕಾ ಮಹಾವಿದ್ಯಾಲಯ ಡೀನ್‍ರವರಾದ ಡಾ. ಬಿ. ಜಿ. ಪ್ರಕಾಶ್, ನಿವೃತ್ತ ಡೀನ್‍ರಾದ ಡಾ. ವಿ. ನಾಚೇಗೌಡರವರು, ಕೆ.ವಿ.ಕೆ. ವಿಜ್ಞಾನಿಗಳಾದ ತುಳಸಿ ರಾಮ್ ಸೇರಿದಂತೆ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.