ಆಶಾ ಕಾರ್ಯಕರ್ತರ ಸೇವೆ ಅನನ್ಯ; ಶೋಭಿತಾ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

 

 

ಆಶಾ ಕಾರ್ಯಕರ್ತರ ಸೇವೆ ಅನನ್ಯ; ಶೋಭಿತಾ

 

 

 

ಕೋಲಾರ ಮೇ 26. : ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಆಶಾ ಕಾರ್ಯಕರ್ತರ ಪಾತ್ರ ಶ್ಲಾಘನೀಯವಾಗಿದ್ದು ಅವರ ಸೇವೆ ಅನನ್ಯ ಎಂದು ತಾಲೂಕು ತಹಸೀಲ್ದಾರ್ ಶೋಭಿತಾ ತಿಳಿಸಿದರು
ತಾಲ್ಲೂಕಿನ ಆಶಾ ಕಾರ್ಯಕರ್ತರಿಗೆ ಇಂದು ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಂಸ್ಥೆ ನೀಡಿದ ಉಚಿತ ಆಹಾರ ಕಿಟ್ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು .
ನಾವು ಮತ್ತು ಸಮಾಜ ಜವಾಬ್ದಾರಿಯಲ್ಲಿ ತಮ್ಮನ್ನು ತಾವು ನಡೆದುಕೊಳ್ಳಬೇಕು ಸರ್ಕಾರದ ನೀತಿ ನಿಯಮಗಳನ್ನು ಅನುμÁ್ಠನಗೊಳಿಸುವುದು ನಮ್ಮ ಜವಾಬ್ದಾರಿ ಆಗಬೇಕು ಎಂದರು .
ಆಶಾ ಕಾರ್ಯಕರ್ತರು ಸಾಮಾಜಿಕ ಜವಾಬ್ದಾರಿ ಮತ್ತು ಅಂತರದಿಂದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಅಲ್ಲಿನ ಆರೋಗ್ಯ ವಿಚಾರದಲ್ಲಿ ಸಮಾಲೋಚನೆ ನಡೆಸಿ ಅನುಕೂಲ ಕಲ್ಪಿಸುತ್ತಿದ್ದಾರೆ ಇಂತಹ ಅವರ ಸೇವೆಯನ್ನು ಮುಕ್ತಕಂಠದಿಂದ ಅಭಿನಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು .
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ ರತ್ನಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರೋನಾ ಎಂಬ ಮಹಾಮಾರಿಯನ್ನು ಓಡಿಸಲು ನಾವು ನೀವೆಲ್ಲ ಕಂಕಣ ಬದ್ಧರಾಗಿ ದುಡಿಯಬೇಕು ಮತ್ತು ಸಮಾಜದ ಎಲ್ಲ ವರ್ಗದ ಜನ ಈ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೋಲಾರ ಜಿಲ್ಲಾ ಚೇರ್ಮನ್ ಎನ್ ಗೋಪಾಲ ಕೃμÉ್ಣೀಗೌಡ ಮಾತನಾಡಿ ಭಾರತೀಯ ರೆಡ್ಕ್ರಾಸ್ ಸಂಸ್ಥೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಜನಸಾಮಾನ್ಯರ ಕೈ ಸೇರುವಲ್ಲಿ ಶ್ರಮಿಸುತ್ತಿದ್ದು ಈ ದೆಸೆಯಲ್ಲಿ ಜಿಲ್ಲೆಯಾದ್ಯಂತ ಆಶಾ ಕಾರ್ಯಕರ್ತರಿಗೆ ನೆರವು ನೀಡುತ್ತಿರುವುದಾಗಿ ತಿಳಿಸಿದರು . ತಮ್ಮ ಆರೋಗ್ಯವನ್ನು ಚಿಂತಿಸದೆ ಇತರರ ಆರೋಗ್ಯ ಕಡೆ ಹೆಚ್ಚು ಗಮನಿಸುವ ಆಶಾ ಕಾರ್ಯಕರ್ತರು ನಿಜಕ್ಕೂ ಅಭಿನಂದನಾರ್ಹರು ಇವರ ಸೇವೆಗೆ ಎಲ್ಲರೂ ಗೌರವ ನೀಡಬೇಕು ಎಂದರು .
ಆಹಾರ ಕಿಟ್ ,ಮಾಸ್ಕ್ ಗಳನ್ನು ವಿತರಿಸಿದ ಈ ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಡೆಪ್ಯೂಟಿ ಚೇರ್ಮನ್ ಆರ್ ಶ್ರೀನಿವಾಸನ್ ,ಕಾರ್ಯದರ್ಶಿ ವಿಪಿ ಸೋಮಶೇಖರ್, ಕೋಶಾಧ್ಯಕ್ಷ ಜಿ ಶ್ರೀನಿವಾಸ್ ,ರಾಜ್ಯ ಸಮಿತಿ ಸದಸ್ಯ ನಾಗಶೇಖರ್,ನಗರಸಭೆ ಸದಸ್ಯ ಗುಣಶೇಖರ್ ,ರೋಟರಿ ಸೆಂಟ್ರಲ್ ಅಧ್ಯಕ್ಷ ವಿಶ್ವನಾಥ್ , ಆಶಾ ಕಾರ್ಯಕರ್ತರ ಮುಖ್ಯಸ್ಥರಾದ ಅಂಜಲಿ ,ಅನಿತಾ ಕುಮಾರಿ, ಸಂಸ್ಥೆಯ ಸದಸ್ಯರುಗಳಾದ ವೆಂಕಟಕೃಷ್ಣ ಸೀನಪ್ಪ ,ಮುರಳಿ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.