ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ಕೋವಿಡ್ -19 ಜಗತ್ತಿನಾದ್ಯಂತ ಸಂಕಷ್ಟ ಸೃಷ್ಟಿಸಿದ್ದು ಎಲ್ಲ ರೀತಿಯ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ
ಶ್ರೀನಿವಾಸಪುರ : ಕೋವಿಡ್ -19 ಜಗತ್ತಿನಾದ್ಯಂತ ಸಂಕಷ್ಟವನ್ನು ಸೃಷ್ಟಿಸಿದ್ದು ಎಲ್ಲ ರೀತಿಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ.
ಸೋಮವಾರ ಶ್ರೀನಿವಾಸಪುರದಲ್ಲಿ ಈದುಲ್ ಫೀತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಯಾವುದೇ ಸಡಗರ ಸಂಭ್ರಮಗಳಿಲ್ಲದೆ ಆಚರಿಸಲಾಯಿತು. ಈದ್ಗಾ ಮತ್ತು ಮಸೀದಿಗಳಲ್ಲಿ ನಿರ್ವಹಿಸಲ್ಪಡುವ ಈದ್ ವಿಶೇಷ ಪ್ರಾರ್ಥನೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಶ್ರೀನಿವಾಸಪುರದಲ್ಲಿ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಈದ್ ಪ್ರಾರ್ಥನೆ ಸಲ್ಲಿಸಿ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್(ದೇವನು ಮಹಾನನು) ಎಂಬ ಮಂತ್ರಘೋಷವನ್ನು ಮೊಳಗಿಸಿದರು.
ಸೋಮವಾರ ಬೆಳಿಗ್ಗೆ 6:00 ಗಂಟೆಯಿಂದ ಪ್ರತಿಯೊಂದು ಮನೆಯಲ್ಲೋ ತಮ್ಮ ಕುಟುಂಬದ ಸದಸ್ಯರೊಡನೆ ನಮಾಝ್ ನಿರ್ವಹಿಸುವುದರ ಮೂಲಕ ಕೊರೋನಾ ಸಂಕಷ್ಟದಿಂದ ಜಗತ್ತನ್ನು ಪಾರು ಮಾಡುವಂತೆ ಸೃಸ್ಟಿಕರ್ತನಲ್ಲಿ ಮೊರೆಯಿಟ್ಟು ಕಣ್ಣೀರು ಹಾಕಿದರು.
ಇಂದು ಸಂಪೂರ್ಣ ಲಾಕ್ಡೌನ್ ಪಾಲನೆ ಮಾಡುವೊದರೊಂದಿಗೆ.
ರಮಝಾನ್ ತಿಂಗಳ ಪೂರ್ತಿ ಇಲ್ಲಿ ಯಾವುದೇ ರೀತಿಯ ಸಾಮೂಹಿಕ ಪ್ರಾರ್ಥನೆಗಳು ನಡೆಯದೆ ಮಸೀದಿಗಳಿಗೆ ಬೀಗ ಬಿದ್ದಿತ್ತು. ಇಂದು ಇಲ್ಲಿನ ಚಿಂತಾಮಣಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿ ಈದ್ಗಾ ಮೈದಾನದಲ್ಲಿ 10ಸಾವಿರಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಲಾಕ್ಡೌನ್ ನಿಂದಾಗಿ ಈದ್ಗಾ ಮೈದಾನ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.