ಕುಡಿದ ಅಮಲಿನಲ್ಲಿ ಹಾವನ್ನು ಕಚ್ಚಿ ಕೊಂದು ತಿಂದ ವಿಕ್ರತ ಕುಮಾರನ ಬಂದನ

JANANUDI.COM NETWORK

 

 

ಕುಡಿದ ಅಮಲಿನಲ್ಲಿ ಹಾವನ್ನು ಕಚ್ಚಿ ಕೊಂದು ತಿಂದ ವಿಕ್ರತ ಕುಮಾರನ ಬಂದನ 

 

 

 

ಹಾಸನ, ಮೇ. 7: ಲಾಖ್ ಡೌನ್ ನಲ್ಲಿ ಮದ್ಯದ ಅಂಗಡಿಗಳು ಮುಚ್ಚಲಾಗಿದ್ದು, ಮದ್ಯದ ಅಂಗಡಿಗಳನ್ನು ತೆರೆದ ಕೂಡಲೆ, ಕೊಲೆ, ಹೊಡೆದಾಟ, ದಾರಿ ಮೇಲೆ ಬೀಳುವುದು, ರಸ್ತೆ ಬದಿಯಲ್ಲಿ ಸತ್ತು ಬೀಳುವುದು ಇವೆಲ್ಲಾ ಅವಾಂತರಗಳು ದೇಶದಲ್ಲೆಡೆ ಆಗುತಲೇ ಇವೆ..
ಆದರೆ ಕರ್ನಾಟಕದಲ್ಲಿ ಒಂದು ವಿಕ್ರತ ಘಟನೆ ನಡೆಸಿದೆ. ಮುಳುಬಾಗಿಲನಲೊಬ್ಬ ಮದ್ಯದ ಅಂಗಡಿಗೆ ಹೋಗಿ ಮದ್ಯ ಕುಡಿದು ದಾರಿಯಲ್ಲಿ ವಾಪಸು ಆಗುತ್ತಿದ್ದಾಗ ಹಾವನ್ನು ಕಂಡು ಅದನ್ನು ಹಿಡಿದು, ಕುಡಿದ ಮತ್ತಿನಲ್ಲಿ, ಅವನ ಬೈಕಿನಲ್ಲಿ ಕುಳಿತು ಹಾವನ್ನು ಆತನ ಕುತ್ತಿಗೆಗೆ ಹಾರದಂತ್ತೆ ಹಾಕಿಕೊಂಡು ಸಾರ್ವಜನಿಕರಿಗೆ ಪ್ರದರ್ಶನ ಕೊಡುವಂತ್ತೆ ಆ ಹಾವನ್ನು ಕಚ್ಚಿ ಕಚ್ಚಿ ಅದರ ಚರ್ಮವನ್ನು ಸುಲಿದು ತಿನ್ನುವ ಪ್ರಸರ್ಶನ ನೀಡಿದ್ದ. ಆ ದ್ರಶ್ಯವನ್ನು ನೋಡಿದರೆ ಅಸಯ್ಯವಾಗಿ ಮೈ ಜುಮ್ಮೆನ್ನುತಿತ್ತು.

ಈ ರೀತಿ ವಿಕ್ರತವಾಗಿ ಜೀವಂತ ಹಾವನ್ನು ತಿನ್ನುತಿದ್ದಾಗ ಆತನ ಬೈಕ್ ಚಾಲು ಇದ್ದು ನ್ಯೂಟ್ರೋಲ್ ಮಾಡಿ ಇಟ್ಟುಕೊಂಡಿದ್ದ, ಬೈಕ್ ಎಂಜಿನ್ ಬಂದ್ ಬೀಳುವಂತ ಸ್ಥಿತಿಗೆ ಬರುವಾಗ ಬೈಕಿನ ಎಕ್ಷಿಲೇಟರ್ ಜಾಸ್ತಿ ಮಾಡಿ ಬೈಕ್ ಚಾಲು ಸ್ಥಿಯಲ್ಲಿ ಇಡಲು ಪ್ರಯತ್ನಿಸುತಿದ್ದ, ಇದು ನೋಡಿದರೆ, ಆತ ಕುಡಿದ ಅಮಲಿನಲ್ಲಿದ್ದರೂ, ಆತನಿಗೆ ಸಾಮನ್ಯ ಜ್ಞಾನ ಇತ್ತು ಅಂತಲೇ ಹೇಳಬೇಕು.
ಇದೀಗ ಆ ಆರೋಪಿಯನ್ನು ಅರಣ್ಯ ಇಲಾಖೆಯವರು ವನ್ಯ ಪ್ರಾಣಿ ಕೊಲೆಯ ಆರೋಪವನ್ನು ಹೊರಿಸಿ ಬಂದಿಸಲಾಗಿದೆ. ಆರೋಪಿಯನ್ನು ಹಾಸನ ಜಿಲ್ಲೆಯ ಮುಳಬಾಗಿಲಿನ ಮುಸ್ತುರು ಗ್ರಾಮದ ಕುಮಾರ್ (38) ಎಂದು ಗುರುತಿಸಲಾಗಿದೆ. ಆತನು ಕಚ್ಚಿ ತಿನ್ನುತಿದ್ದ ಹಾವು ಕೆರೆಹಾವು ಎಂದು ತಿಳಿದು ಬಂದಿದೆ.