ಕುಂದಾಪುರ: ಕುಸಿದು ಬಿರುಕು ಬಿಡುತ್ತಿರುವ ಚರ್ಚ್ ರೋಡ್ ಕಾಂಕ್ರೀಟ್ ರಸ್ತೆ.

ವರದಿ:ಜೋಯ್ ಕರ್ವಾಲ್ಲೊ, ಕುಂದಾಪುರ

 

 

ಕುಂದಾಪುರ: ಕುಸಿದು ಬಿರುಕು ಬಿಡುತ್ತಿರುವ ಚರ್ಚ್ ರೋಡ್ ಕಾಂಕ್ರೀಟ್ ರಸ್ತೆ.

 

 

 

 

ಕುಂದಾಪುರ,ಮೇ  2 : ಸುಮಾರು 15 ವರ್ಷಗಳ ಹಿಂದೆ ಅತ್ಯುತ್ತಮ ಗುಣಮಟ್ಟದ ಕಾಮಗಾರಿಯಿಂದ ನಿರ್ಮಾಣವಾದ  ಕಾಂಕ್ರೀಟ್ ರಸ್ತೆ,  ಚರ್ಚ್ ರಸ್ತೆಯ ಇಂಪೀರಿಯಲ್ ವಸತಿ ಸಮುಚ್ಚಯದ ಎದುರಿನ ಇಳಿಜಾರುವಿನಲ್ಲಿ  ಕಳೆದ ಒಂದು ವರ್ಷದಿಂದ ಒಳಚರಂಡಿ ಕಾಮ್ಗಾರಿಕೆಗಾಗಿ  ರಸ್ತೆ ಕೊಯ್ಯುವಿಕೆಯ ಅವಾಂತರದಿಂದ ರಸ್ತೆಯು ಈಗ ಕುಸಿತ ಹಾಗೂ ಬಿರುಕು ದೊಡ್ಡದಾಗುತ್ತಾ ಇದೆ.

    ಇದು ಈಗ ಸೈಕಲ್ , ಬೈಕ್ ಸವಾರರಿಗೆ ಈ ಬಿರುಕಿನಲ್ಲಿ ಟಯರ್ ಸಿಕ್ಕ್ಕಿ ಬಹಳ ಅಪಾಯ ತಂದೊಡ್ಡಲಿದೆ. ಎರಡು ವರ್ಷಗಳ ಹಿಂದೆ ಒಳಚರಂಡಿಯ ಕೊಳವೆ ಅಳವಡಿಸಲು ಮಾಡಿದ ರಸ್ತೆ ‌ಕೊಯ್ಯುವಿಕೆ ಕಾಮಗಾರಿ ಮುಂದುವರಿಯದೆ ಹಾಗೇ ಬಿಟ್ಟಿರುವ ಕಾರಣ ಹಾಗೂ ಅಂತರಿಕ ನೀರು ಹರಿಯುವಿಕೆಯಿಂದ ಈ ಸಮಸ್ಯೆ ಉಂಟಾಗಿದೆ. ಶೀಘ್ರವಾಗಿ ಸ್ಥಳೀಯಾಡಳಿತ ಈ ಭಾಗದ ರಸ್ತೆ ಸರಿಪಡಿಸದಿದ್ದರೆ ಬರುವ ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಕುಸಿದು ಬಿರುಕುಗಳು ಅಗಲವಾಗಿ ವಾಹನಗಳಿಗೆ , ಪಾದಚಾರಿಗಳಿಗೆ ಅಪಾಯವಾಗಲಿದೆ. ದಯವಿಟ್ಟು ಬೇಗನೆ ಅಧಿಕಾರಿಗಳು ಗಮನ ಹರಿಸಬೇಕು. ಸಂಬಂಧ ಪಟ್ಟವರು ನೋಡಿಯೂ ನೋಡಿಲ್ಲದಂತ್ತೆ ವರ್ತಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜನರು ಕೂಡ ಜಾಗ್ರತಿಯನ್ನು ಬೆಳೆಸಿಕೊಳ್ಳಬೇಕು.