ಶ್ರೀನಿವಾಸಪುರ ಹವಮಾನ ವೈಪರಿತ್ಯ ಮಾವಿನ ಫಸಲು ಈ ವರ್ಷ ಶೇ.25ರಷ್ಟು ಮಾತ್ರ, ಹಣ್ಣಿಗೆ ನೊಣ ಕೀಟಭಾದೆ ಕಾಟ ರಕ್ಷಿಸಿಕೊಳ್ಳದಿದ್ದರೆ ಗುಣಮಟ್ಟಕ್ಕೆ ಹಾನಿ ಬೆಲೆಕುಸಿತಕ್ಕೆ ಕಾರಣ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಶ್ರೀನಿವಾಸಪುರ ಹವಮಾನ ವೈಪರಿತ್ಯ ಮಾವಿನ ಫಸಲು ಈ ವರ್ಷ ಶೇ.25ರಷ್ಟು ಮಾತ್ರ, ಹಣ್ಣಿಗೆ ನೊಣ ಕೀಟಭಾದೆ ಕಾಟ ರಕ್ಷಿಸಿಕೊಳ್ಳದಿದ್ದರೆ ಗುಣಮಟ್ಟಕ್ಕೆ ಹಾನಿ ಬೆಲೆಕುಸಿತಕ್ಕೆ ಕಾರಣ

 

 

ಶ್ರೀನಿವಾಸಪುರ ಅವಮಾನ ವೈಪರಿತ್ಯದಿಂದ ಈ ವರ್ಷ ಶೇ.25ರಷ್ಟು ಮಾವಿನ ಫಸಲು ಇರುವುದರಿಂದ ಇವರವ ಮಾವಿನ ಹಣ್ಣಿಗೆ ನೊಣದ ಭಾದೆ ಹಾಗೂ ಕೀಟಭಾದೆ ಕಾಡುತ್ತಿದ್ದು ಇದನ್ನು ರಕ್ಷಿಸಿಕೊಳ್ಳದಿದ್ದರೆ ಗುಣಮಟ್ಟಕ್ಕೆ ಹಾನಿಯಾಗಿ ಬೆಲೆಕುಸಿತಕ್ಕೆ ಕಾರಣವಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕ ಹಾಗೂ ಮಾವು ಅಭಿವೃದ್ದಿಕೇಂದ್ರ ಉಪನಿರ್ದೇಕರಾಧ ಎಸ್.ಟಿ. ಬಾಲಕೃಷ್ಣ ರೈತರಿಗೆ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಇರುವ ಫಸುಲಿಗೆ ನೊಣದ ಭಾದೆ ಕಾಡುತ್ತಿದೆ. ಹಣ್ಣಿಗೆ ನೊಣಬಿದ್ದಿದರೆ ಅದನ್ನು ಕಿತ್ತು ಭೂಮಿಯಲ್ಲಿ ಹೂತು ನಾಷಪಡಿಸಬೇಕು. ನೊಣದ ಸಂತಾನಾಭಿವೃದ್ಧಿಗೆ ಕಡಿವಾಣ ಹಾಕಬೇಕಾದರೆ ಮೋಹಕ ಬಲೆಗಳನ್ನು ತೋಟಗಳಲ್ಲಿ ಮರಗಳ ಕೊಂಬೆಗಳಿಗೆ ಕಟ್ಟಬೇಕು. ಅದಕ್ಕೆ ಮೇಲಾಥಿಯಾನ್ ಅಥವಾ ಡೈಕ್ಲೋರೋಪಾಸ್‍ನ್ನು ನೆನೆಸಿ ಡಬ್ಬಗಳಲ್ಲಿ ಹಾಕಿ ಭೂಮಿಯಿಂದ 4-5ಅಡಿ ಎತ್ತರದಲ್ಲಿ ಗಾಳಿಗೆ ಅಳಗಾಡದಂತೆ ಕೊಂಬೆಗಳಿಗೆ ಕಟ್ಟುವುದರಿಂದ ಶೇ.90ರಷ್ಟು ನೊಣಗಳನ್ನು ನಾಷಪಡಿಸಬಹುದು.
ಅಥವಾ ಡೆಲ್ಟಾ, ಮೆಥ್ರಿನ್ ಎಂಬ ಔಷಧಿಯನ್ನು ಸಿಂಪಡೆನೆ ಮಾಡಬೇಕು ಅಥವ 10ಗ್ರಾಂ ಬೆಲ್ಲವನ್ನು ಪ್ರತಿಲೀಟರ್‍ಗೆ ಬೆರಸಿ ಸಿಂಪಡನೆ ಮಾಡುವುದರಿಂದ ಗಂಡು ಮತ್ತು ಹೆಣ್ಣು ಹುಳುಗಳು ನಾಷವಾಗುತ್ತವೆ. ಮೋಹಕ ಬಲೆಗಳನ್ನು ಮಾವು ಅಭಿವೃದ್ಧಿ ಕೇಂದ್ರ ಹೊಗಳಗೆರೆಯಲ್ಲಿ ರಿಯಾಯಿತಿ ಧರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದಾರೆ.