ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಸರತಿಯಲ್ಲಿ ನಿಲ್ಲುವರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ ನೇತೃತ್ವದಲ್ಲಿ ಊಟದ ಸೇವೆ

 

JANANUDI.COM NETWORK


 

ಲಾಕ್ ಡೌನ್  ತೊಂದರೆಗೆ ಸಿಲುಕಿದ ವಲಸೆ ಕೂಲಿ ಕಾರ್ಮಿಕರಿಗೆ, ಸರತಿಯಲ್ಲಿ ನಿಲ್ಲುವರಿಗೆ, ಅನಾಥರಿಗೆ: ಕೆ.ಪಿ ಅರುಣ್‌ರವರ ನೇತೃತ್ವದಲ್ಲಿ ಊಟದ ಸೇವೆ 

 

 

 

ಕುಂದಾಪುರ, ಎ.8: ಕೊರೊನಾದಿಂದಾಗಿ ಲಾಕ್ ಡೌನ್ ಮಾಡಿದ್ದರಿಂದ ಹಲವಾರು ಜನ ವಿವಿಧ ರೀತಿಯ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೆಲವು ವಲಸೆ ಕೂಲಿ ಕಾರ್ಮಿಕರು ಅತಂತ್ರ ಸ್ಥಿಯಲ್ಲಿದ್ದು ಹಸಿವೆಯಿಂದ ಇದ್ದಾರೆ. ಕೆಲವರು ಯಾವುದೋ ಕೆಲಸಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಹೋಟೆಲು ತಿನ್ನುವ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದವರಿದ್ದಾರ್, ಕೆಲಸ ಕಾರ್ಯಾಕ್ಕೆ ಹೋಗಿ ಬರುವಂತ ಜನರಿಗೆ ಊಟ ಇಲ್ಲದೆ ಇದ್ದವರಿದ್ದಾರೆ, ಹಾಗೇ ಬಸ್ ಸ್ಟ್ಯಾಂಡ್ ಮತ್ತಿತರ ಕಡೆ ಇರುವ ಅನಾಥರಿದ್ದಾರೆ. ಇಂತವರಿಗಾಗಿ  ಪುರಸಭಾ ವ್ಯಾಪ್ತಿಯ ಚಿಕ್ಕನಸಾಲು ರಸ್ತೆ ವಾರ್ಡಿನ ಕಾಂಗ್ರೆಸ್ ಮುಖಂಡ, ಮೈಲಾರೇಶ್ವರ ಯುವಕ ಸಂಘದ ಮಾಜಿ ಅಧ್ಯಕ್ಷ ಕೆ.ಪಿ ಅರುಣ್‌ರವರು ತಮ್ಮ ಪತ್ನಿಯ ಜೊತೆ ಊಟ ಸಿದ್ದ ಪಡಿಸಲು ಆರಂಭಿಸಿದ್ದಾರೆ ಇವತ್ತು ಮಧ್ಯಾನದ ಉಟವನ್ನು ಹಂಚಲಾಗಿದೆ, ಇದು ಲಾಕ್ ಡೌನ್ ಇರುವ ತನಕ ಮುಂದುವರಿಯುವುದು,

     ಈ ಊಟವನ್ನು ಅವರ  ಮಿತ್ರರಾದ ಸಾಯಿನಾಥ್ ಶೇಟ್  ಹಂಚುವ ವ್ಯವಸ್ಥೆಯ ಹೊಣೆಯನ್ನು ವಹಿಸಿಕೊಂಡಿದ್ದಾರೆ.  ಇವರು ಹಲವು ದಿನಗಳ ಹಿಂದೆಯೇ  ಸಂಕಷ್ಟಕ್ಕೆ ಒಳಗಾದವರಿಗೆ ಚಾ ತಿಂಡಿಯನ್ನು ಹಂಚಲು ಆರಂಭಿಸಿದ್ದರು. ಈ ಪುಣ್ಯ ಕೆಲಸದಲ್ಲಿ ಕೆ.ಪಿ.ಅರುಣ್. ಕೆ.ಪಿ.ಶಿವಪ್ರಸಾದ್ ಮತ್ತು  ಅನಿಲ್ ಕೆ.ಪಿ ಅರುಣ್‌ರವರಿಗೆ ಸಹಕರಿಸುತಿದ್ದಾರೆ.

      ಸಂಕಷ್ಟದಲ್ಲಿ ಸಿಲುಕಿದವರಿಗೆ ಊಟವನ್ನು ಹಂಚುವಂತ ಸೇವಾ ಮನೋಭಾವದರು ಸಾಯಿನಾಥ್ ಶೇಟ್ (9164444049) ಮತ್ತು ಕೆ.ಪಿ ಅರುಣ್‌ (98449 95655) ಇವರನ್ನು ಸಂಪರ್ಕಿಸ ಬಹುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ