ಕೊರೊನ ಮಹಾಮಾರಿಯಿಂದ ಪಿಗ್ಮಿ  ಬಾಳು ಕಷ್ಟಕರವಾಗಿದೆ: ಇತರ ಕಾರ್ಮಿಕರಂತೆ ನಮಗೂ ಪರಿಹಾರ ಸೌಲಭ್ಯಗಳು ದೊರಕಬೇಕು

JANANUDI.COM NETWORK

 

 

ಕೊರೊನ ಮಹಾಮಾರಿಯಿಂದ ಪಿಗ್ಮಿ  ಬಾಳು ಕಷ್ಟಕರವಾಗಿದೆ: ಇತರ ಕಾರ್ಮಿಕರಂತೆ ನಮಗೂ ಪರಿಹಾರ ಸೌಲಭ್ಯಗಳು ದೊರಕಬೇಕು

 

 

 

ಕುಂದಾಪುರ, ಮಾ.28:  ನಾವು ಪಿಗ್ಮಿ ಸಂಗ್ರಾಹಕಾರರು ಪ್ರತಿನಿತ್ಯ ಸಾರ್ವಜನಿಕರಿಂದ ಅಲ್ಪ ಸ್ವಲ್ಪ ಠೇವಣಿ ಸಂಗ್ರಹಿಸಿ,ಸಮಾಜದ ಅಬಿವ್ರದ್ದಿಯ ಜೊತೆಗೆ ನಮ್ಮ ಜೀವನ ನಡೆಸುತ್ತಿದ್ದೇವೆ.ನಾವು ಹೊಟ್ಟೆ-ಬಟ್ಟೆಕಟ್ಟಿ ನಮ್ಮ ಅಲ್ಪ ದುಡಿಮೆಯಲ್ಲಿಯೂ ಕೂಡ, ನಮ್ಮಿಂದ ಸರಕಾರಕ್ಕೆ ಸಮಯಕ್ಕೆ ಸರಿಯಾಗಿ TDS ಹಾಗೂ ಇತರೆ ತೆರಿಗೆಗಳು ಪಾವತಿಯಾಗುತ್ತದೆ.ಆದರೆ ಇಂದು ಕೊರೊನ ಮಹಾಮಾರಿಯಿಂದ ಪಿಗ್ಮಿ ಸಂಗ್ರಾಹಣಿ ನೆಲಕಚ್ಚಿದೆ.ಇಂದು ಪಿಗ್ಮಿ ಸಂಗ್ರಾಹಕಾರರ ಬದುಕು ನರಕಸದ್ರಶವಾಗಿದೆ. ಕೂಲಿ ಕೆಲಸಗಾರರಿಗೆ,ಸರಕಾರಿ ಕೆಲಸಗಾರರಿಗೆ,ಸರಕಾರಗಳು ಮುಂಗಡ ಸಂಬಳ,ಸಂಬಳ ಸಹಿತ ರಜೆ,ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡುತ್ತಿದೆ.
ಆದರೆ ಪಿಗ್ಮಿ ಸಂಗ್ರಾಹಕಾರರಿಗೆ ಯಾವ ಸರಕಾರಗಳೂ ಇಂದಿನವರೆಗೂ ಯಾವ ಸವಲತ್ತುಗಳನ್ನು ಘೋಷಿಸಿಲ್ಲ,ಯಾಕೆ ನಾವೂ ಮನುಷ್ಯರಲ್ಲವೇ,ನಮ್ಮ ಸಂಕಷ್ಟಗಳು ಶಾಸಕರಿಗೆ,ಸಂಸದರಿಗೆ & ಸರಕಾರಗಳಿಗೆ ಕಾಣಿಸುತ್ತಿಲ್ಲವೆ ಅಥವಾ ಕಣ್ಣಿದ್ದು ಕುರುಡರಂತೆ ವರ್ತಿಸಬಾದರು.

ಒಬ್ಬ ಕಾರ್ಖಾನೆ ಕೆಲಸಗಾರನಿಗೂ ಕೂಡ ESI,PF ಸಿಗುತ್ತದೆ. ಆದರೆ ಪಿಗ್ಮಿ ಸಂಗ್ರಾಹಕಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಯಾವುದೇ ಸವಲತ್ತುಗಳು ಇಂದಿನವರೆಗೂ ಇಲ್ಲ ,ಇನ್ನಾದರೂ ಕೇಂದ್ರ & ರಾಜ್ಯ ಸರಕಾರಗಳು ಇತ್ತ ಗಮನ ಹರಿಸಿ ಪಿಗ್ಮಿ ಸಂಗ್ರಾಹಕಾರರ ಸಂಕಷ್ಟಗಳನ್ನು ಪರಿಹರಿಸಬೇಕಾಗಿ ನಮ್ಮ ಶಾಸಕರು , ಸಂಸದರು, ಮಂತ್ರಿವರ್ಯರು ಮತ್ತು ಸರಕಾರಗಳಲ್ಲಿ  ಕುಂದಾಪುರ ತಾಲೂಕು ಪಿಗ್ಮಿ ಸಂಗ್ರಹಕಾರರ ಸಂಘ ವಿನಂತಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಆನಂದ ಮಡಿವಾಳ, ಕಾರ್ಯದರ್ಶಿ ಚಂದ್ರ ಕೆ. , ಸಹಕಾರ್ಯದರ್ಶಿ ಅರುಣ್ ಶೇಟ್ ಮತ್ತು ಸ್ಥಾಪಕ ಅಧ್ಯಕ್ಷ ಅಂತೋನಿ ಡಿಆಲ್ಮೇಡಾ ಇವರುಗಳು ವಾರ್ತಾ ಸಂಸ್ಥೆಗೆ ತಿಳಿಸಿರುತ್ತಾರೆ