ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ : ರೈತ ಸಂಘದಿಂದ ಸಚಿವರ ಭಾವಚಿತ್ರದ ಸಮೇತ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ : ರೈತ ಸಂಘದಿಂದ ಸಚಿವರ ಭಾವಚಿತ್ರದ ಸಮೇತ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು

 

 

ಕೋಲಾರ. ಮಾ.17: ಜಿಲ್ಲೆಯ ಜಲ್ವಂತ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗಗಳಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದರು ಜನರ ಮದ್ಯೆ ಇರಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಸಚಿವರನ್ನು ಹುಡಿಕಿಕೊಡಬೇಕೆಂದು ರೈತ ಸಂಘದಿಂದ ಸಚಿವರ ಭಾವಚಿತ್ರದ ಸಮೇತ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ವಿಶ್ವದ್ಯಾಂತ ಮಹಾಮಾರಿ ಕೋವಿಡ್-19 ರುದ್ರತಾಂಡವ ಜೊತೆಗೆ ಸಾವಿನ ಕದತಟ್ಟುತ್ತಿರುವ ವೈರಸ್ ರೋಗದಿಂದ ಇಡೀ ವಿಶ್ವದ ಘಟಾಘಟಿ ದೇಶಗಳೇ ತತ್ತರಿಸುತ್ತಿದೆ. ಜೊತೆಗೆ ಕರ್ನಾಟಕದಲ್ಲೂ ರೋಗದ ಲಕ್ಷಣಗಳು ಕಾಣಿಸಿ, ಒಂದು ವಾರಗಳ ಕಾಲ ಇಡೀ ರಾಜ್ಯ ಸ್ತಬ್ಧವಾಗಿದೆ . ಅದರ ಜೊತೆಗೆ ಬೇಸಿಗೆ ಆರಂಭವಾಗಿ ತಿಂಗಳೇ ಕಳೆದಿದೆ ಹಾಗೂ ಜಿಲ್ಲಾದ್ಯಾಂತ ನೀರು ಮೇವು ಸಮಸ್ಯೆಯ ಜೊತೆಗೆ ರೇಷ್ಮೇ ತರಕಾರಿ ಬೆಲೆ ಕುಸಿತದ ಜೊತೆಗೆ ಸರ್ಕಾರಿ ಕಛೇರಿಗಳು ಭ್ರಷ್ಟಚಾರದ ಕೂಪವಾಗುವ ಜೊತೆಗೆ ಬಯಲು ಸೀಮೆಯ ಕೋಲಾರ ಜಿಲ್ಲೆಯ ಸಮಸ್ಯೆಗಳ ಜಿಲ್ಲೆಯಾಗಿದೆ. ಅದರಲ್ಲೂ ಒಂದು ಕಡೆ ಜಲ್ವಂತ ಸಮಸ್ಯೆಗಳು ಮತ್ತೊಂದು ಕಡೆ ಸಾಂಕ್ರಾಮಿಕ ರೋಗಗಳಿದ್ದರೂ ಜಿಲ್ಲೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿದಿಗಳು ಜನರ ಮದ್ಯೆ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸಂಸದರು, ಉಸ್ತುವಾರಿ ಸಚಿವರು , ಜನಪ್ರತಿನಿದಿಗಳು ನಾಪತ್ತೆಯಾಗಿದ್ದಾರೆಂದು ಅಸಮಾದಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಮಹಾಮಾರಿ ಕೋವಿಡ್-19 ವೈರಸ್ ರೋಗದಿಂದ ಜನ ಸಾಮಾನ್ಯರು ಬೀದಿಗೆ ಬರಲು ಭಯಬೀತರಾಗುವ ಜೊತೆಗೆ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ಪುಟ್ಟ ಅಂಗಡಿಗಳು ಕೂಲಿಕಾರ್ಮಿಕರು ಕೆಲಸವಿಲ್ಲದ ಜೊತೆಗೆ ಜಿಲ್ಲಾದ್ಯಾಂತ ಸ್ವಚ್ಚತೆ ಹಾಗೂ ರೋಗಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ಜನರ ಮದ್ಯೆಯಿರಬೇಕಾದ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಜೊತೆಗೆ ಆನೆದಾಳಿಯಿಂದ 3 ಜನ ರೈತರು ಸಾವನ್ನಪ್ಪಿರುವ ಜೊತೆಗೆ ದೇಶಕ್ಕೆ ಪ್ರಾಣತ್ಯಾಗ ಮಾಡಿದ ಯೋದನ ಅಂತ್ಯಕ್ರಿಯೆಗೂ ಬಾರದ ಸಚಿವರು ಮುಳಬಾಗಿಲು ಕ್ಷೇತ್ರಕ್ಕೆ ಮಾತ್ರ ಸಚಿವರಾಗಿ ಜಿಲ್ಲೆಯನ್ನು ಮರೆತಿದ್ದಾರೆಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುವ ಜೊತೆಗೆ ಮಹಾಮಾರಿ ಕರೋನಾ ರೋಗಕ್ಕೆ ಭಯಭೀತರಾಗಿದ್ದಾರೆಂದು ಸಾರ್ವಜನಿಕವಾಗಿ ಮಾತನಾಡಿಕೊಳ್ಳುವ ಜೊತೆಗೆ ಮೊದಲು ತಿಂಗಳಿಗೆ 20 ಬಾರಿ ಪ್ರಗತಿ ಪರಿಶೀಲನಾ ಸಭೆಯ ಜೊತೆಗೆ ಇತರೆ ಸಭೆಗಳನ್ನು ನಡೆಸುತ್ತಿದ್ದ ಸಂಸದರು ,ಶಾಸಸಕರು, ಸಚಿವರು ನಾಪತ್ತೆಯಾಗಿದ್ದಾರೆ. ಜೊತೆಗೆ ಉಸ್ತುವಾರಿ ಸುಸ್ತವಾರಿ ಸಚಿವರಾಗಿದ್ದಾರೆಂದು ಟೀಕೆ ಮಾಡುತ್ತಿದ್ದಾರೆಂದು ಅರೋಪ ಮಾಡುವ ಜೊತೆಗೆ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಜವಬ್ದಾರಿ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದು, ಮತಬಾಂಧವರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹುಡುಕಾಡಿದರೂ ಕಾಣುತ್ತಿಲ್ಲ. ಕೂಡಲೇ ಮಾಡಲು ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟು ಜನರ ಸಮಸ್ಯೆಗಳಿಗೆ ಮುಕ್ತಿ ಕೊಡಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೋಲಿಸ್ ವರಿಷ್ಠಾಧಿಕಾರಿಗಳು ನಿಮ್ಮ ದೂರನ್ನು ಆದರಿಸಿ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಜನರ ಸಮಸ್ಯೆ ಬಗೆಹರಿಸಲು ಸಭೆ ನಡೆಸುವಂತೆ ಭರವಸೆ ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ನಾಗೇಶ್, ಸುಪ್ರೀಂಚಲ, ರಾಮಮೂರ್ತಿ, ವಿನೋದ್, ಜಗದೀಶ್, ಶಿವ, ಮುಂತಾದವರಿದ್ದರು.