ಕುಂದಾಪುರ ಮಹಿಳಾ ದಿನಾಚರಣೆ, ಮಹಿಳೆ ಮತ್ತು ಪುರುಷ ಸಮಾನತೆಯಿಂದ ಜೀವಿಸ ಬೇಕು: ಫಾ|ಸ್ಟ್ಯಾನಿ ತಾವ್ರೊ

JANANUDI.COM NETWORK

 

 

 

ಕುಂದಾಪುರ ಮಹಿಳಾ ದಿನಾಚರಣೆ, ಮಹಿಳೆ ಮತ್ತು ಪುರುಷ ಸಮಾನತೆಯಿಂದ ಜೀವಿಸ ಬೇಕು: ಫಾ|ಸ್ಟ್ಯಾನಿ ತಾವ್ರೊ

 

ಕುಂದಾಪುರ, ಮಾ.16: ‘ಇವತ್ತಿನ ಕಾಲದಲ್ಲಿ ಮಹಿಳೆಯರು ‘ಯಾರು ಎನು ಕಡಿಮೆ ಇಲ್ಲವೆಂದು ತೋರಿಸಿಕೊಟ್ಟಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಮಹಿಳೆಯರು ತಮಗೆ ಸ್ಥಾನ ಮಾನ ಗೌರವ ಸಿಗಬೇಕೆಂಬ ಹೋರಾಟದಲ್ಲಿ ಸಫಲಗೊಂಡಿದ್ದಾರೆ. ಹುಡುಗಿಯರು ಹೆಚ್ಚೆಚ್ಚು ಕಲಿತು, ಪೊಸ್ಟ್ ಗಾಜ್ವೆಟ್ ಮಾಡಿ ಉನ್ನತ ಸ್ಥಾನ ಪಡೆದುಕೊಳ್ಳುತಿದ್ದಾರೆ. ಆದರೆ ಹುಡುಗರು ಅಸ್ಟು ಕಲಿಯುವುದು ಕಡಿಮೆ. ಕುಟುಂಬದಲ್ಲಿ ತಾಯಿ, ಹೆಂಡತಿ, ಅಕ್ಕ ತಂಗಿ ಹೀಗೆ ಒರ್ವ ಮಹಿಳೆ ಇಲ್ಲದಿದ್ದರೆ, ಕುಟುಂಬ ವ್ಯವಸ್ಥಿತವಾಗಿ ನಡೆಯುದಿಲ್ಲಾ, ಮನೆಯಲ್ಲಿ ಗಂಡ ಹೆಂಡತಿ ಸಮಾನತೆಯಿಂದ ಜೀವಿಸಿದರೆ ಆ ಮನೆಯಲ್ಲಿ ಸಂತೊಷದ ವಾತವರಣ ಇರುತ್ತದೆ’  ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಕುಂದಾಪುರ ಘಟಕದ ನೇತ್ರದ್ವದಲ್ಲಿನ ಚರ್ಚಿನ ಸ್ವಸಹಾಯ ಗುಂಪುಗಳ ಜೊತೆ ಹೋಲಿ ರೊಜರಿ ಚರ್ಚಿನ ಸಭಾಭವನದಲ್ಲಿ ನೆಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಅಧ್ಯಕ್ಷತೆಯನ್ನು ವಹಿಸಿ ಶುಭ ಕೋರಿ ಸಂದೇಶ ನೀಡಿದರು.
     ಮುಖ್ಯ ಅತಿಥಿಯಾಗಿ ಆಗಮಿಸಿದ ವಕೀಲೆ ಶಾಲೆಟ್ ರೆಬೆಲ್ಲೊ ಸಿ.ಎ.ಎ., ಎನ್ ಆರ್.ಸಿ ಬಗ್ಗೆ ಮಾಹಿತಿ ನೀಡಿದರು. ಸಂಘಟನೇಯ ಸಚೇತಕಿ ವಂ|ಭಗಿನಿ ಆಶಾ ಸ್ತ್ರಿ ತನಗೆ ಹಕ್ಕು, ಗೌರವ, ಸ್ಥಾನ ಮಾನ ಸಿಗಲು ಮಾಡಿದ ಹೋರಾಟದ ಬಗ್ಗೆ ವಿವರಿಸಿದರು. ಕಾನ್ವೆಂಟಿನ ಮುಖ್ಯಸ್ಥೆ ಸಿ|ವೈಲೆಟ್ ‘ಕುಟುಂದಲ್ಲಿ ಮಹಿಳೆಯ ಪಾತ್ರ ಮುಖ್ಯವಾದುದು, ಸ್ತ್ರೀ ಕುಟುಂಬವನ್ನು ಬೆಳಗಲು ಕಾರಾಣಳಾಗಿದ್ದಾಳೆ’ ಎನ್ನುತ್ತಾ ಕುಟುಂಬದಲ್ಲಿ ಮಹಿಳೆಯ ಪಾತ್ರವನ್ನು ವಿವರಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪಾಲನ ಮಂಡಳಿ ಅಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಮಹಿಳೆಯರಿಗೆ ಶುಭ ಕೋರಿದರು. ಸ್ತ್ರೀ ಸಂಘಟನೇಯ ಸದಸ್ಯರಿಂದ ಪ್ರಾರ್ಥನ ಗೀತೆ, ಬೈಬಲ್ ವಾಚನದ ಮೂಲಕ ಆರಂಭಗೊಂಡ ಕಾರ್ಯಕ್ರಮಕ್ಕೆ ಆರಂಭಗೊಂಡ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಬೈಬಲ್ ವಾಚನದ ಸಾರವನ್ನು ತಿಳಿಸಿದರು.  ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಸ್ವಸಹಾಯ ಗುಂಪುಗಳಿಗೆ, ಮತ್ತು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಂಚಲಾಯಿತು. ಮಹಿಳೆಯರು ಕಿರುನಾಟಕ, ನ್ರತ್ಯ, ಗಾಯಾನ, ಮುಂದಾದ ಪ್ರದರ್ಶನವನ್ನು ನೀಡಿದರು. ಕುಂದಾಪುರ ಚರ್ಚ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿದರು. ಕಾರ್ಯದರ್ಶಿ ಸಂಗೀತ ಪಾಯ್ಸ್ ವಂದಿಸಿದರು. ರೇಖಾ ಡಿಆಲ್ಮೇಡಾ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರ್ವಹಿಸಿದರು.