ಸಾರ್ವಜನಿಕರ ಸಹಕಾರದೊಂದಿಗೆ ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇನೆ  :ಶ್ರೀನಿವಾಸಪುರ ನೂತನ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಸಾರ್ವಜನಿಕರ ಸಹಕಾರದೊಂದಿಗೆ ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇನೆ  :ಶ್ರೀನಿವಾಸಪುರ ನೂತನ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ 

 

 

ಸಾರ್ವಜನಿಕರ ಸಹಕಾರದೊಂದಿಗೆ ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಗಮನ ಹರಿಸುತ್ತೇನೆ ಎಂದು ನೂತನ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನೂತನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿ ಮಾತಾನಾಡಿದ ಎಸ್.ಎಂ.ಶ್ರೀನಿವಾಸ್ ತಾಲ್ಲೂಕಿನ ರೈತರು, ಸಾರ್ವಜನಿಕರು ತಮ್ಮ ಕೆಲಸಕಾರ್ಯಗಳಿಗೆ ದಿನನಿತ್ಯ ಕಚೇರಿಗೆ ಅಲೆದಾಡದೇ ಶೀಘ್ರವೇ ಅವರ ಕೆಲಸಗಳನ್ನು ಆಗುವಂತೆ ಜಾಗೃತಿ ವಹಿಸುತ್ತೇನೆ. ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿ ಮಾಡುತ್ತೇನೆ ಮೊದಲಿಗೆ ತಮ್ಮ ಕಚೇರಿಯಿಂದಲೇ ವ್ಯವಸ್ಥೆ ಸುಧಾರಣೆಗೆ ಮುಂದಾಗುತ್ತೇನೆ ತಾಲ್ಲೂಕಿನ ಆಡಳಿತವನ್ನು ಚುರುಕುಗೊಳಿಸಲು ಮತ್ತು ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯಗಳು ಸಕಾಲಕ್ಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮೂಖನಾಗಿರುತ್ತೇನೆ ಈಗಾಗಲೇ ನಾನು ಬಂದ ತಕ್ಷಣ ನನ್ನ ಮೊದಲ ಭೇಟಿ ರೆಕಾರ್ಡ್ ರೂಂಗೆ ಭೇಟಿ ನೀಡಿ ಹಾಗೇಯೆ ಎಲ್ಲಾ ವಿಭಾಗಗಳಿಗೆ ಹಾಜರಿ ಮತ್ತು ಗೈರು ಹಾಜರಾಗಿರುವ ಸಿಬ್ಬಂದಿ ಮತ್ತು ಅಧಿಕಾರಿಗಳ ವಿವರಣೆ ಪಡೆದುಕೊಂಡಿದ್ದೀನೆ ಎಂದರು.
ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಲು ಉದಾಸೀನಾ ತೊರುವ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇನೆ. ತಾಲ್ಲೂಕು ಕಚೇರಿಯ ಟಪಾಲು ವಿಭಾಗಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಮಾಹಿತಿ ಪಡೆದುಕೊಂಡು ಪ್ರತಿನಿತ್ಯ ಟಪಾಲಿನಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿವರಗಳನ್ನು ತಮ್ಮ ಗಮನಕ್ಕೆ ತರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ನಂತರ ಮಧ್ಯವರ್ತಿಗಳಿಗೆ ತಾಲ್ಲೂಕು ಕಚೇರಿಯ ಕೆಲಸದಲ್ಲಿ ಅವಕಾಶ ನೀಡುವುದಿಲ್ಲ ಇಂತವರು ಕಂಡುಬಂದರೆ ಅಧಿಕಾರಿಗಳಿಗೆ ಹೊಣೆಯಾಗುತ್ತಾರೆ ಎಂದರು.