ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ಅನ್ಯಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ಅನ್ಯಾಯ

 

 

 

 

ಕೋಲಾರ : ಗುರುವಾರ ರಾಜ್ಯ ಬಜೆಟ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ್ದು, ಈ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕೈ ಬಿಟ್ಟಿರುವುದು ಬೇಸರದ ಸಂಗತಿ ಎಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಕೋಲಾರ ಜಿಲ್ಲೆಯು ಬಿ.ಜೆ.ಪಿ.ಯ ಸಂಸದರು ಮತ್ತು ಉಸ್ತುವಾರಿ ಮಂತ್ರಿಗಳಿದ್ದರೂ ಸಹ ಕೋಲಾರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಕುಮಾರಸ್ವಾಮಿ ಕೋಲಾರ ನಗರಾಭಿವೃದ್ಧಿ ಬಿಡುಗಡೆ ಮಾಡಿದ ಅನುದಾನವನ್ನು ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೋಲಾರ ನಗರದ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಹಣವನ್ನು ನೆರೆ ಸಂತ್ರಸ್ಥರ ಹೆಸರಿನಲ್ಲಿ ವಾಪಸ್ಸು ಪಡೆದರು. ಆದರೆ 2020ರ ರಾಜ್ಯ ಬಜೆಟ್‍ನಲ್ಲಿ ಆ ಅನುಧಾವನ್ನು ವಾಪಸ್ಸು ನೀಡುವ ಕೋಲಾರದ ಜನರ ನಿರೀಕ್ಷೆಯನ್ನು ಉಸಿಮಾಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು, ಟೆಮೋಟೊ ಬೆಳೆಯುತ್ತಿದ್ದು, ಈ ರೈತರಿಗಾಗಿ ಸಂಸ್ಕರಣ ಘಟಕವನ್ನು ನೀಡುವರೆಂಬ ರೈತರ ಆಸೆಗೆ ತಣ್ಣೀರು ಎರೆಚಿದ್ದಾರೆ.
ಸುಮಾರು 15 ವರ್ಷಗಳಿಂದ ಬರ ಎದುರಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಹಿಂಡಿ, ಬೂಸ, ಪೀಡ್ ಬೆಲೆಗಳು ಗಗನಕ್ಕೇರಿದ್ದು, ಹಾಲಿ ಬೆಲೆ ಯಥಾಸ್ಥಿತಿಯಲ್ಲಿರುವುದು ಲೀಟರ್ ಹಾಲಿನ ಬೆಲೆ ಸುಮಾರು 45 ರೂ ನೀಡಿದ್ದೇ ಆದರೆ ಹೈನುಗಾರಿಕೆಯನ್ನು ನಂಬಿರುವ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಈ ಬಜೆಟ್‍ನಲ್ಲಿ ಹೈನುಗಾರಿಯ ಹೆಸರೇ ಪ್ರಸ್ತಾಪ ಮಾಡದೆ ರೈತನನ್ನು ನಡು ನೀರಿನಲ್ಲಿ ಬಿಟ್ಟಂತಾಗಿದೆ.
ಪಕ್ಕದ ಅವಳಿ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮುಂದಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜು ಒಂದೂ ಇಲ್ಲದಿದ್ದರೂ ಸಹ ಕೋಲಾರ ಜಿಲ್ಲೆಯ ಹೆಸರನ್ನೇ ಪ್ರಸ್ತಾಪ ಮಾಡದೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಟ್ಟಂತಾಗಿದೆ ಎಂದು ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರನ್ನು ಮೂರನೇ ಬಾರಿ ಶುದ್ಧೀಕರಣದ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾಪಿಸದೆ, ಕೆ.ಸಿ.ವ್ಯಾಲಿ ನೀರು ಹರಿಸುವ ಕೆರೆಗಳ ಅಭವೃದ್ಧಿ ಮಾಡದೆ, ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವ ಬಗ್ಗೆ ಬಜೆಟ್‍ನಲ್ಲಿ ಚಕಾರವೆತ್ತದೆ ಇರುವುದು ನೋವಿನ ಸಂಗತಿಯಾಗಿದೆ ಎಂದಿದ್ದಾರೆ.

 

 

ಈ ಬಜೆಟ್ ರೈತ ವಿರೋಧಿ, ವಿದ್ಯಾರ್ಥಿ ವಿರೋಧಿ ಹಾಗೂ ಕೋಲಾರ ಜಿಲ್ಲೆಯ ವಿರೋಧಿ ಬಜೆಟ್ ಆಗಿದ್ದು, ಈ ಬಜೆಟ್ ರಾಜ್ಯ ಅಭಿವೃದ್ಧಿ ಬಜೆಟ್ ಅಲ್ಲ. ಬಿ.ಎಸ್.ಯಡಿಯರಪ್ಪನವರ ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಬಜೆಟ್ ಆಗಿದೆ ಎಂದು ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮತ್ತು ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಟೀಕಿಸಿದ್ದಾರೆ.