ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಯಾನ್ಸರ್‍ ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ

JANANUDI.COM NETWORK

 

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕ್ಯಾನ್ಸರ್‍  ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ

 

ಕುಂದಾಪುರ: ಪೆಬ್ರುವರಿ 5ರಂದು ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಶಿಕ್ಷಕರ ಸಂಘದಆಶ್ರಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರ ಮತ್ತು ರೋಟರಿಕ್ಲಬ್ ಸನ್‍ರೈಸ್ ಕುಂದಾಪುರ ಇವರ ಸಹಯೋಗದಲ್ಲಿಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್‍ಕುರಿತು ಮಾಹಿತಿ ಮತ್ತುಉಚಿತ ಆರೋಗ್ಯ ತಪಾಷಣಾ ಶಿಬಿರ ನಡೆಯಿತು.
ಕ್ಯಾನ್ಸರ್ ಕುರಿತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಎನ್.ಸಿ.ಡಿ ವಿಭಾಗ ಕುಂದಾಪುರದ ಡಾ.ಶ್ರಾವ್ಯ ಮಾಹಿತಿ ನೀಡಿದರು.
ಜಿಲ್ಲಾತಂಬಾಕು ನಿಯಂತ್ರಣ ಘಟಕದ ಶೈಲಾ ತಂಬಾಕು ಸೇವನೆಯ ಅಡ್ಡ ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಮತ್ತು ರೋಟರಿ ಕ್ಲಬ್ ಸನ್‍ರೈಸ್ ಕುಂದಾಪುರದ ರೊಟೇರಿಯನ್ ಕೆ. ಭಾಸ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಯಾಬಾಯಿ ಮತ್ತು ಲತಾ ಉಚಿತ ಆರೋಗ್ಯ ತಪಾಷಣಾ ಶಿಬಿರದಲ್ಲಿ ಸಹಕರಿಸಿದರು.
ಗುರುದಾಸ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಪ್ರಭು ವಂದಿಸಿದರು.