ಶ್ರೀನಿವಾಸಪುರ, ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು : ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ, ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು : ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌.
  ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಶುಕ್ರವಾರ ರೂ.8.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ  ಕ್ಷೀರ ಭವನ ಉದ್ಘಾಟಿಸಿ ಮಾತನಾಡಿ, ಕ್ಷೀರೋತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಹಿರಿದು. ಗ್ರಾಮೀಣ ಬದುಕಿನ ಜೀವನಾಡಿಯಾಗಿರುವ ಹಸು ಸಾಕಾಣಿಕೆ ಮಹಿಳೆಯ ಮುಖ್ಯ ಕಸುಬಾಗಿದೆ. ಕುಟುಂಬ ನಿರ್ವಹಣೆಗೆ ಮಹಿಳೆಯರ ಶ್ರಮ ಆಧಾರವಾಗಿದೆ ಎಂದು ಹೇಳಿದರು.
  ತಾಲ್ಲೂಕಿನಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಡಿಸಿಸಿ ಬ್ಯಾಂಕ್‌ ವತಿಯಿಂದ ಪಕ್ಷಾತೀತವಾಗಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ ಹಾಗೂ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿ ಕೊಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕೃಷಿ ಕೈಗೊಳ್ಳಲು ಅಗತ್ಯವಾದ ಕೊಳವೆ ಬಾವಿ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
   ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೂ.60 ಸಾವಿರ ಆರ್ಥಿಕ ನೆರವು ನೀಡಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಭ್ಯಾಗ್‌ ನಿಡಲಾಯಿತು. ಕಟ್ಟಡ ಅನುದಾನ ರೂ.1.5 ಲಕ್ಷ ಸೇರಿದಂತೆ, ಫಲಾನುಭವಿಗಳಿಗೆ ರೂ.2.70 ಲಕ್ಷ ನೆರವು ವಿತರಿಸಲಾಯಿತು. 
  ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್‌.ವಿ.ತಿಪ್ಪಾರೆಡ್ಡಿ, ವ್ಯವಸ್ಥಾಪಕ ಡಾ.ಎಸ್‌.ಎಚ್‌.ಬಿ.ಸುನಿಲ್‌, ಉಪ ವ್ಯವಸ್ಥಾಪಕ ಡಾ. ಶ್ರೀಕಾಂತ್‌, ಸಹಾಯಕ ವ್ಯವಸ್ಥಾಪಕ ಕೆ.ಎಸ್‌.ನರಸಿಂಹಯ್ಯ, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಶ್ರೀನಿವಾಸಮೂರ್ತಿ, ಸಹಕಾರಿ ಅಭಿವೃದ್ಧಿ ಅಧಿಕಾರಿ ಶಿವಶಂಕರ್‌, ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಕೂವಣ್ಣ, ಉಪಾಧ್ಯಕ್ಷ ಕೆ.ಎಚ್‌.ಮೂರ್ತಿ, ನಿರ್ದೇಶಕರಾದ ಕೆ.ಜಿ.ಅಮರೇಶ್, ಎಂ.ವೆಂಕಟೇಶರೆಡ್ಡಿ, ಗೋಪಾಲಕೃಷ್ಣ, ಆನಂದಕುಮಾರ್‌, ನಾಗೇಶ್‌, ನಂಜುಂಡಾಚಾರಿ, ರತ್ನಮ್ಮ, ಜಯಮ್ಮ, ಮುಖ್ಯ ಕಾರ್ಯನಿರ್ವಾಹಕ ಕೆ.ವಿ.ರೆಡ್ಡಪ್ಪ, ಹಾಲು ಪರೀಕ್ಷಕರಾದ ಕೆ.ಎನ್‌.ಶ್ರೀರಾಮಪ್ಪ, ಆಂಜನೇಯಪ,್ಪ , ಮುಖಂಡರಾದ ಕೆ.ಶಿವಾರೆಡ್ಡಿ, ಕೆ.ಮುನಿಯಪ್ಪ, ಅಮರೇಶ್‌, ಕೆ.ಎಚ್‌.ಕೃಷ್ಣ, ಕೆ.ವಿ.ರೆಡ್ಡಪ್ಪ, ಎನ್‌.ಎಸ್‌.ಮಂಜುನಾಥಗೌಡ, ವೆಂಕಟೇಶಪ್ಪ, ಪಟೇಲ್‌, ಹೂವಳ್ಳಿ ಬಾಬು ಇದ್ದರು.