ಯುಜಿಸಿ-ನೆಟ್‍ನಲ್ಲಿ : ಯು.ಸಂಗೀತಾ ಶೆಣೈಗೆ 37ನೇ ರ್ಯಾಂಕ್- ಫೆಲೋಶಿಪ್

JANANUDI.COM NETWORK

 

 

ಯುಜಿಸಿ-ನೆಟ್‍ನಲ್ಲಿ : ಯು.ಸಂಗೀತಾ ಶೆಣೈಗೆ 37ನೇ ರ್ಯಾಂಕ್- ಫೆಲೋಶಿಪ್ 

 

ಭಾರತದ ಕೇಂದ್ರ ಸರಕಾರದ ಎಚ್.ಆರ್.ಡಿ.ಜಿ.ವತಿಯಿಂದ ನಡೆಸಲ್ಪಡುವ ಯುಜಿಸಿ-ನೆಟ್, ರಾಷ್ಟ್ರೀಯ ಪ್ರವೇಶ ಪರೀಕ್ಷೆ, ಸಿಎಸ್‍ಐಆರ್ ಫಲಿತಾಂಶ ಪ್ರಕಟವಾಗಿದ್ದು, ಕುಂಭಾಶಿಯ ಯು.ಸಂಗೀತಾ ಶೆಣೈ ದೇಶದಲ್ಲಿ 37ನೇ ರ್ಯಾಂಕ್ ಪಡೆದು ಫೆಲೋಶಿಫ್‍ಗೆ ಅರ್ಹತೆ ಪಡೆದಿದ್ದಾರೆ.
ಪಿಎಚ್‍ಡಿ ಅಧ್ಯಯನಕ್ಕೆ ನೇರಪ್ರವೇಶ ಒದಗಿಸುವ ಈ ಸಿಎಸ್‍ಐಆರ್ ಪರೀಕ್ಷೆ ಡಿಸೆಂಬರ್ 15 ರಂದು ನಡೆದಿದ್ದು 84 ಸಾವಿರ ಮಂದಿ ಬರೆದಿದ್ದರು. ಇವರಲ್ಲಿ 2185 ಮಂದಿಗೆ ಫೆಲೋಶಿಫ್, ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ (ಊಖಆಉ) ನೀಡುತ್ತದೆ. ಇದರಲ್ಲಿ ಯು.ಸಂಗೀತಾ ಶೆಣೈ 37ನೇಯವರಾಗಿ ಗುಣಮಟ್ಟ ಪಡೆದಿದ್ದಾರೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆಫ್ ಇಂಡಿಯಾ (ಅSIಖ) ಪರೀಕ್ಷೆ ಕಠಿಣ ಸವಾಲಾಗಿದ್ದು, ಇದಕ್ಕಾಗಿ ತರಬೇತಿ ನೀಡಲು ಕೋಚಿಂಗ್ ಸಂಸ್ಥೆಗಳಿವೆ. ಸಿಎಸ್‍ಐಆರ್ ಕೇಂದ್ರ ಸರಕಾರದ ರಿಸರ್ಚ್ ಎಂಡ್ ಡೆವೆಲಪ್‍ಮೆಂಟ್ ವಿಭಾಗÀದ ವ್ಯವಸ್ಥೆಯಾಗಿದ್ದು ದೇಶದಲ್ಲಿ ಸಂಶೋಧನೆ ಹಾಗೂ ಜ್ಞಾನಾಭಿವೃದ್ಧಿಗೆ ಸಂಪನ್ಮೂಲ ನೀಡುವ ವಿಶ್ವದ ಮಹತ್ವದ ಸಂಸ್ಥೆಯಾಗಿದೆ.
ಯು.ಸಂಗೀತಾ ಶೆಣೈ “ಕುಂದಪ್ರಭ” ಸಂಸ್ಥೆಯ ಯು.ಎಸ್.ಶೆಣೈ – ಸಾಧನಾ ಶೆಣೈ ದಂಪತಿಯ ಪುತ್ರಿ.