ಕೋಲಾರ:ಸ್ವಾತಂತ್ರದ ನಂತರ ಧರ್ಮಗಳ ಆಧಾರದಲ್ಲಿ ದೇಶವನ್ನು ಚೂರು ಚೂರು ಗೊಳಿಸಲು ಕೇಂದ್ರ ಸರಕಾರ ಹೊರಟಿದೆ : ಸಾಹಿತಿ ಲಕ್ಷ್ಮಿಪತಿ ಕೋಲಾರ ಆಕ್ರೋಶ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕೋಲಾರ:ಸ್ವಾತಂತ್ರದ ನಂತರ ಧರ್ಮಗಳ ಆಧಾರದಲ್ಲಿ ದೇಶವನ್ನು ಚೂರು ಚೂರು ಗೊಳಿಸಲು ಕೇಂದ್ರ ಸರಕಾರ ಹೊರಟಿದೆ : ಸಾಹಿತಿ ಲಕ್ಷ್ಮಿಪತಿ ಕೋಲಾರ ಆಕ್ರೋಶ 

 

 

ಕೋಲಾರ:ಸ್ವಾತಂತ್ರದ ನಂತರ ಧರ್ಮಗಳ ಆಧಾರದಲ್ಲಿ ದೇಶವನ್ನು ಚೂರು ಚೂರು ಗೊಳಿಸಲು ಕೇಂದ್ರ ಸರಕಾರ ಹೊರಟಿದೆ ಎಂದು ಸಾಹಿತಿ ಲಕ್ಷ್ಮಿಪತಿ ಕೋಲಾರ ಆಕ್ರೋಶ ವ್ಯಕ್ತಪಡಿಸಿದರು,
ನಗರದಲ್ಲಿ ಗುರುವಾರ ವಿವಿಧ ಪ್ರಗತಿಪರ ಸಂಘಟನೆಗಳಿಂದ  ಸಹಬಾಳ್ವೆ ಬಲಗೊಳ್ಳಲಿ ಎಂಬ ಘೋಷಣೆಯಡಿ, ಜ ೩೦ರ ಮಹಾತ್ಮ ಗಾಂಧೀಜಿಯವರ ಹುತಾತ್ಮರಾದ ದಿನದ ಭಾಗವಾಗಿ ಸೌಹಾರ್ಧತೆಗಾಗಿ ಭಾರತದಡಿಯಲ್ಲಿ ಗಾಂವನದಿಂದ  ನಚಿಕೇತ ನಿಲಯದವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಗಾಂಧೀಜಿ ಇಲ್ಲದ ಸ್ವಾತಂತ್ರ ಹೋರಾಟವನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಗುಂಡಿಕ್ಕಿದ ಗೋಡ್ಸೆಯನ್ನು ಅಂದು ಯಾರೂ ಬೆಂಬಲಿಸುತ್ತಿರಲಿಲ್ಲ. ಆದರೆ, ಇಂದು ದೇಶಪ್ರೇಮ ದೂರವಾಗಿ ಗೋಡ್ಸೆ ಹಾಗೂ ಅವರ ಚಿಂತನೆಯ ಪ್ರೇಮಿಗಳೇ ಹೆಚ್ಚಾಗುತ್ತಿದ್ದಾರೆ ಆದರಿಂದ ದೇಶದಲ್ಲಿ ಅಹಿಂಸೆಯ ಹೋರಾಟದ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇವೆ ಎಂದರು
ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಕೋಮು ಸಾಮರಸ್ಯವನ್ನು ಹರಡಿ ಶಾಂತಿ ಸಂದೇಶ ಸಾರಲು ದೇಶದಲ್ಲಿ ಏಕ ಕಾಲದಲ್ಲಿ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದು ಪಕ್ಷಾತೀತವಾದ ಮಾನವ ಬಂಧುತ್ವ ಬೆಸೆಯುವ ಕಾರ್ಯಕ್ರಮವಾಗಿದೆ ಎಂದರು.
ಜನವಾದಿ ಸಂಘಟನೆಯ ಮುಖಂಡೆ ವಿ.ಗೀತಾ ಮಾತನಾಡಿ, ಕೋಮುವಾದಕ್ಕೆ ಪ್ರತಿಯಾಗಿ ಸಾಮರಸ್ಯವನ್ನು, ದ್ವೇಷÀಕ್ಕೆ ಪ್ರತಿಯಾಗಿ ಸ್ನೇಹವನ್ನು, ಕುತಂತ್ರಕ್ಕೆ ಪ್ರತಿಯಾಗಿ ಪ್ರಾಮಾಣಿಕತೆಯನ್ನು ನಾವು ಎತ್ತಿ ಹಿಡಿಯಬೇಕಾಗಿದೆ ಎಂದರು.
ಮಾನವ ಸರಪಳಿ ಕಾರ್ಯಕ್ರಮವು ಗಾಂಧಿವನದ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎಂಜಿ ರಸ್ತೆ, ಚಂಪಕ್ ಸರ್ಕಲ್, ಅಮ್ಮವಾರಿ ಪೇಟೆ ಸರ್ಕಲ್, ಮೆಕ್ಕೆ ಸರ್ಕಲ್, ಮೂಲಕ ನಚಿಕೇತ ನಿಲಯದಲ್ಲಿ ಅಂಬೇಡ್ಕರ್ ಪ್ರತಿಭೆಗೆ ಮಾಲಾರ್ಪಣೆ ಮೂಲಕ ಮಾನವ ಸರಪಳಿ ಮುಕ್ತಾಯವಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಪಿ.ಶ್ರೀನಿವಾಸ್, ಟಿ.ಎಂ.ವೆAಕಟೇಶ್, ಅಬ್ಬಣಿ ಶಿವಪ್ಪ, ನಳಿನಿ ಗೌಡ, ಆಸೀಫ್, ಪಿ.ವಿ.ರಮಣ, ವಿಜಿಕೃಷ್ಣ, ವಿಜಯಕುಮಾರಿ, ಕೊಂಡರಾಜನಹಳ್ಳಿ ಮಂಜುಳ, ವಾಸುದೇವರೆಡ್ಡಿ, ಮುರಳಿ, ಅಬ್ದುಲ್ ಖಯೂಮ್, ಸಾಬೀರ್ ಪಾಷ ಮತ್ತಿತರರು ಇದ್ದರು.