ಕೋಲಾರ:ಜಿಲ್ಲೆಯಲ್ಲಿ 71 ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರಿಂದ ಧ್ವಜಾರೋಹಣ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ:ಜಿಲ್ಲೆಯಲ್ಲಿ 71 ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರಿಂದ ಧ್ವಜಾರೋಹಣ   
ಕೋಲಾರ: ಜಿಲ್ಲೆಯಲ್ಲಿ 71 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 
ಮಾನ್ಯ ಅಬಕಾರಿ ಮತ್ತು ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹೆಚ್. ನಾಗೇಶ್ ಧ್ವಜರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. 
ಇಂದು ನಗರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ 71 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜವಂದನೆ ಸ್ವೀಕರಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಹೋಗಿ ಪಥಸಂಚಲನ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಸಚಿವರು ಜಿಲ್ಲೆಯ ಜನರಿಗೆ ಸಂದೇಶವನ್ನು ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ 3 ವಾದ್ಯ ತಂಡಗಳು ಸೇರಿದಂತೆ 25 ತಂಡಗಳು ಭಾಗವಹಿಸಿದ್ದು, ಪಥಸಂಚಲನವು ಆಕರ್ಷಕವಾಗಿ ಮೂಡಿಬಂದಿತು. ಉತ್ತಮ ಪ್ರದರ್ಶನ ನೀಡಿದ ಪಥಸಂಚಲನ ತಂಡಗಳಿಗೆ ಬಹುಮಾನವನ್ನು ನೀಡಲಾಯಿತು. ಸಮವಸ್ತ್ರ ಮತ್ತು ಸಮವಸ್ತ್ರವಲ್ಲದ ತಂಡಗಳಿಗೆ ಮೂರು ಬಹುಮಾನಗಳನ್ನು ನೀಡಲಾಯಿತು. 
ಸಮವಸ್ತ್ರ ಪಥಸಂಚಲನ ಬಹುಮಾನಗಳು: ಮೊದಲನೆ ಬಹುಮಾನ ಮಣಿದೀಪ್ ಕುಮಾರ್ ನೇತ್ರತ್ವದ ಎನ್.ಸಿ.ಸಿ ಸರ್ಕಾರಿ ಬಾಲಕರ ಕಾಲೇಜು ತಂಡ, ದ್ವಿತೀಯ ಬಹುಮಾನ ಶ್ರವಂತ್ ನೇತೃತ್ವದ ಭಾರತ್ ಸ್ಕೌಟ್ಸ್, ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆ, ಬೆಗ್ಲಿಹೊಸಹಳ್ಳಿ, 3 ನೇ ಬಹುಮಾನ ಆರತಿ ನೇತೃತ್ವದ ಭಾರತ್ ಸೇವಾದಳ ಎಇಎಸ್ ಶಾಲೆ ಹಾಗೂ ಸಮವಸ್ತ್ರವಲ್ಲದ ಬಹುಮಾನಗಳು ಮೊದಲನೆಯದಾಗಿ ಹರ್ಷಿತ ಎಂ. ನೇತೃತ್ವದ ಸುವರ್ಣ ಸೆಂಟ್ರಲ್ ಶಾಲೆಯ ಬಾಲಕಿಯರ ತಂಡ, ಎರಡನೇ ತಂಡ ರೋಹಿತ್ ನೇತೃತ್ವದ ಆರ್.ವಿ ಇಂಟರ್ ನ್ಯಾಷನಲ್ ಸ್ಕೂಲ್, ಮೂರನೇ ಬಹುಮಾನವನ್ನು ರಮ್ಯ ಹೆಚ್. ನೇತೃತ್ವದ ಮಹಿಳಾ ಸಮಾಜ ಶಾಲೆಯ ಬಾಲಕಿಯರ ತಂಡಕ್ಕೆ ನೀಡಲಾಗಿದೆ. 
ವಿಶೇಷ ಬಹುಮಾನವನ್ನು ಮುರಳಿ ಎಂ. ನೇತೃತ್ವದ ಅಂತರಂಗೆಯ ವಿಶೇಷ ಚೇತನ ಮಕ್ಕಳ ಶಾಲೆಯ ತಂಡಕ್ಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುತ್ತಿರುವ ಲೆಪ್ಟಿನೆಂಟ್ ಕರ್ನಲ್ ಅಮರ್‍ನಾಥ್ ಅವರಿಗೆ ಜಿಲ್ಲಾಡಳಿತ ವತಿಯಿಂದ ವಿಶೇಷ ಸನ್ಮಾನ ಮಾಡಲಾಯಿತು. 
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಸೆಂಟನ್ಸ್ ಶಾಲೆ, ಚಿನ್ಮಯ ವಿದ್ಯಾಮಂದಿರ, ಸುವರ್ಣ ಸೆಂಟ್ರಲ್ ಶಾಲೆ ಇನ್ನಿತರ 20 ಶಾಲೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬಂದವು. 
ಮುದುವಾಡಿ ಹೊಸಹಳ್ಳಿ ಸರ್ಕಾರಿ ಶಾಲೆಯು ಮಕ್ಕಳಿಂದ ಮೂಡಿಬಂದ ಕಂಸಾಳೆ ನ್ಯತ್ಯವು ಸಾರ್ವಜನಿಕರನ್ನು ಹುರಿತುಂಬಿಸಿತು. ಇದೇ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ 
ಎಸ್. ಮುನಿಸ್ವಾಮಿ,  ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ 
ಕೆ. ಶ್ರೀನಿವಾಸಗೌಡ, ಅಪರ ಜಿಲ್ಲಾಧಿಕಾರಿಗಳಾದ ಹೆಚ್.ಪುಷ್ಪಲತಾ, ಉಪವಿಭಾಗಾಧಿಕಾರಿ ವಿ. ಸೋಮಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್, ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಸೂಲೂರು ಎಂ. ಆಂಜಿನಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.