340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ

JANANUDI.COM NETWORK

 

 

 

340 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ – ಭ್ರಾತ್ರತ್ವದ ಬಾಂಧವ್ಯವನ್ನು ಗಟ್ಟಿಗಳಿಸುವ:ಫಾ|ಸುನೀಲ್ ಡಿಸಿಲ್ವಾ

 

 

 

ಕುಂದಾಪುರ,ಜ.13: ಸುಮಾರು 340 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಪ್ರಧಾನ ಯಾಜಕರಾಗಿ, ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರು. ಸಂತ ಜೋಸೆಪ್ ವಾಜ್‍ರವರು ಕುಂದಾಪುರಕ್ಕೆ ಆಗಮಿಸಿ, ಕುಂದಾಪುರ ಮತ್ತು ಆಸುಪಾಸಿನಲ್ಲಿ ಸೇವೆ ನೀಡಿದ ಮಹತ್ಮಾರು. ಸಂತ ಜುಜೆ ವಾಜ್ ಕುಂದಾಪುರದ ಅಂದಿನ ಚರ್ಚಿನ ತಮ್ಮ ಕೊಠಡಿಯಲ್ಲಿದ್ದು ದೇವರ ಜೊತೆ ಪ್ರಾರ್ಥನೆಯಲ್ಲಿ ತೊಡಗಿದಾಗ ಅವರು ಯಾವ ಆಧಾರವೂ ಇಲ್ಲದೆ ನೆಲದಿಂದ ಬಹಳ ಮೇಲಕ್ಕೆ ಗಾಳಿಯಲ್ಲಿ ತೂಗಾಡುತ್ತಾ ಇದದ್ದು, ಮತ್ತು ಆ ಕೊಠಡಿ ಪ್ರಕರ ಬೆಳಕಿನಲ್ಲಿ ಕೂಡಿದ್ದುದನ್ನು ಕಣ್ಣಾರೆ ಕಂಡ, ಇನ್ನೊಬ್ಬ ಅತಿಥಿ ಧರ್ಮಗುರುಗಳು, ಈ ಘಟನೆ ಗೋವಾದ ಧರ್ಮಾಧ್ಯಕ್ಷರಿಗೆ ತಿಳಿಸಿದ್ದು ಒಂದು ಚಾರಿತ್ರಿಕ ವಿಷಯವಾಗಿದೆ. ಇದೊಂದು ದೇವರ ಮಹಿಮೆಯಾಗಿದ್ದು ಈ ಸ್ಥಳ ಪವಿತ್ರವಾಗಿದೆ ಎಂಬ ಖ್ಯಾತಿ ಗಳಿಸಿದೆ. ಮುಂದೆ ಇದೆ ಸಂತ ಜುಜೆ ವಾಜರು ಶ್ರೀಲಂಕಾದಲ್ಲಿ ಯೇಸು ಕ್ರಿಸ್ತರ ಸೇವೆಯಲ್ಲಿ ತೊಡಗಿದಾಗ ಇನ್ನೂ ಹೆಚ್ಚೆಚ್ಚು ಅದ್ಬುತಗಳನ್ನು ಮಾಡಿ ಅವರು ಸಂತ ಪದವಿಯನ್ನು ಪಡೆದರು.

 

 

 

ಈ ದಿವ್ಯ ಪುರುಷನ ವಾರ್ಷಿಕ ಮಹಾ ಉತ್ಸವವು ಜನವರಿ 12 ರಂದು ಕುಂದಾಪುರದಲ್ಲಿ ವಲಯ ಮಟ್ಟದಲ್ಲಿ ನಡೆಯಿತು. ಇದರ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ಅಜೆಕಾರು ಚರ್ಚಿನ ಧರ್ಮಗುರುಗಳಾದ ವಂ|ಸುನೀಲ್ ಡಿಸಿಲ್ವಾ ‘ಸಂತ ಜುಜೆ ವಾಜರ ಜೀವನ ಚರಿತ್ರೆಯನ್ನು ವಿವರಿಸುತ್ತಾ, ಅವರು ದೊಡ್ಡ ದೊಡ್ಡ ಇಗರ್ಜಿಗಳನ್ನು ಕಟ್ಟಲಿಲ್ಲಾ, ಅವರು ಕ್ರೈಸ್ತ ಅನುಯಾಯಿಗಳಿಗೆ ಪ್ರಾರ್ಥನೆಯಲ್ಲಿ ತೊಡಗಲು, ವಿಶ್ವಾಸಿಗಳಾಗಲು ಚಿಕ್ಕ ಚಿಕ್ಕ ಗುಡಿಸಲುಗಳನ್ನು ಕಟ್ಟಿದರು, ಭ್ರಾತ್ರತ್ವ ಬಾಂಧವ್ಯವನ್ನು ಎನೆಂದು ತಿಳಿಸಿದ ಮಹಾನುಭಾವರಾಗಿದ್ದು ಸಂತ ಜುಜೆ ವಾಜ್ ಭ್ರಾತÅತ್ವವನ್ನು ತೊರಿಸಿಕೊಟ್ಟರು. ಅವರು ಕುಂದಾಪುರಕ್ಕೆ ಬರುವಾಗ ಪರಿಸ್ಥಿತಿ ಬಹಳ ಕೆಟ್ಟದಿತ್ತು, ಪೋಪರು ತಮ್ಮ ಅಧಿಕಾರ ಮತ್ತು ಪೆÇರ್ಚುಗೀಸ್ ರಾಜರು ಅಧಿಕಾರದಂತೆ ನಡೆಯಬೇಕೆಂದು ಎರಡು ಕಡೆಗಳಿಂದಲೂ ಆಜ್ಞೆ ಹೊರಡಿಸಿದ್ದರು, ಆದರಿಂದ ಕ್ರೈಸ್ತರು ಗೊಂದಲ ಮತ್ತು ಸಮಸ್ಯೆಗಳಿಂದ ತೊಳಲಾಡುತಿದ್ದರು. ಆದರೆ ಅವರು ಪೋಪ್ ಮತ್ತು ಪೊರ್ಚುಗೇಸರಿಗೆ ತ್ರಪ್ತಿ ಪಡುವಂತೆ ಕ್ರೈಸ್ತ ಸಂದೇಶಗಳನ್ನು ಸಾರುತ್ತ ಕ್ರೈಸ್ತರ ಅನುಪಮ ಸೇವೆಯನ್ನು ಮಾಡಿದರು. ಯೇಸುವಿಗಾಗಿ, ಮುಂದೆ ಅವರು ಶ್ರೀಲಂಕಾದಲ್ಲಿ ತಮ್ಮ ಜೀವನವನ್ನೆ ಪಣಕಿಟ್ಟು, ಉಪವಾವಿದ್ದು, ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದರೂ ಅಲ್ಲಿ ತಮ್ಮ ಪ್ರವಚನಗಳಿಂದ, ಅದ್ಬುತಗಳಿಂದ ಮಹಾನರಾದರು. ಸಂತ ಜುಜೆವಾಜರು ಯೇಸುವಿನ ಸಂದೇಶದಂತೆ ಪರರಿಗೆ ಒಳಿತನ್ನು, ಉಪಕಾರಗಳನ್ನು, ಸತ್ಕಾರ್ಯಗಳನ್ನು ಮಾಡಲು ತಿಳಿಸಿದರು, ಅದರಂತೆ ನಾವು ಇವತ್ತು ನೆಡೆದುಕೊಳ್ಳುತ್ತೇವೆಯೊ ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ನಾವು ವಿಶ್ವಾಸಿಗಳಾಗಿದ್ದರೆ, ಆ ವಿಶ್ವಾಸವನ್ನು ಉಳಿಸಿಕೊಳ್ಳಲು ಯಾವ ಮಾರ್ಗವನ್ನು ಉಪಯೋಗಿಸುತ್ತೇವೆ ಎಂದು ಅರಿತುಕೊಳ್ಳೊಣ, ನಿಮ್ಮ ವಿಶ್ವಾಸ ಜೀವಂತ ಇರಬೇಕಾದರೆ ಇತರರಿಗೆ ಚಿಕ್ಕ ಚಿಕ್ಕ ಸಹಾಯ, ದಯೆಗಳಂತಹ, ಸತ್ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ನಾವುಗಳು ವಿಶ್ವಾಸದ ಮಂದಿರಗಳಗಾಬೆಕು. ಅದಕ್ಕಾಗಿ ಭ್ರಾತ್ರತ್ವ  ಬಾಂಧವ್ಯವನ್ನು ಗಟ್ಟಿಗಳಿಸುವ ದಿನನಿತ್ಯದ ದಿನಚರಿ ನಿಮ್ಮದಾಗಾಬೇಕು’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಚರ್ಚ್ ಹಾಗೂ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಸಂತ ಜುಜೆ ವಾಜರ ಪ್ರಾರ್ಥನೆಯನ್ನು ನೆಡೆಸಿಕೊಟ್ಟರು. ಪ್ರಾಂಶುಪಾಲ ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಧರ್ಮಗುರುಗಳಾದ ವಂ|ಫಾ| ಕ್ಷೇವಿಯರ್ ಪಿಂಟೊ, ವಂ|ಫಾ|ಆಲ್ಬರ್ಟ್ ಕ್ರಾಸ್ತಾ, ವಂ|ಫಾ| ಜೋನ್ ಆಲ್ಫ್ರೆಡ್ ಬಾರ್ಬೊಜಾ, ವಂ| ಸಿರಿಲ್ ಮಿನೇಜೆಸ್, ವಂ|ಚಾಲ್ರ್ಸ್ ಲುವೀಸ್ ಮತ್ತು ಅತಿಥಿ ಧರ್ಮಗುರುಗಳು ಈ ಉತ್ಸ್ವದ ಬಲಿದಾನದಲ್ಲಿ ಭಾಗವಹಿಸಿದ್ದ ಈ ಉತ್ಸವದಲ್ಲಿ ಹಲವಾರು ಧರ್ಭಗಿನಿಯರು, ಕುಂದಾಪುರ ವಲಯದ ಅನೇಕ ಚರ್ಚಗಳ ಅಪಾರಾ ಭಕ್ತಾಧಿಗಳು ಪಾಲುಗೊಂಡರು, ಕುಂದಾಪುರ ಪಾಲನ ಮಂಡಳಿ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು.