ಕೋಲಾರ: ಅಪರಾಧಳನ್ನು ಬೇಧಿಸಲು ಹಾಗೂ ಕಡಿಮೆ ಮಾಡಲು ಬೈಕ್‍ಗಳ ಸೇವೆ ಅಗತ್ಯ ಹೋಂಡಾ ಕಂಪನಿ.ಎಸ್.ಆರ್ ಅನುದಾನದಲ್ಲಿ 50 ಬೈಕ್‍ಗಳನ್ನು  ನೀಡಿರುವುದು ಶ್ಲಾಘನೀಯ.  ಕೇಂದ್ರ ವ. ಐಜಿಪಿ :ಶರತ್ ಚಂದ್ರ

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

ಕೋಲಾರ: ಅಪರಾಧಳನ್ನು ಬೇಧಿಸಲು ಹಾಗೂ ಕಡಿಮೆ ಮಾಡಲು ಬೈಕ್‍ಗಳ ಸೇವೆ ಅಗತ್ಯ ಹೋಂಡಾ ಕಂಪನಿ.ಎಸ್.ಆರ್ ಅನುದಾನದಲ್ಲಿ 50 ಬೈಕ್‍ಗಳನ್ನು  ನೀಡಿರುವುದು ಶ್ಲಾಘನೀಯ.  ಕೇಂದ್ರ ವ. ಐಜಿಪಿ :ಶರತ್ ಚಂದ್ರ

ಕೋಲಾರ: ಅಪರಾಧಳನ್ನು ಬೇಧಿಸಲು ಹಾಗೂ ಕಡಿಮೆ ಮಾಡಲು ಬೈಕ್‍ಗಳ ಸೇವೆ ಅಗತ್ಯ ಹೋಂಡಾ ಕಂಪನಿ.ಎಸ್.ಆರ್ ಅನುದಾನದಲ್ಲಿ 50 ಬೈಕ್‍ಗಳನ್ನು  ನೀಡಿರುವುದು ಶ್ಲಾಘನೀಯಎಂದು ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಅವರು ತಿಳಿಸಿದರು.   

   ಇಂದು ನಗರದ  ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ, ಚಾಲನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಿಗೆ ಏನಾದರೂ ತೊಂದರೆ ಆದಲ್ಲಿ ಕ್ಷಣಾರ್ಧದಲ್ಲಿ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೋಂಡಾ ಕಂಪನಿಯವರು ಸಿ.ಎಸ್.ಆರ್ ಅನುದಾನದಲ್ಲಿ 50 ಗಾಡಿಗಳನ್ನು ನೀಡಿರುವುದು ಶ್ಲಾಘನೀಯ.  ಹೋಂಡಾ ಕಂಪನಿ ಜಿಲ್ಲೆಯಲ್ಲಿ ಹಲವಾರು ಸಮಾಜಮುಕಿ ಕಾರ್ಯಗಳಲ್ಲಿ ತೊಡಿಗಿಸಿಕೊಂಡಿದೆ. ರಾತ್ರಿ ವೇಳೆ ಒಂಟಿಯಾಗಿ  ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹೋಗುವಾಗ ಮತ್ತು ಡ್ರಾಪ್ ಕೇಳುವ ನೆಪದಲ್ಲಿ  ಕೊಲೆ ಮಾಡಿರುವ ಪ್ರಕರಣಗಳು ಹೆಚ್ಚಾಗಿ ನಡೆದಿರುವ ಉದಾಹರಣೆಗಳಿವೆ. ಆದ್ದರಿಂದ  ಪೆಟ್ರೋಲಿಂಗ್ ವಾಹನಗಳಿದ್ದಲ್ಲಿ  ಪುಂಡ  ಪೋಕರಿಗಳ ಹಾವಳಿ, ಬೀದಿ ಕಾಮಣ್ಣರಿಗೆ ಬುದ್ದಿಕಲಿಸಲು ಉತ್ತಮ ಅವಕಾಶ. ಹೋಂಡಾ ಕಂಪನಿಯಿಂದ ನೀಡಿರುವ ಬೈಕ್‍ಗಳಿಂದ ಅಪರಾಧಗಳನ್ನು ತಡೆಗಟ್ಟಲು ಹಾಗೂ ಶೀಘ್ರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.

ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಮಾತನಾಡಿ,  ಹೊಂಡಾ ಕಂಪನಿಯ ಬಹು ದೊಡ್ಡ ಕಂಪನಿಯಾಗಿದೆ.  ಇಂತಹ ಕಂಪನಿ ಕೋಲಾರ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ. ಹೊಂಡಾ ಕಂಪನಿಯವರು ಇಂದು ಸುಮಾರು 40 ಲಕ್ಷ ರೂಪಾಯಿ ಬೆಲೆ ಬಾಳುವ ಗಾಡಿಗಳನ್ನು ನೀಡಿದ್ದಾರೆ. ಇದಲ್ಲದೆ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ, ಅಂಗವಿಕಲರಿಗೆ  ಮೂರು ಚಕ್ರದ ಗಾಡಿ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಕೆಜಿಎಫ್‍ನಲ್ಲಿ ಸ್ಟೇಡಿಂಗ್ ನಿರ್ಮಾಣ, ಮಾಲೂರಿನಲ್ಲಿ ಒಳಾಂಗಣ ಕ್ರೀಡಾಂಗಣ, ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 1100 ಬೀದಿ ದೀಪಗಳ ಅಳವಡಿಕೆ, ಹಲವು ಕಡೆ ಶುದ್ಧ ನೀರಿನ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೀಗೆ ಹತ್ತು ಹಲವಾರು ವಿಧಗಳಲ್ಲಿ ನಮಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಅದರಂತೆ ಇಂದು  ಪೊಲೀಸ್ ಇಲಾಖೆಗೆ  50 ಗಾಡಿಗಳನ್ನು ನೀಡಿ  ಮಕ್ಕಳ ಹಾಗೂ ಮಹಿಳೆಯರ ಹಿತ ಕಾಪಾಡಲು ಮತ್ತಷ್ಟ ಉತ್ತೇಜನ ನೀಡಿರುವುದು ಶ್ಲಾಘನೀಯ. ಇಂತಹ ಸೇವೆ ಇನ್ನೂ ಹೆಚ್ಚು ಹೆಚ್ಚು ಮುಂದುವರೆಯಲಿ ಎಂದು ಕೃತಜ್ಞತೆ ತಿಳಿಸಿದರು. 

ಹೊಂಡಾ ಮೋಟಾರ್ ಸೈಕಲ್ ಕಂಪನಿಯ ಡೈರೆಕ್ಟರ್ ಆದ ಹರ್ಭಜನ್ ಸಿಂಗ್ ಅವರು ಮಾತನಾಡಿ, 2013 ರಲ್ಲಿ ನರಸಾಪುರದ ಬಳಿ ಹೋಂಡಾ ದ್ವಿಚಕ್ರ ವಾಹನಗಳ ಉತ್ಪಾದನ ಘಟಕಗಳನ್ನು ಸ್ಥಾಪಿಸಲಾಯಿತು. ಇದು ಇಂದು ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಘಟಕವಾಗಿ ಬೆಳೆದಿದೆ. ಹೊಂಡಾ ಕಂಪನಿಯು ಸುರಕ್ಷತೆ ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಅಂದರೆ ಪ್ರತಿ 4 ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅಪಘಾತವಾದಾಗ ಹತ್ತಿರದಲ್ಲಿದ್ದವರು ತಕ್ಷಣ ಆಸ್ಪತ್ರೆಗಳಿಗೆ ಸೇರಿಸುವುದರಿಂದ ವ್ಯಕ್ತಿಯ ಪ್ರಾಣ ಉಳಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜ್ಞಾನದ ಕೊರತೆ, ಅತಿ ವೇಗ ಹಾಗೂ ರಸ್ತೆಯ ಸ್ಥಿತಿಗತಿಗಳಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಹೊಂಡಾ ಕಂಪನಿಯ ಉಪಾಧ್ಯಕ್ಷರಾದ ಹಿರೋಕಿ ಸುಭಾಚಿ, ಆಪರೇಟಿಂಗ್ ಹೆಡ್ ನವೀನ್ ಅಹವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಹೆಚ್.ವಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.