ಬಿಲ್ಲವರ ಅವಹೇಳನ ಉಗ್ರ ಹೋರಾಟದ ಎಚ್ಚರಿಕೆ

JANANUDI.COM NETWORK

 

 

ಬಿಲ್ಲವರ ಅವಹೇಳನ ಉಗ್ರ ಹೋರಾಟದ ಎಚ್ಚರಿಕೆ 

 

 

ಕುಂದಾಪುರ : ಹತ್ತನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಕುರಿತು 17.12.2019ರಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೊಟೇಲೋದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವರ ಕುರಿತು ಅವಹೇಳನ ಗೈದ ರೀತಿಯಲ್ಲಿ ಆಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಎಂದು ಬಿಲ್ಲವ ಯುವ ಬಳಗದವರು ನಿನ್ನೆ ಕುಂದಾಪುರದಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಅಗ್ರಹಿಸಿದ್ದಾರೆ.
ಅಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಘವೆಂದ್ರ ರಾವ್ ಮೈಕಿನಲ್ಲಿ ಮಾತನಾಡುವ ಭರದಲ್ಲಿ “ ನಮ್ಮ ಭಾಗದಲ್ಲಿ ಹೊಟೇಲ್ ಉದ್ಯಮ ಮೇಜರ್ ಉದ್ಯಮ ಇಡೀ ಬೆಂಗಳೂರಿನಲ್ಲಿ ಕುಂದಾಪುರದವರೇ ಡಾಮಿನೇಟ್ ಗಾಣಿಗರು, ಪೂಜಾರ್, ಹಳೆ ಪೈದ ಇರಬಹುದು. ನಾವು ಬ್ರಾಹ್ಮಣ ಇರಬಹುದು ಆದರೆ ಇವತ್ತು ಬ್ರಾಹ್ಮಣರನ್ನೆಲ್ಲಾ ರುಬ್ಬುಗಲ್ಲಿಗೆ ಹಾಕಿ ರುಬ್ಬುತ್ತಾ ಇದ್ದಾರೆ. ಹೊಟೇಲ್ ನಲ್ಲಿ ಬ್ರಾಹ್ಮಣರು ಹಿಂದು ಹೋಗಿ ಆಯ್ತು, ಮುಂದಕ್ಕೆ ಬೇರೆ ಜಾತಿಯವರು ಹೋಗಿ ಆಯ್ತು ” ಎಂದು ಸಾರ್ವಜನಿಕವಾಗಿ ಬಿಲ್ಲವರ ಕುರಿತು ಕೀಳು ಮಟ್ಟ ದಲ್ಲಿ ಮಾತನಾಡಿದ್ದಾರೆ. ಈಗಾಗಲೇ ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ಬಗ್ಗೆ ಕುಂದಾಪುರದ ಬಿಲ್ಲವ ಸಮಾಜದ ವ್ಯಕ್ತಿಯೋರ್ವರು ಠಾಣೆಗೆ ರಾಘವೇಂದ್ರ ಅವರ ವಿರುದ್ಧ ದೂರು ಸಲ್ಲಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲಾ. ಮೇಲಾಗಿ ತಮ್ಮನ್ನು ಅವಮಾನಿಸಿದ ಕುರಿತು ಯಾವ ಬಿಲ್ಲವ ಸಂಘಟನೆಗಳೂ ಖಂಡಿಸದೇ ಇರುವುದು ಹಲವು ಅನುಮಾನಗಳಿಗೆಡೆ ಮಾಡಿಕೊಡುತ್ತಿದೆ. ಬಿಲ್ಲವ ಸಮುದಾಯದವರಾಗಿಯೂ, ಸಚಿವರಾಗಿಯೂ ಇರುವ ಕೋಟ ಶ್ರೀನಿವಾಸ ಪೂಜಾರಿಯವರು ಅಂದು ಮಂದರ್ತಿ ಮೇಳದಲ್ಲಿ ಬಿಲ್ಲವರಿಗೆ ಗೆಜ್ಜೆ ಕಟ್ಟದ ಸಮಯದಲ್ಲಿ ಮಂಚೂಣಿಯಲ್ಲಿದ್ದು, ಬಿಲ್ಲವರಿಗೆ ಮಾಡಿದ ಅಸ್ಪಶ್ರತೆಯ ವಿರುದ್ಧ ಸ್ವರ ಎತ್ತಿ ಬಿಲ್ಲವರಿಗೆ ಮೇಳದಲ್ಲಿ ಗೆಜ್ಜೆ ಕಟ್ಟಿಸಿಕೊಡುವುದರಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಇಲ್ಲೂ ಸಹಾ ಬಿಲ್ಲವರ ಬಗ್ಗೆ ಕೀಳು ಮಟ್ಟದಲ್ಲಿ ಅವಮಾನಿಸಿದವರ ಬಗ್ಗೆ ಕೋಟ ಪೂಜಾರಿಯವರು ಧ್ವನಿಯೆತ್ತ ಬೇಕಿದೆ.
ಒಂದು ವಾರದೊಳಗೆ ನಮ್ಮನ್ನು ಅವಮಾನಿಸಿದ ರಾಘವೇಂದ್ರ ರಾವ್ ಕ್ಷಮೆ ಯಾಚಿಸದಿದ್ದರೆ ಬಿಲ್ಲವ ಸಮುದಾಯದ ನಾವುಗಳು ರಾಜ್ಯದ ಮೂಲೆಮೂಲೆಯ ಠಾಣೆಗಳಲ್ಲಿ ದೂರು ಸಹಿತ ನ್ಯಾಯಾಲಂiÀiಗಳಲ್ಲಿ ಮಾನ ನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಎಚ್ಚರಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಬಿಲ್ಲವ ಯುವ ಮುಖಂಡರಾದ ಪ್ರಶಾಂತ್ ಪೂಜಾರಿ, ನಿತೀಶ್ ಪೂಜಾರಿ, ಸಂಗಮ್ ಪ್ರದೀಪ್ ಉಪಸ್ಥಿತರಿದ್ದರು.
.