16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೇಲಾಡಿ ವಿಠಲ ಶೆಟ್ಟಿ ಆಯ್ಕೆ

 

ವರದಿ: ವಾಲ್ಟರ್ ಮೊಂತೇರೊ

 

16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬೇಲಾಡಿ ವಿಠಲ ಶೆಟ್ಟಿ ಆಯ್ಕೆ

 

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಘಟಕ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 29ರಂದು ರವಿವಾರ ಜರಗಲಿರುವ 16ನೆಯ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಬೇಲಾಡಿ ವಿಠಲ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಶನಿವಾರ ಜರಗಿದ ಕಾರ್ಕಳ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್‍ನ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಒಮ್ಮವರದಿ: ವಾಲ್ಟರ್ ಮೊಂತೇರೊತದಿಂದ ಬೇಲಾಡಿ ವಿಠಲ ಶೆಟ್ಟಿಯವರ ಹೆಸರು ಆಯ್ಕೆ ಮಾಡಲಾಗಿದೆ ಎಂದು ಕಾರ್ಕಳ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ತಿಳಿಸಿದ್ದಾರೆ.
ಬೇಲಾಡಿ ವಿಠಲ ಶೆಟ್ಟಿಯವರು ಮಂಜೇಶ್ವರ ಪಳ್ಳತಡ್ಕ ಗ್ರಾಮದ ಬಿರ್ಮಣ್ಣ ಶೆಟ್ಟಿ ಮತ್ತು ಮಂಗಳೂರು ಅಡ್ಯಾರ ಗುತ್ತು ಬಾಗಿ ಶೆಟ್ಟಿಯವರ ಮಗನಾಗಿ 1936ರ ನವೆಂಬರ್ 18ರಂದು ಜನಿಸಿದ ಮಿಯಪದವು ವಿದ್ಯಾವರ್ಧಕ ಹಿರಿಯ ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಕನ್ನಡ ವಿದ್ವಾನ್ ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಪೂರೈಸಿ, ಉಜಿರೆಯಲ್ಲಿ ಬುನಾದಿ ಶಿಕ್ಷಕ ತರಬೇತಿ ಪೂರೈಸಿ 1955 ರಿಂದ 1995ರವರೆಗೆ ಬೇಲಾಡಿ ಹಿ.ಪ್ರಾ.ಶಾಲೆಯಲ್ಲಿ 40ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇವರ ಶಿಕ್ಷಕ ಅವಧಿಯಲ್ಲಿ 350 ಮಕ್ಕಳು 9 ಶಿಕ್ಷಕರು- ಎಲ್ಲಾ ಮೂಲಭೂತ ಸೌಕರ್ಯಗಳ ಮಾದರಿ ಶಾಲೆಯಾಗಿತ್ತು. ನಿರಂತರ 37 ವರ್ಷ 100% ಫಲಿತಾಂಶವನ್ನು ಬೇಲಾಡಿ ಶಾಲೆ ಇವರ ಅವಧಿಯಲ್ಲಿ ಪಡೆದಿರುತ್ತದೆ. ಇವರ ಶಾಲೆಯ ಗ್ರಂಥಾಲಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪುಸ್ತಕ ಸಂಗ್ರಹವಿದ್ದು. 1980ರಲ್ಲಿ ಇವರಿಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 1984ರಲ್ಲಿ ರಾಷ್ಟ್ರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯದ ಅನೇಕ ಕಡೆಗಳಲ್ಲಿ ವಿವಿಧ ಗೌರವ ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ. ಸುಮಾರು 60 ವರ್ಷಗಳಿಂದ ನಾಡಹಬ್ಬ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಲ್ಲಿ ನಡೆಸುತ್ತಿರುವ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಯಕ್ಷಗಾನದಲ್ಲಿ ತುಳು ಮತ್ತು ಕನ್ನಡದ ಹೆಚ್ಚಿನ ಪ್ರಸಂಗದಲ್ಲಿ ಜಿಲ್ಲೆಯ ನಾನಾ ಕಡೆ ಇವರು ಹವ್ಯಾಸಿ ಸ್ತ್ರೀ ಪಾತ್ರ ನಿರ್ವಹಿಸುತ್ತಿದ್ದು, ಸಾಹಿತ್ಯ ಯಕ್ಷಗಾನ ಮತ್ತು ಶೈಕ್ಷಣಿಕ ಉಪನ್ಯಾಸ ಇವರ ಹವ್ಯಾಸಗಳು. ಯಕ್ಷಗಾನದಲ್ಲಿ ಚಂದ್ರಮಮತಿ, ದಮಯಂತಿ, ಸೀತೆ, ದ್ರೌಪದಿ ಇವರ ಮೆಚ್ಚಿನ ಪಾತ್ರಗಳು. ದೂರದರ್ಶನದಲ್ಲಿ ಸಂದರ್ಶನವನ್ನು ನೀಡಿದ್ದ ಇವರು, ಸನ್ಮಾನ ಮತ್ತು ಸಂಪದ, ಪಯಣ ಪುಸ್ತಕ ಪ್ರಕಟಗೊಂಡಿದ್ದು ಅನೇಕ ಪತ್ರಿಕೆಗಳಲ್ಲಿ ಲೇಖನ, ಕವನಗಳು ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ತುಳು, ಕನ್ನಡದಲ್ಲಿ ಚಿಂತನ, ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. 40 ವರ್ಷ ಬೇಲಾಡಿ ಅಂಚೆ ಕಚೇರಿಯಲ್ಲಿ ಬಿ.ಪಿ.ಎಂ. ಆಗಿ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಅಂಚೆ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ಸಾವಿರಾರು ಸಾಧಕರ ಸನ್ಮಾನದ ಪರಿಚಯವನ್ನು ಬರೆದಿರುವ ಇವರು ಕಾಂತಾವರ ಕನ್ನಡ ಕನ್ನಡ ಸಂಘ ಸ್ಥಾಪನೆಯಾಗಿ 25 ವರ್ಷ ಬೇಲಾಡಿ ಶಾಲಾಯಲ್ಲಿಯೇ ಕಚೇರಿ ನಿರ್ವಹಿಸಿದ ಇವರು ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜೊತೆಗೆ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪರಿಸರದ ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯದರ್ಶಿ, ಸದಸ್ಯನಾಗಿ ಸೇವೆ ಸಲ್ಲಸಿರುತ್ತಾರೆ. ವೃತ್ತಿ ಜೀವನದ ನಿವೃತ್ತಿಯ ನಂತರವು ಶಾಲೆಯ ಮತ್ತು ದೇವಸ್ಥಾನದ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದಾರೆ.