ತ್ರಾಸಿ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಅಪಘಾತ : ಗಂಗೊಳ್ಳಿ ಬೈಂದೂರಿನ ಮಧ್ಯ ಪ್ರಾಯದ ಇಬ್ಬರು ಸವಾರರ ದಾರುಣ ಸಾವು

JANANUDI.COM NETWORK

 

ತ್ರಾಸಿ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಅಪಘಾತ : ಗಂಗೊಳ್ಳಿ ಬೈಂದೂರಿನ ಮಧ್ಯ ಪ್ರಾಯದ ಇಬ್ಬರು ಸವಾರರ ದಾರುಣ ಸಾವು

ಅಬ್ದುಲ್ ರಹಿಂ                                                 ಶಾದಾಬ್

 

ಕುಂದಾಪುರ, ಡಿ.1:  ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ಜಂಕ್ಷನಲ್ಲಿ ಬೈಕಗೆ ಟೆಂಪೊ ಟ್ರಾವೇಲರ್ ಡಿಕ್ಕಿಯಾಗಿ ಒರ್ವ ಗಂಗೊಳ್ಳಿ ಮತ್ತು ಮತ್ತೋರ್ವ ಬೈಂದೂರಿನ ಬೈಕ್ ಸವಾರರಾದ ಇಬ್ಬರು ಮಧ್ಯ ವಯಸ್ಕ ಸವಾರರು ಸ್ಥಳಲ್ಲೆ ಅಸು ನೀಗಿದ್ದ ದುಖಕರ ಘಟನೆ ನವೆಂಬರ್ 30 ರಂದು  ನಡೆದಿದೆ.

ಗಂಗೊಳ್ಳಿ ಮೊಹಲ್ಲಾ ನಿವಾಸಿ ವ್ರತ್ತಿಯಲ್ಲಿ ಮೀನು ಸಾಗಟ ವಾಹನದ ಚಾಲಕರಾದ ಶಾದಾಬ್ (40) ಹಾಗೂ ಬೈಂದೂರಿನ ಅಡುಗೆ ವ್ರತ್ತಿಯ ಅಬ್ದುಲ್ ರಹಿಂ (55) ಅಸು ನೀಗಿದವರಾಗಿದ್ದಾರೆ. ರಹಿಂ ಪತ್ನಿ ಇಬ್ಬರು ಪುತ್ರರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಆಲೂರು ಕಡೆಯಿಂದ ಗಂಗೊಳ್ಳಿ ಕಡೆಗೆ ಸಾಗುತಿದ್ದ ಬೈಕಗೆ ಬೈಂದೂರರಿನಿಂದ ಮಲ್ಪೆಗೆ ತೆರಳುತಿದ್ದ ಟೆಂಪೊ ಟ್ರಾವೇಲರ್ ಡಿಕ್ಕಿಯಾಯಿತು. ಒರ್ವ ಸ್ಥಳದಲ್ಲೆ ಮ್ರತ ಪಟ್ಟರೆ ಮತ್ತೋರ್ವ ಆಸ್ಪತ್ರೆಗೆ ಸಾಗಿಸುತಿದ್ದಾಗ ಮ್ರತ ಪಟ್ಟಿದ್ದಾರೆಂದು ತಿಳಿದು ಬಂದಿದೆ. ಗಂಗೊಳ್ಳಿ ಪೊಲೀಸರು ತನಿಕೆಯನ್ನು ಕೈಗೊಂಡ್ಡಿದ್ದಾರೆ.
ಈ ಹೆದ್ದಾರಿ ರಚನೆಯಾಗಿ ೬ ದಶಕಗಳೆ ಕಳೆದರೂ, ಎಲ್ಲಿ ಕೂಡ ಹೆದ್ದಾರಿಗೆ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ದುಖಕರ ಸಂಗತಿ. ಈಗ ಅಂತೂ ಹೆದ್ದಾರಿ ನವೀಕರಣಗೊಂಡು ಎಲ್ಲಾ ಕಡೆ ಅಪಾಯಕಾರಿ ಕ್ರಾಸಿಂಗ್ ಗಳು ಉದ್ಬವಿಸಿವೆ. ಎಲ್ಲಿಯೂ ಕೂಡ ವೈಜ್ನಾನಿಕ ಆಧುನಿಕರಣ ಮಾರ್ಪಾಡು ಮಾಡದೆ ಮುಂದಾಲೋಚನೆ ಮಾಡದೆ, ವಿವೇಕ ಇಲ್ಲದ್ದೆ ಹೆದ್ದಾರಿ ಪುನರಚನೆ ಮಾಡಿರುವುದೇ ಅಪಘಾತಕ್ಕೆ ಕಾರಣವಾಗಿದೆ. ಕೆಲವರು ಮಾತ್ತೇದಿದರೆ ನಾವು ಜಗತ್ ಗುರುಗಳಾಗುತ್ತೇವೆ ಎಂದು ಬೊಗಳೆ ಕೊಚ್ಚಿಕೊಳ್ಳುತ್ತಾರೆ. ಒಮ್ಮೆ ವಿದೇಶದತ್ತ ತಿರುಗಿ ನೋಡಿ ಆವಾಗ ಸ್ಪಷ್ಟವಾಗುತ್ತೆ ನಾವೇಷ್ಟು ಹಿಂದೆ ಇದ್ದೆವೆಯೆಂದು. ಇಂತಹ ನಾಲಾಯಕ್ ಕಾಮಾಗಾರಿಗಳಿಂದ ಮನುಷ್ಯರು ದೀನ ನಿತ್ಯ ಪ್ರಾಣ ತೆತ್ತೆತ್ತಾರೆ. ನಮ್ಮನ್ನು ಆಳುವರು ಜನರ ಸಮಸ್ಯೆಗೆ ಸ್ಪಂದಿಸುವುದಿಲ್ಲಾ, ಇವರ ಹತ್ತಿರ ಜನರ ಪ್ರಾಣಾಕ್ಕೆ ಬೆಲೆಯಿಲ್ಲವಾಗಿದೆ. ನಿಜಕ್ಕೂ ಇದು ನಮ್ಮ ದೇಶದ ದುರ್ದೈವ