ಕೆಜಿಎಫ್ : ಶಾಂತಿಯುತವಾಗಿ ಈದ್-ಮಿಲಾದ್ ಆಚರಣೆ, ಎಸ್.ಪಿ. ಸುಜೀತ ಕರೆ

ಸಂಖ್ಯೆ: ಪ್ರೆಸ್/121/2019 ಜಿಲ್ಲಾ ಪೊಲೀಸ್ ಕಛೇರಿ,   
ಕೋಲಾರ ಚಿನ್ನದಗಣಿ ಪ್ರದೇಶ.
ದಿನಾಂಕ: 06.11.2019.

“ಪತ್ರಿಕಾ ಪ್ರಕಟಣೆ”

ಕೆಜಿಎಫ್ : ಶಾಂತಿಯುತವಾಗಿ ಈದ್-ಮಿಲಾದ್ ಆಚರಣೆ, ಎಸ್.ಪಿ. ಸುಜೀತ ಕರೆ

ಕೆಜಿಎಫ್., ನ. 6 :
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಈದ್-ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕರೆ ನೀಡಿದರು.
ಅವರು ಬುಧವಾರದಂದು ಸಂಜೆ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ, ಕೆಜಿಎಫ್‌ನಲ್ಲಿ ಇದುವರೆವಿಗೂ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಲ್ಲಾ ಸಮುದಾಯದವರು ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ, ಅದೇ ರೀತಿ ಈ ಬಾರಿ ಈದ್-ಮಿಲಾದ್ ಹಬ್ಬವನ್ನು ಸಹ ಶಾಂತಿಯುತವಾಗಿ ಆಚರಿಸಲು ಸಹಕರಿಸಬೇಕೆಂದು ಜಿಲ್ಲಾ ಎಸ್ಪಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ಕೋರಿದರು.
ಡಿವೈಎಸ್ಪಿ ಬಿ.ಎಲ್. ಶ್ರೀನಿವಾಸಮೂರ್ತಿ ಅವರು ಮಾತನಾಡಿ, ಈದ್-ಮಿಲಾದ್ ಹಬ್ಬದ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ನಿಯಮಾನುಸಾರ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿಯನ್ನು ಪಡೆದು ಕಾರ್ಯಕ್ರಮವನ್ನು ನಡೆಸುವಂತೆ ಕರೆ ನೀಡಿದರು.
ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳ ಮುಸ್ಲಿಂ ಸಮುದಾಯದವರು ಸಭೆಯಲ್ಲಿ ಭಾಗವಹಿಸಿದ್ದು, ಹಿಂದಿನಿAದಲೂ ನಡೆಸಿಕೊಂಡು ಬಂದಿರುವ ಪದ್ದತಿಗಳನ್ನು ಮುಂದುವರೆಸಿಕೊAಡು ಹೋಗುವುದಾಗಿ, ಯಾವುದೇ ರೀತಿಯಲ್ಲೂ ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್‌ಗಳು ಮುಸ್ತಾಕ್‌ಪಾಷ, ಬಿ.ಎನ್.ಶ್ರೀಕಂಠಯ್ಯ, ಎಂ.ಸೂರ್ಯಪ್ರಕಾಶ್, ವೆಂಕಟರಮಣಪ್ಪ, ವೆಂಕಟೇಶಮೂರ್ತಿ, ಜಿ.ಸಿ.ರಾಜು, ಶಿವರಾಜ್‌ಮುಧೋಳ್, ಆರ್‌ಪಿಐ ಟಿ.ಮಂಜುನಾಥ ಮತ್ತು ಜಿಲ್ಲೆಯ ಪಿಎಸ್‌ಐಗಳು ಹಾಜರಿದ್ದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ