ಮುಬಾರಕ್ ಕಾಂಗ್ರೆಸ್‍ಗೆ ಸೇರ್ಪಡೆ-ಜೆಡಿಎಸ್‍ಗೆ ಭಾರಿ ಹಿನ್ನಡೆ: ಕೋಲಾರ ನಗರಸಭೆ ವಶಕ್ಕೆ ಸಂಸದ ಕೆ.ಎಚ್.ಮುನಿಯಪ್ಪ ಗಾಳ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಮುಬಾರಕ್ ಕಾಂಗ್ರೆಸ್‍ಗೆ ಸೇರ್ಪಡೆ-ಜೆಡಿಎಸ್‍ಗೆ ಭಾರಿ ಹಿನ್ನಡೆ: ಕೋಲಾರ ನಗರಸಭೆ ವಶಕ್ಕೆ ಸಂಸದ ಕೆ.ಎಚ್.ಮುನಿಯಪ್ಪ ಗಾಳ

ಕೋಲಾರ:- ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳದ ಅನೇಕ ಮುಖಂಡರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್‍ಗುಂಡೂರಾವ್ ಹಾಗೂ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಬರಮಾಡಿಕೊಂಡರು.
ಕೋಲಾರ ನಗರಸಭೆ ಅಧ್ಯಕ್ಷರಾಗಿ ಕಸ ವಿಲೇವಾರಿ,ನೀರು ವಿತರಣೆಯಲ್ಲಿ ಉತ್ತಮ ಹೆಸರು ಪಡೆದಿದ್ದ ಮುಬಾರಕ್, ಕಸ ವಿಲೇವಾರಿಗೆ ಮಾಡಿದ ಕೆಲಸ ಹಾಗೂ ಅನುಸರಿಸದ ತಂತ್ರಜ್ಞಾನವನ್ನು ವೀಕ್ಷಿಸಲು ವಿಶ್ವದ ಹತ್ತರು ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು.
ಜನಪರ ಕೆಲಸದ ಮೂಲಕ ಉತ್ತಮ ಹೆಸರು ಗಳಿಸಿದ್ದ ಮುಬಾರಕ್ ಅಲ್ಪಸಂಖ್ಯಾತರಾದರೂ, ಹಿಂದೂ ಸ್ನೇಹಿತರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದು, ಇವರ ನಿರ್ಗಮನದಿಂದ ಕೋಲಾರದಲ್ಲಿ ಜೆಡಿಎಸ್‍ಗೆ ಭಾರಿ ಹೊಡೆತ ಬಿದ್ದಂತಾಗಿದೆ.
ನಗರಸಭೆ ಚುನಾವಣೆ ಘೋಷಣೆಯಾಗಿರುವ ಈ ಸಂದರ್ಭದಲ್ಲಿ ಜೆಡಿಎಸ್‍ಗೆ ಮುಬಾರಕ್ ರಾಜೀನಾಮೆ ಭಾರಿ ಹಿನ್ನಡೆ ಎಂದೇ ಪರಿಗಣಿಸಲಾಗಿದ್ದು, ನಗರದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್ ಛಿದ್ರವಾಗಿ ಹಿನ್ನಡೆಯಾಗಲಿದೆ ಎಂದೇ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಜೆಡಿಎಸ್ ತ್ಯಜಿಸುವ ಮುನ್ನವೂ ನೇರವಾಗಿ ಶಾಸಕ ಶ್ರೀನಿವಾಸಗೌಡರನ್ನು ಭೇಟಿಯಾಗಿ ತಾವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದಾಗಿ ಹೇಳಿಯೇ ತಮ್ಮ ಬೆಂಬಲಿಗರೊಂದಿಗೆ ಬೆಂಗಳೂರಿಗೆ ತೆರಳಿ ಅಧಿಕೃತವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ಧಾರೆ.
ಬುಧವಾರ ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ನೇತೃತ್ವದಲ್ಲಿ ಮಾಜಿ ಉಪಾಧ್ಯಕ್ಷೆ ನಾರಾಯಣಮ್ಮ, ಮಾಜಿ ಸದಸ್ಯರಾದ ನದೀಮ್ ಹೈದರ್, ಅಸ್ಲಂ ಪಾಷ, ಮೋಹನ್ ಪ್ರಸಾದ್‍ಬಾಬು, ಅಬ್ದುಲ್ ನವಾಜ್, ನಿಸಾರ್ ಅಹಮದ್, ಜೆಡಿಎಸ್ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ವಿ.ರಾಜೇಶ್, ಯುವಜನತಾದಳ ಜಿಲ್ಲಾ ಉಪಾಧ್ಯಕ್ಷ ಆರ್.ಸುಬ್ರಮಣಿ, ಜಗದೀಶ್, ತಾಲ್ಲೂಕು ಮಾಜಿ ಅಧ್ಯಕ್ಷ ವಿ.ನಾಗಭೂಷಣ, ಜಿಲ್ಲಾ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಹಿರಿಯ ಉಪಾಧ್ಯಕ್ಷ ರಬರೇಜ್ ಅಹಮದ್ ಸೇರ್ಪಡೆಗೊಂಡರು.
ಅವರಲ್ಲದೇ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೆ.ರಾಜೇಶ್, ಯುವ ಪ್ರಧಾನ ಕಾರ್ಯದರ್ಶಿ ಕಾಶಿ ವಿಶ್ವನಾಥ್, ಮುಖಂಡರಾದ ಆನಂದ್ ಮತ್ತಿತರರು ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ಕಳೆದ ವಿಧಾನಸಭಾ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೈಯದ್ ಜಮೀರ್ ಪಾಷ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಜಯದೇವ್, ಕುಮಾರ್, ಪ್ರಸಾದ್‍ಬಾಬು, ನೌಕರರ ಸಂಘದ ರಾಜ್ಯ ಮಾಜಿ ಉಪಾಧ್ಯಕ್ಷ ಎಲ್.ಎ.ಮಂಜುನಾಥ್ ಮತ್ತಿತರರು ಹಾಜರಿದ್ದರು.