ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ

ಶ್ರೀನಿವಾಸಪುರದಲ್ಲಿ ಶನಿವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ ಉದ್ಘಾಟಿಸಿದರು.

ಶ್ರೀನಿವಾಸಪುರ: ರೈತರು  ಕಡಿಮೆ ನೀರು ಬಳಸಿ ಅಧಿಕ ಉತ್ಪಾದನೆ ಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ  ಹೇಳಿದರು.

  ಪಟ್ಟಣದ ವೆಂಕಟೇಶಗೌಡ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೋಲಾರದ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಲ ಶಕ್ತಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಕೋಲಾರ ಜಿಲ್ಲೆಯ ರೈತರು ನೀರಿನ ಕೊರತೆಯ ನಡುವೆಯೂ ವೈಜ್ಞಾನಿಕವಾಗಿ ಜಲ ನಿರ್ವಹಣೆ ಮಾಡುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

  ಐಸಿಎಆರ್‌ನ ಹಿರಿಯ ವಿಜ್ಞಾನಿ ಕೆ.ತುಳಸಿರಾಮ್‌ ಮಾತನಾಡಿ, ರೈತರು ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂತರ್ಜಲ ವೃದ್ಧಿಸಲು ಪೂರಕವಾದ ಕಾರ್ಯಗಳನ್ನು ಕೈಗೊಳ್ಳಬೇಕು. ಹನಿ ನೀರಾವರಿ,  ತುಂತುರು ನೀರಾವರಿ, ಕೃಷಿ ಹೊಂಡ ಹಾಗೂ ಹಾಳೆ ಬೇಸಾಯದ ಮೂಲಕ ನೀರನ್ನು ಹೆಚ್ಚು ಜೋಪಾನವಾಗಿ ಬಳಸಬೇಕು ಎಂದು ಹೇಳಿದರು.

  ಕೋಲಾರ ಜಿಲ್ಲೆಯ ರೈತರು ಕೃಷಿ ಹಾಗೂ ತೋಟಗಾರಿಕೆಯಲ್ಲಿ ನೀರು ಬಳಕೆ ಮಾಡುವುದರಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ವೈಜ್ಞಾನಿಕ ಚಿಂತನೆ ಫಲವಾಗಿ ಬದುಕು ಸಾಗುತ್ತಿದೆ ಎಂದು ಹೇಳಿದರು.

  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ನರೇಶ್‌, ಕೋಚಿಮುಲ್‌ ಮಾಜಿ ಅಧ್ಯಕ್ಷ ಎನ್‌.ಜಿ.ಬ್ಯಾಟಪ್ಪ, ಸಹ ವಿಸ್ತರಣಾ ನಿರ್ದೇಶಕ ಡಾ. ಟಿ.ಬಿ.ಬಸವರಾಜು, ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ನಯೀಮ್‌ ಪಾಷ, ಸಹಾಯಕ ಪ್ರಾಧ್ಯಾಪಕಿ ಡಾ. ಟಿ.ಜಿ.ಅಮೃತ, ಡಾ. ಎಸ್‌.ಅನಿಲ್‌ ಕುಮಾರ್‌ ಮಾತನಾಡಿದರು.

  ತೋಟಗಾರಿಕಾ ವಿಜ್ಞಾನಿಗಳಾದ ಡಾ. ಕೆ.ಎಸ್‌.ನಾಗರಾಜ್‌, ಡಾ.ಕೆ.ಆರ್‌.ಶಶಿಧರ್‌, ಡಾ. ಡಿಎಸ್‌.ಅಂಬಿಕಾ, ಡಾ. ಜಿ.ಎಸ್‌.ಚಿಕ್ಕಣ್ಣ, ಜೆ.ಆರ್‌.ಸಾವಿತ್ರಿ, ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ.ಬೈರಾರೆಡ್ಡಿಇದ್ದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌, ಕೃಷಿ ಇಲಾಖೆ ಸಹಾಯಕ ನಿರ್ದೇಸಕ ರಾಮಕೃಷ್ಣ, ತೋಟಗಾರಿಕೆ ಅಧಿಕಾರಿ ಹರೀಶ್‌ ಇದ್ದರು.