ಕೋಲಾರ: ಸರ್ಕಾರಿ ಜಮೀನನ್ನು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ನೀಡಿದಕ್ಕೆ ವಿರೋಧ, ಜಮೀನನ್ನು ವಾಪಸು ಪಡೆದು ರೈತ್ರರ ಅನುಕೂಲಕ್ಕಾಗಿ ಬಳಸಬೆಕೆಂದು ರೈತರ ವತ್ತಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಕೋಲಾರ: ಸರ್ಕಾರಿ ಜಮೀನನ್ನು ಖಾಸಗಿ ಆಸ್ಪತ್ರೆ ಸ್ಥಾಪನೆಗೆ ನೀಡಿದಕ್ಕೆ ವಿರೋಧ, ಜಮೀನನ್ನು ವಾಪಸು ಪಡೆದು ರೈತ್ರರ ಅನುಕೂಲಕ್ಕಾಗಿ ಬಳಸಬೆಕೆಂದು ರೈತರ ವತ್ತಾಯ

ಕೋಲಾರ, ಅ-17, ತೋಟಗಾರಿಕಾ ಮಹಾವಿದ್ಯಾಲಯಕ್ಕೆ ಸೇರಿದ ಸರ್ಕಾರಿ ಜಮೀನನ್ನು ಖಾಸಗಿ ಮಾಲೀಕತ್ವದ ಜಾಲಪ್ಪ ಆಸ್ಪತ್ರೆಯ ಸ್ಥಾಪನೆಗೆ ನೀಡಿರುವ ಕಸಬಾ ಹೋಬಳಿ ನಡುಪಳ್ಳಿ ಸರ್ವೇ ನಂ.115ರಲ್ಲಿ 10 ಎಕರೆ ಜಮೀನನ್ನು ಕೂಡಲೇ ವಾಪಸ್ಸು ಪಡೆದು ರೈತರಿಗೆ, ಅನುಕೂಲವಾಗುವ ಪ್ರಯೋಗಿಕ ಬೆಳೆಗಳಿಗೆ ಅಥವಾ ಸರ್ಕಾರಿ ಕಟ್ಟಡಗಳಿಗೆ ಉಪಯೋಗಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಇಲಾಖೆ ಮುಂದೆ ಹೋರಾಟ ಮಾಡಿ, ಪ್ರಾಂಶುಪಾಲರು ಡೀನ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ï್ಕ
ರೈತ ಸಂಘ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕಾಯಕವೇ ಕೈಲಾಸ ಎಂದು ಕೃಷಿಯನ್ನೇ ನಂಬಿ ಜೀವನ ಮಾಡುತ್ತಿರುವ ಲಕ್ಷಾಂತರ ರೈತರು ಇಂದು ಸರ್ಕಾರಗಳ ಅವೈಜ್ಞಾನಿಕ ನೀತಿ, ಹಾಗೂ ಕಾರ್ಪೋರೇಟ್ ಕಂಪನಿಗಳ ರೈತ ವಿರೋಧಿ ದೋರಣೆಯಿಂದ ಕೃಷಿ ಕ್ಷೇತ್ರ ದಿನೇ ದಿನೇ ನಶಿಸಿಹೋಗುವ ಜೊತೆಗೆ ಕೃಷಿಯಿಂದ ರೈತರು ವಿಮುಕ್ತಿ ಹೊಂದಿ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಹೊರ ದೇಶದ ಬಳಿ ಕೈಚಾಚಿ ನಿಲ್ಲುವ ಪರಿಸ್ಥಿತಿ ಇಲ್ಲವೆ ಔಷಧಿ ಕಂಪನಿಗಳು ತಯಾರು ಮಾಡುವ ಮಾತ್ರಗಳಿಗೆ ಮೊರ ಹೋಗಬೇಕಾದ ಕಾಲ ದೂರವಿಲ್ಲ. ಮೊತ್ತದಂಡೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯೊಂದಿಗೆ ರೈತರನ್ನು ಸಂಪೂರ್ಣವಾಗಿ ಸರ್ವನಾಶ ಮಾಡಲು ಸರ್ಕಾರಗಳು ರೈತರ ಕೃಷಿ ಜಮೀನನ್ನು ಅಭಿವೃದ್ಧಿ ಹೆಸರಿನಲ್ಲಿ ವಶಪಡಿಸಿಕೊಳ್ಳುತ್ತಿದ್ದರೆ, ಮತ್ತೊಂದಡೆ ಸರ್ಕಾರದ ಜಮೀನುಗಳನ್ನು ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿದ್ದಾರೆ. ಇದಕ್ಕೆ ಉದಾ:- ಕೋಲಾರ ನಗರದ ಹೊರ ವಲಯದಲ್ಲಿರುವ ತೊಟಗಾರಿಕಾ ಮಹಾ ವಿದ್ಯಾಲಯದ ಜಮೀನನ್ನು ಪಕ್ಕದಲೇ ನಿರ್ಮಾಣವಾಗಿರುವ ಜಾಲಪ್ಪ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಕಸಬಾ ಹೋಬಳಿ ನಡುಪಳ್ಳಿ ಸರ್ವೇ ನಂಬರ್ 115 ರಲ್ಲಿ ಸುಮಾರು 10 ಎಕರೆ ಜಮೀನನ್ನು 99 ವರ್ಷ ಗುತ್ತಿಗೆಗೆ ನೀಡಿರುವುದು ರೈತರಿಗೆ ಮಾಡಿದ ದ್ರೋಹದ ಜೊತೆಗೆ ಅಧಿಕಾರ ಹಾಗೂ ರಾಜಕೀಯ ಬಲ ಇದ್ದರೆ, ಯಾವುದೇ ಜಮೀನನ್ನು ವಶಪಡಿಸಿಕೊಳ್ಳಬಹುದೆಂಬುದಕ್ಕೆ ಇದೇ ಉದಾ:- ಜಿಲ್ಲೆಯಲ್ಲಿ ರೈತರು ಬೆಳೆಯುವ ಬೆಳೆಗಳ ಪ್ರಯೋಗಿಕವಾಗಿ ಬೆಳೆಯಲು ಬಿತ್ತನೆ ಬೀಜ ಕಂಪನಿಗಳಿಗೆ ಅವಕಾಶ ನೀಡಿ ಬರುವ ರೋಗಗಳಿಗೆ ಸಿಂಪಡಿಸುವ ಔಷಧಿಗಳ ಬಗ್ಗೆ ರೈತರಿಗೆ ತರಬೇತಿ ನೀಡಬೇಕಾದ ಇಲಾಖೆಯ ಜಮೀನನ್ನೇ ಈ ರೀತಿ ಬಲಾಡ್ಯರಿಗೆ ನೀಡಿರುವುದು ಯಾವ ನ್ಯಾಯ ಎಂದು ಅಸಮದಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಮಾನ್ಯ ಡೀನ್ ಸಾಹೇಬರು ಜಾಲಪ್ಪ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ನೀಡಿರುವ ಸರ್ಕಾರಿ ತೋಟಗಾರಿಕಾ ಜಮೀನ್ನು ಕೂಡಲೇ ಕಾನೂನು ಸಲಹೆ ಪಡೆದು, ಅದನ್ನು ಹಿಂಪಡೆದು, ರೈತರಿಗೆ ಅನುಕೂಲವಾಗುವ ಹಾಗೂ ರೈತರು ಬೆಳೆ ಬೆಳೆಯಲು ಕೊಡುವ ಬಿತ್ತನೆ ಬೀಜ ಕಂಪನಿಗಳಿಗೆ ಪ್ರಾಯೋಗಿಕ ಬೆಳೆ ಮಾಡಲು ನೀಡಿ, ಆ ಬೆಳೆಗಳಿಗೆ ಬರುವ ರೋಗಗಳ ಬಗ್ಗೆ ಔಷಧಿ ಕಂಪನಿಗಳನ್ನು ಕರೆಯಿಸಿ, ರೈತರಿಗೆ ಸಂಪರ್ಕವಾದ ಸೂಕ್ತವಾದ ತರಬೇತಿಯನು ನೀಡಲು ಉಪಯೋಗಿಸಬೇಕೆಂದು ಮಾನ್ಯರಲ್ಲಿ ಒತ್ತಾಯ ಮಾಡುತ್ತಿದ್ದೇವೆ. ಈ ಹೋರಾಟಕ್ಕೂ ಸ್ಪಂಧಿಸದೇ ಇದರ ಬಗ್ಗೆ ಒಂದುವಾರದೊಳಗೆ ಸಂಕ್ಷಿಪ್ತವಾದ ಮಾಹಿತಿ ನೀಡದೇ ಹೋದರೆ ನಿಮ್ಮ ಇಲಾಖೆ ಮುಂದೆ ಆಹೋರಾತ್ರಿ ಜಾನುವಾರುಗಳ ಸಮೇತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.

ಮನವಿ ಸ್ವೀಕರಿಸಿದ ಮಹಾ ವಿದ್ಯಾಲಯದ ಡೀನ್ ರವರು ಮಾತನಾಡಿ ಹಿಂದಿನ ಆಡಳಿತ ಮಂಡಳಿ ಈ ರೀತಿ ಜಮೀನನ್ನು ಖಾಸಗಿಯವರಿಗೆ ನೀಡಿದ್ದಾರೆ. ಆದರೂ ಇದರ ವಿರುದ್ಧ ಕಾನೂನು ಪಂಡಿತರ ಸಲಹೆ ಪಡೆದು, ವಾಪಸ್ಸು ಪಡೆಯುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಬರವಸೆ ನೀಡಿದರು.

ಈ ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜಗೌಡ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್À, ತೆರ್ನಹಳ್ಳಿ ಆಂಜಿನಪ್ಪ, ಮಾಲುರು ತಾಲ್ಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್.ಐತಂಡಹಳ್ಳಿ ಅಂಬರೀಶ್, ಉದಯ್, ಮಂಜುನಾಥ್, ಮೀಸೆ ವೆಂಕಟೇಶಪ್ಪ, ತೆರ್ನಹಳ್ಳಿ ವೆಂಕಿ, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಪ್ರಸನ್ನಕುಮಾರ್, ಸಂತೋಷ್, ಪುರುಶೋತ್ತಮ್, ಹರೀಶ್, ಯಲ್ಲಪ್ಪ, ಮಣಿ, ನಿರಂಜನ್, ಮುಂತಾದವರಿದ್ದರು.