ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ  

JANANUDI.COM NETWORK

ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

 

ಕುಂದಾಪುರ,ಅ.15″ ಕೆಲವರು ಪ್ರತಿಭೆಯಿದ್ದು ನಿರಾಸಕ್ತಿ ಯಿಂದ‌ ಅದನ್ನು ತೋರ್ಪಡಿಸದಿರುವುದು.ಇನ್ನು ಕೆಲವರಲ್ಲಿ ಸಣ್ಣ ಮಟ್ಟದ ಪ್ರತಿಭೆಯಿದ್ದರೂ ಸಕಲ ಕಲೆಯಲ್ಲಿ ನುರಿತವರಂತೆ ವರ್ತಿಸುವುದು- ಎರಡೂ  ಅಂಶಗಳಿಂದ ಸಮಾಜದಲ್ಲಿ 

ಕಲೆಯ ಉನ್ನತಿಗೆ‌ ಹಿನ್ನೆಡೆಯಾಗುವುದು. ಇಂದು ಮಾಧ್ಯಮಗಳಲ್ಲಿ ಕಾಣುವ ಕಲಾಪ್ರಪಂಚದಲ್ಲಿ ಜನಪ್ರಿಯತೆ ಪಡೆದ 

ಸಾಧಕರ ಬದುಕನ್ನು ಅವಲೋಕಿಸಿ ನಮ್ಮ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯಬೇಕು” ಎಂದು ಉಡುಪಿಯ ಡಾ. ಜಿ. 

ಶಂಕರ್ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಎನ್ ನಿತ್ಯಾನಂದರವರು ಆರ್. ಎನ್  ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ ನೀಡಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಎನ್ . ಸೀತಾರಾಮ್ ನಕ್ಕತ್ತಾಯರವರು ಸಮಾರಂಭದ ಅಧ್ಯಕ್ಷತೆ 

ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ  ಶ್ರೀ. ನವೀನ್ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜತೆ ಕಾರ್ಯದರ್ಶಿ ಶ್ರೀ ಕೆ. ಸುಧಾಕರ  ಶೆಟ್ಟಿ ಭಾಂಡ್ಯ ಮತ್ತು ಡಾ. ಬಿ. ಬಿ. ಹೆಗ್ಡೆ ಪ್ರಥಮ‌ ದರ್ಜೆ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿವಿಧ ಸ್ಪರ್ಧೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದ ದ್ವಿತೀಯ ಪಿ. ಯು.ಸಿಯ ಅಭಿಲಾಷ್ ಹತ್ವಾರ್, ಭರತ್ ಹಾಗೂ ಅನಘ  ಅವರನ್ನು ಅಭಿನಂದಿಸಲಾಯಿತು. ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ‌ ಅರುಣ ಹೊಳ್ಳ ರವರು ಅತಿಥಿಗಳನ್ನು 

ಪರಿಚಯಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ಸಂದೀಪ್ ಶೆಣೈ ಮತ್ತು ರಸಾಯನ ಶಾಸ್ತ್ರ ಪ್ರಾಧ್ಯಾಪಕಿ ಶ್ರೀಮತಿ ಜಾನಿಸ್ ನತಾಶಾ ಡಿಸೋಜಾರವರು ಕಾಲೇಜಿನಲ್ಲಿ ನಡೆಸಿದ ವಿವಿಧ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ 

ವಿಜೇತರಾದವರಿಗೆ  ಬಹುಮಾನ ವಿತರಣಾ ಕಾರ್ಯಕ್ರಮ‌ವನ್ನು ನಿರ್ವಹಿಸಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯರವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.