ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ : ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ

JANANUDI.COM NETWORK 

ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿ
ಕುಂದಾಪುರ ಪವಿತ್ರ ರೋಸರಿ ಮಾತಾ ಚರ್ಚಿನ 450 ನೇ ಮಹೋತ್ಸವ ಆರಂಭೋತ್ಸವ

 

ಕುಂದಾಪುರ,ಒ.7: ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ಇಗರ್ಜಿಯಾದ ಕುಂದಾಪುರದ ಪವಿತ್ರ ರೋಸರಿ ಮಾತಾ ಇಗರ್ಜಿ ತನ್ನ 450 ನೇ ಮಹೋತ್ಸವದ ಆಚರಣೆಯ ಆರಂಭೋತ್ಸವವನ್ನು ಪಾಲಕಿ ರೋಸರಿ ಮಾತೆಯ ತಾರೀಕಿನ ಹಬ್ಬದ ದಿನ ಒಕ್ಟೋಬರ್ 7 ರಂದು ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಉದ್ಯಾವರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ಬಿ ಲೋಬೊ ಮತ್ತು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮಹೋತ್ಸವದ ಲಾಂಛನ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಬಳಿಕ ನಡೆದ ಭಕ್ತಿ ಸಂಭ್ರದ ದಿವ್ಯ ಪೂಜೆಯನ್ನು ಪ್ರಧಾನ ಯಾಜಕರಾಗಿ ಅ|ವಂ| ಸ್ಟ್ಯಾನಿ ಬಿ. ಲೋಬೊ ಅರ್ಪಿಸಿ ‘ಈ ರೋಸರಿ ಮಾತಾ ಇಗರ್ಜಿಯು ಬಹಳ ಪುರಾತನವಾಗಿದ್ದು, ಈs ಧರ್ಮಸಭೆಯನ್ನು ಧರ್ಮಗುರುಗಳು, ಸಹಾಯಕ ಧರ್ಮಗುರುಗಳು, ಧರ್ಮಭಗಿನಿಯರು ವಿಶ್ವಾಸಿಗರೊಡಗುಡಿ 450 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಹೀಗೆ 450 ವರ್ಷದಿಂದ ನಮ್ಮನ್ನು ಪಾಲಕಿ ರೋಸರಿ ಮಾತೆ ಕಾಪಾಡಿಕೊಂಡು ಬಂದಿದ್ದಾಳೆ. 450 ವರ್ಷದ ಆಚರಣೆ ಅಂದರೆ ನೀಜವಾಗಿಯೂ ಮಹತ್ತರದ ದಿನವಾಗಿದೆ. ಇಂತಹ ದಿನ ಪಡೆದದ್ದು ನಮ್ಮ ಭಾಗ್ಯ ರೋಸರಿ ಮಾತೆ ತನ್ನ ಪುತ್ರನಿಂದ ನಮಗೆ ಆಶಿರ್ವದಿಸತ್ತಲೆ ಬಂದಿದ್ದಾಳೆ’ ಎಂದು ಅವರು ನುಡಿದರು.
‘ಇಂತಹ ಮಹೋತ್ಸವದ ವೇಳೆ ನಾವು ಅವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ, ನಾವು ನಮ್ಮ ಕುಟುಂಬಗಳು ಹೇಗಿವೆ ಎಂದು ಪರಾಮರ್ಶಿಗೊಳ್ಳಬೇಕು, ನಮ್ಮ ಕುಟುಂಬಗಳು ಹೊರಕ್ಕೆ ಚೆಂದವಾಗಿ ಕಾಣುತ್ತವೆ, ಆದರೆ ಒಳಗೆ ಟೋಳ್ಳಾಗಿವೆ, ಕುಟುಂಬ ಅಂದರೆ ಶುದ್ದ ಹಾಲಿನ ಥರಹ ಇರಬೇಕು ಹಾಲು ಮತ್ತು ಹಾಲು ಬೇರೆಸಿದರೆ ಕೆಡುವುದಿಲ್ಲವೋ ಹಾಗೆ ನಮ್ಮ ಕುಟುಂಬಗಳಾಗಬೇಕು. ನಾವು ಭಾಷಣ ಮಾಡಿ ಕೂಗಾಡಿ ಧರ್ಮ ಪ್ರಚಾರ ಮಾಡುವ ಅವಶ್ಯಕತೆಯಿಲ್ಲಾ. ಹಿಂದುಗಳು, ಮುಸ್ಲಿಮರು ಅವರೆಲ್ಲಾ ಅವರ ಧರ್ಮವನ್ನು ಒಳ್ಳೆಯ ರೀತಿ ನಡೆದುಕೊಂಡು ಹೋಗಲು ಸಹಕರಿಸೋಣ, ಅದುವೆ ನಮ್ಮ ಆದರ್ಶವಾಗಲಿ’ ಎಂದು ಅವರು ಪ್ರವಚನ ನೀಡಿದರು. ಕೆರೆಕಟ್ಟೆ ಸಂತ ಅಂತೋನಿಯ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಧರ್ಮಗುರು ಕ್ಷೇವಿರ್ ಪಿಂಟೊ ಮಹೋತ್ಸವದ ಪ್ರಾರ್ಥನ ಪತ್ರವನ್ನು ಉದ್ಘಾಟಿಸಿ, ಪ್ರಾಥಿಸಿದರು.
ದಿವ್ಯ ಬಲಿ ಪೂಜೆಯ ಬಳಿಕ ಬೆಲೂನಿನಿಂದ ಮಾಡಿದ ಜಪಮಾಲೆಯನ್ನು ಹಾರಿಸಲಾಯಿತು. ಬಳಿಕ ಪವಿತ್ರ ರೋಸರಿ ಮಾತೆಯ ದೊಡ್ಡ ಭಾವಚಿತ್ರವನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕಂಬದ ಮೇಲೆ ರೋಹಣ ಮಾಡಿ ಸಾಂಕೇತಿಕವಾಗಿ ಉದ್ಘಾಟಿಸಿದರು. ಅವರು ಎಲ್ಲರನ್ನು ವಂದಿಸಿದರು. ಈ ಮಹೋತ್ಸವ ಬಲಿ ಪೂಜೆಯಲ್ಲಿ ಕುಂದಾಪುರದ ಸಹಾಯಕ ಧರ್ಮಗುರುಗಳಾದ ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಬೈಂದೂರು, ಕಟ್ಕರೆ, ತ್ರಾಸಿ ಡೋನ್ ಬಾಸ್ಕೊ ಸಂಸ್ಥೆಯ ಗುರುಗಳು ಮತ್ತು ಇನ್ನಿತರ ಧರ್ಮಗುರುಗಳು ಭಾಗಿಯಾದರು. ಹಲವಾರು ಧರ್ಮಭಗಿನಿಯರು ಚರ್ಚ್ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, 18 ಆಯೋಗದ ಸಂಚಾಲಕಿ ಪ್ರೇಮಾಡಿ ಕುನ್ಹಾ ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಚರ್ಚಿನ ಭಕ್ತಾಧಿಗಳಲ್ಲದೆ ನೆರೆಕರೆಯ ಊರಿನ ಭಕ್ತಾಧಿಗಳು ಕೂಡ ರೋಸರಿ ಅಮ್ಮನ ಈ 450 ವರ್ಷದ ಆರಂಭೋತ್ವದಲ್ಲಿ ಪಾಲ್ಗೊಂಡರು.