ಭಂಡಾರ್ಕಾರ್ಸ್ ಕಾಲೇಜು: ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಜಾಗ್ರತಿ ಬ್ರಹತ್ ಅಭಿಯಾನ

JANANUDI.COM NETWORK

ಭಂಡಾರ್ಕಾರ್ಸ್ ಕಾಲೇಜು: ಜಲ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಜಾಗ್ರತಿ ಬ್ರಹತ್ ಅಭಿಯಾನ

ಕುಂದಾಪುರ: ಸೆ.28: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಈ ವರ್ಷ ಮಹಾತ್ಮಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿ, ಬೋಧಕ ಬೋಧಕೇತರ ವರ್ಗದವರಿಂದ“ಜಲಸಂರಕ್ಷಣೆ ಮತ್ತು ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮತ್ತು ಮನೆಮನೆ ಸಂಪರ್ಕಅಭಿಯಾನ”ಕಾರ್ಯಕ್ರಮವು ದಿನಾಂಕ 29 ಸೆಪ್ಟೆಂಬರ್‍ರಿಂದ 4ಅಕ್ಟೋಬರ್ 2019 ರವರೆಗೆ ನಡೆಯಲಿದೆ ಎಂದು ಸೆ.27 ರಂದು ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪ್ರಾಂಶುಪಾಲ ಡಾ|ಎನ್.ಪಿ.ನಾರಯಣ ಶೆಟ್ಟಿ ತಿಳಿಸಿದರು.


‘ಇದೊಂದು ವಿಶಿಷ್ಟ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಕಾಲೇಜಿನಲ್ಲಿ ಅಂದಾಜು 2400 ವಿದ್ಯಾರ್ಥಿಗಳಿದ್ದಾರೆ. ಈ ಅಭಿಯಾನದ ಉದ್ದೇಶದಂತೆ ಪ್ರತಿ ವಿದ್ಯಾರ್ಥಿಯು ತಮ್ಮಊರಿನ ಸುತ್ತಮುತ್ತ ಮತ್ತು ಮನೆಯ ಸುತ್ತಲಿನ 10 ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಅವರಲ್ಲಿ ಜಲಸಂರಕ್ಷಣೆ ಮತ್ತು ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತುಜಾಗೃತಿ ಮೂಡಿಸುವುದಾಗಿ ಒಬ್ಬ ವಿದ್ಯಾರ್ಥಿಯಿಂದ ಆರಂಭವಾಗುವ ಈ ಅಭಿಯಾನ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಜನರನ್ನು ತಲುಪುವ ಆಶಯ ಕಾಲೇಜಿನ್ದಾಗಿದೆ.
ಇಂದಿನ ನಮ್ಮ ನಿಮ್ಮೆಲ್ಲರ ಮುಂದಿರುವ ಬಗೆಹರಿಸಲಾಗದ ಆದರೆ ನಾವೆ ಖುದ್ದಾಗಿ ಎಚ್ಚೆತ್ತುಕೊಂಡು ಪರಿಹರಿಸಿ ಕೊಳ್ಳಬೇಕಾದ ಸಮಸ್ಯೆ ಎಂದರೆ ಜಲ ಸಮಸ್ಯೆ ಅಂದರೆ ನೀರಿನ ಅಭಾವ ಮತ್ತು ಪ್ಲಾಸ್ಟಿಕ್ ಬಳಸುವುದರಿಂದಾಗುವ ದುಷ್ಪರಿಣಾಮಗಳು. ಕೆಲವೊಮ್ಮೆ ನಮಗೆ ಅದರ ಅರಿವಿದ್ದರೂ ಗೊತ್ತಿಲ್ಲದ ಹಾಗೆ ಇರುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಒಂದು ಸ್ತೂಲ ಮತ್ತು ಜಟಿಲ ಸಮಸ್ಯೆಗೆ ಜಾಗೃತಿಯ ಮೂಲಕ ಪರಿಹಾರ ಕಂಡುಕೊಳ್ಳುವ ಕಾಲೇಜಿನ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರಾಂಶುಪಾರ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.
ಈ ಅಭಿಯಾನವು ಮುಖ್ಯವಾಗಿ ನೀರಿನ ಪೋಲು ತಡೆಯಿರಿ ಅಂದರೆ ಮಿತವಾಗಿ ಬಳಸಬೇಕು. ನೀರಿನ ಅನಾವಶ್ಯಕ ದುರುಪಯೋಗವನ್ನು ನಿಲ್ಲಿಸಿರಿ. ತೋಟಗಳಿಗೆ ನೀರನ್ನು ಒಂದು ಕಾಲಮಿತಿಯಲ್ಲಿ ಹಾಯಿಸಿರಿ. ಬಟ್ಟೆ ತೊಳೆಯುವ ಯಂತ್ರವನ್ನು ಸಂಪೂರ್ಣ ಮಿತಿಯಲ್ಲಿ ಬಳಸಿ, ಗಿಡಗಳಿಗೆ ಆದಷು ್ಟತುಂತುರು ಹನಿ ನೀರಾವರಿ ಬಳಸಿ, ಬಳಸಿದ ನೀರನ್ನು ವ್ಯಯಿಸದೇ, ತೋಟಗಳಿಗೆ ಬಳಸಿ, ಮರುಬಳಕೆ ಮಾಡಿ ಎಂದು ಜನರಿಗೆ ಮನಸಿಗೆ ಮುಟ್ಟುವ ಹಾಗೆ ತಿಳಿಸುವುದಾಗಿದೆ.
ಜೊತೆಗೆ ನೀರಿನ ಸಂರಕ್ಷಣೆಯ ಮಾರ್ಗೋಪಾಯಗಳನ್ನು ತಿಳಿಸಲಾಗಿದೆ. ಛಾವಣಿ ನೀರಿನಕೊಯ್ಲು, ಮೇಲ್ಮೈ ಹರಿವಿನ ಸಂಗ್ರಹ, ಬದುಗಳ ನಿರ್ಮಾಣ, ಒಡ್ಡುಗಳ ರಚನೆ, ತೆರೆದ ಬಾವಿಗಳ ಮರುಪೂರಣ ಮತ್ತು ಕೊಳವೆ ಬಾವಿಯ ಮರುಪೂರಣವನ್ನು ಜನರಿಗೆ ತಿಳಿಸಿ ಈಮೂಲಕ ಮುಂದಿನ ದಿನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಜನರಿಗೆ ತಿಳಿಸಿ ಹೇಳುವುದು.


ಇದರಲ್ಲಿ ವಿದ್ಯಾರ್ಥಿಗಳ ಸಹಭಾಗಿತ್ವ ಮತ್ತು ಊರಿನಜನರು ಸಹ ಅವರ ಊರಿನ ಮಕ್ಕಳ ಕಾಳಜಿಯನ್ನು ಅರಿತು ಎಚ್ಚೆತ್ತು ಕೊಳ್ಳುತ್ತಾರೆ ಎಂಬುದು ಈ ಅಭಿಯಾನದ ನಿರೀಕ್ಷೆಯಾಗಿದೆ.
ಇನ್ನು ಪ್ಲಾಸ್ಟಿಕ್ ಕುರಿತಂತೆ ತಿಳಿಸಿ ಹೇಳಿದರೂ ಅದರ ಬಳಕೆ ದಿನದಿನಕ್ಕೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಎನ್ನುವಂತಹ ಪೆಡಂಭೂತ ಮನುಷ್ಯ ಪ್ರಾಣಿ ಪಕ್ಷಿಯನ್ನು ಸಹ ಬಿಡಲಾರದು. ಅದರ ಪರಿಣಾಮ ಸಾವಿರಾರು ವರ್ಷಗಳವರೆಗೆ ಇರುತ್ತದೆ ಎಂಬುದು ಇಂದಿನ ಸಾಕ್ಷರ ಮತ್ತು ಶೈಕ್ಷಣಿಕ ಸಮಾಜಕ್ಕೆ ಅರಿವಿಗಿದೆ. ಅಂತಹ ನಾಶ ಮಾಡಲಾಗದ ಪ್ಲಾಸ್ಟಿಕ್‍ನ ದುಷ್ಪರಿಣಾಮಗಳ ಕುರಿತು ಸಭೆ ಸಮಾರಂಭಗಳಲ್ಲಿ ನಡೆಯುವ ಭಾಷಣಗಳಿಂದ ಸಾಧ್ಯವಿಲ್ಲ. ಮಾನಸಿಕವಾಗಿ ಪ್ರತಿಯೊಬ್ಬರುಅದರ ಬಳಕೆ ಮತ್ತು ಪರಿಣಾಮದ ಕುರಿತು ಅರಿತುಕೊಳ್ಳುವ ಅನಿವಾರ್ಯತೆ ಇದೆ. ಪ್ರತಿಯೊಬ್ಬರುತಾವಾಗಿಜಾಗೃತರಾಗಬೇಕು. ಹಾಗಿರುವಾಗ ಈ ಜಾಗೃತಿಯನ್ನು ಮಾಡಬೇಕಾಗಿರುವುದು ಸಮಾಜದ ಭಾಗವಾಗಿರುವ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹೆಚ್ಚಿದೆ ಎಂಬುದನ್ನು ಭಂಡಾರ್ಕಾರ್ಸ್ ಕಾಲೇಜು ಮನಗಂಡಿದೆ.
ಅಂತೆಯೇ ಪ್ರತಿ ವಿದ್ಯಾರ್ಥಿತನ್ನ ವ್ಯಾಪ್ತಿಯ 10 ಮನೆಗಳಿಗೆ ಹೋಗಿ ಮನೆಯ ಎಲ್ಲರಲ್ಲೂ ಈ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾದಾಗ ಮನೆಯಒಬ್ಬ ಸದಸ್ಯನಲ್ಲಾದರೂ ಜಾಗೃತಿ ಮೂಡಿ ಅವನು ಪ್ಲಾಸ್ಟಿಕ್ ಬಳಕೆಯ ಕುರಿತು ಮನೆಯವರಿಗೆ ತಿಳಿಸಿ ಹೇಳಬಹುದು ಎಂಬ ನಿರೀಕ್ಷೆ ಈ ಅಭಿಯಾನದ್ದಾಗಿದೆ. ಹಾಗೆಯೇ ವಿದ್ಯಾರ್ಥಿಯು ಸೇರಿದಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಲಿ.
ಅದಕ್ಕೆ ಪೂರಕವಾಗಿ ಪ್ಲಾಸ್ಟಿಕ್ ಉಪಯೋಗದ ದುಷ್ಪರಿಣಾಮಗಳನ್ನು ಎಳೆಯಾಗಿ ಎಳೆಯಾಗಿ ತಿಳಿಸುವ ಪ್ರಯತ್ನ ವಿದ್ಯಾರ್ಥಿಗಳಿಂದ ಸಾಧ್ಯವಿದೆ.
ಆರೋಗ್ಯಕ್ಕೆ ಪ್ಲಾಸ್ಟಿಕ್ ಉಪಯೋಗದ ದುಷ್ಪರಿಣಾಮಗಳನ್ನು ಮೊದಲಾಗಿ ತಿಳಿಸಿದರೆ ಮನುಷ್ಯ ತನ್ನ ಆರೋಗ್ಯದ ಬಗ್ಗೆ ಖಂಡಿತ ಕಾಳಜಿ ವಹಿಸುತ್ತಾನೆ. ಅಲ್ಲಲ್ಲಿ ಎಸೆದ ಪ್ಲಾಸ್ಟಿಕ್ ತೊಟ್ಟೆಗಳು ದನಕರುಗಳು ಮುಂತಾದ ಪಶುಗಳ ಹೊಟ್ಟೆ ಸೇರಿ ಜೀರ್ಣವಾಗದೆ ಜೀವಕ್ಕೆ ಮಾರಕವಾಗುತ್ತದೆ. ಪೆಪ್ಸಿಯಂತಹ ಪಾನೀಯಗಳು ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುವುದರಿಂದ ಬಿಸಿಯಾದ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಕಟ್ಟುವುದರಿಂದ ಪ್ಲಾಸ್ಟಿಕ್‍ನ ವಿಷಕಾರಿ ಅಂಶ ಆಹಾರದ ಮೂಲಕ ದೇಹವನ್ನು ಸೇರಿ ಮಾರಕವೆನಿಸುತ್ತದೆ. ಒಮ್ಮೆ ಬಳಸಿದ ಪ್ಲಾಸ್ಟಿಕ್ ಜರಿ ಮತ್ತು ಕವರುಗಳನ್ನು ಅಲ್ಲಲ್ಲಿ ಎಸೆದಾಗಅದು ಬಿಸಿಲಿಗೆ ಕರಗಿ ಸುಡಲ್ಪಟ್ಟು ಪರಿಸರ ಮಾಲನ್ಯಕ್ಕೆ ಕಾರಣವಾಗುತ್ತದೆ. ಅಲ್ಲದೇ ಪರಿಸರದ ಅಂದವು ಹಾಳಾಗುತ್ತದೆ.
ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವೇನು ಎಂಬುದನ್ನು ಜನರು ಕೇಳೆ ಕೇಳುತ್ತಾರೆ. ಹಾಗಾಗಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿದೆ. ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ತರುವಾಗ ಚೀಲಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸುಚುದು. ಆಹಾರ ವಸ್ತುಗಳನ್ನು ಸ್ಟೀಲ್ ಮತ್ತು ಗಾಜಿನ ಡಬ್ಬಗಳಲ್ಲಿ ಇಡುವುದು. ಕುಡಿಯುವ ನೀರಿಗೆ ಸ್ಟೀಲ್ ಪಾತ್ರೆ ಮತ್ತು ಮರು ಬಳಕೆಗೆ ಅರ್ಹವಾದ ದಪ್ಪನೆಯ ಪ್ಲಾಸ್ಟಿಕ್ ಬಾಟಲುಗಳನ್ನು ಬಳಸುವುದು ಮತ್ತು ತಂಪು ಪಾನೀಯ ಅಥವಾ ಎಳನೀರು ಕುಡಿಯುವಾಗ ಸ್ಟ್ರಾಗಳನ್ನು ಬಳಸದಂತೆ ತಿಳಿಸುವುದು. ಈ ಎಲ್ಲಾ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡು ನಿರ್ವಹಿಸುವ ಸಾಮಥ್ರ್ಯ ವಿದ್ಯಾರ್ಥಿಗಳಿಗಿದೆ ಎಂಬ ವಿಶ್ವಾಸ ಇz.É ಇಂತಹ ಕಾರ್ಯಗಳು ಶಿಕ್ಷಣ ಸಂಸ್ಥೆಗಳಿಂದ ಹೆಚ್ಚೆಚ್ಚು ಆದಾಗ ದೇಶಾದ್ಯಂತ ಜಾಗೃತಿ ಮತ್ತು ಸಫಲತೆಖಂಡಿತ ಸಾಧ್ಯ’ ಎಂದು ತಿಳಿಸಿದರು
ಕಾರ್ಯಕ್ರಮದ ರುವಾರಿ ಮತ್ತು ಸಂಯೋಜಕರಾದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ರಾಮಚಂದ್ರ ಸ್ವಾಗತಿಸಿ ವಂದಿಸಿದರು. ಪಿ.ಯು. ಕಾಲೇಜಿನ ಪ್ರಾಂಶುಪಾಲ ಡಾ|ಜಿ.ಎಂ.ಗೊಂಡ ರೆಡ್ ಕ್ರಾಸ್ ಸಂಚಾಲಕ ಸತ್ಯನಾರಯಣ ಹತ್ವಾರ್ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಮತ್ತಿತರರು ಉಪಸ್ಥಿತರಿದ್ದರು.