ಶ್ರೀ ಕ್ಷೇತ್ರ ಬೆಳ್ಮಣ್ಣು : ಸೆಪ್ಟೆಂಬರ್ 29 ರಿಂದ ಅಕ್ಟೊಬರ್ 7 ರವರೆಗೆ ನವರಾತ್ರಿ ಉತ್ಸವ

ವರದಿ: ವಾಲ್ಟರ್ ಮೊಂತೇರೊ

 

ಶ್ರೀ ಕ್ಷೇತ್ರ ಬೆಳ್ಮಣ್ಣು : ಸೆಪ್ಟೆಂಬರ್ 29 ರಿಂದ ಅಕ್ಟೊಬರ್ 7 ರವರೆಗೆ ನವರಾತ್ರಿ ಉತ್ಸವ

 

ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 7 ರವರೆಗೆ ನವರಾತ್ರಿ ಉತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಲಿದೆ.

ಆ ಪ್ರಯುಕ್ತ ಪ್ರತಿದಿನ ಸಂಜೆ ಗಂಟೆ 6 ರಿಂದ 8.30ರ ವರೆಗೆ ದೇವಸ್ಥಾನದ ಸಭಾಭವನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಲಿವೆ.
ಸೆಪ್ಟೆಂಬರ್ 29 ರಂದು ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ಮತ್ತು ಬೆಳ್ಮಣ್ಣು ಶ್ರೀ ವಿಠೋಬ ರುಕ್ಮಾಯಿ ಭಜನಾ ಮಂಡಳಿಯವರಿಂದ “ಭಕ್ತಿ ರಸ ಸಂಗೀತ”
ಸೆಪ್ಟೆಂಬರ್ 30 ರಂದು ತೆಂಕುತಿಟ್ಟಿನ ನುರಿತ ಕಲಾವಿದರ ಸಮ್ಮಿಲನದಲ್ಲಿ “ಅಂಧಕ ಮೋಕ್ಷ” ಯಕ್ಷಗಾನ
ಅಕ್ಟೋಬರ್ 1 ರಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಶೋಭಾನೆ ಬಳಗ ಮತ್ತು ಕಲಾಸಕ್ತರಿಂದ “ಶ್ರೀಕೃಷ್ಣ ಲೀಲೆ-ಕಂಸವಧೆ” ಯಕ್ಷಗಾನ
ಅಕ್ಟೋಬರ್ 2 ರಂದು ವಿದ್ವಾನ್ ಕೆ. ಶ್ರೀಪತಿ ಉಪಾಧ್ಯಾಯ ಕುಂಭಾಶಿ, ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಮತ್ತು ಬಳಗದವರಿಂದ ಗಾನ ಅಖ್ಯಾನ ಕಾರ್ಯಕ್ರಮ “ಸೀತಾ ಕಲ್ಯಾಣ”
ಅಕ್ಟೋಬರ್ 3 ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ ಇವರಿಂದ “ವೀರ ಅಭಿಮನ್ಯು” ಯಕ್ಷಗಾನ
ಅಕ್ಟೋಬರ್ 4 ರಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಜನಪದ ತಂಡ ಶ್ರೀ ರಾಮ್ ಡ್ಯಾನ್ಸ್ ಅಕಾಡೆಮಿ ಉಡುಪಿ ಇವರಿಂದ “ಜಾನಪದ ನೃತ್ಯ ವೈಭವ”
ಅಕ್ಟೋಬರ್ 5 ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಯೋಜನೆಯಲ್ಲಿ “ಮುದ್ದು ಕೃಷ್ಣ ಸ್ಪರ್ಧೆ” (0-2 ವರ್ಷದ ವಿಭಾಗ ಮತ್ತು 2-5ವರ್ಷದ ವಿಭಾಗ)
ಅಕ್ಟೋಬರ್ 6 ಬೆಳ್ಮಣ್ಣು ಪರಿಸರದ ಸಂಗೀತಾಸ್ತಕರಿಗೆ “ಕರೋಕೆ ಗಾಯನ ಸ್ಪರ್ಧೆ (ವೈಯಕ್ತಿಕ ವಿಭಾಗ) 15 ವರ್ಷಕ್ಕಿಂತ ಕೆಳಗಿನ ವಿಭಾಗ ಮತ್ತು 15 ವರ್ಷಕ್ಕಿಂತ ಮೇಲಿನ ವಿಭಾಗದಲ್ಲಿ
ಅಕ್ಟೋಬರ್ 7 ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಧಾರ್ಮಿಕ ಚಿಂತನೆ, ಶ್ರೀ ದುರ್ಗಾನುಗ್ರಹ ಪ್ರಶಸ್ತಿ ವಿತರಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ.
ಅಕ್ಟೋಬರ್ 8 ರಂದು ಶ್ರೀ ಕ್ಷೇತ್ರದಲ್ಲಿ ವಿಜಯ ದಶಮಿಯ ಪ್ರಯುಕ್ತ ಮಧ್ಯಾಹ್ನ ಮಹಾಪೂಜೆ ನಂತರ ಅನ್ನಸಂತರ್ಪಣೆ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರಾದ ವೇದ ಮೂರ್ತಿ ಬಿ.ಎಂ.ಕೃಷ್ಣ ಭಟ್, ವೇದ ಮೂರ್ತಿ ಬಿ.ಕೆ ವಿಘ್ನೇಶ್ ಭಟ್ ಪ್ರತಿಕಾ ಪ್ರಕಟನೆಗೆ ತಿಳಿಸಿದ್ದಾರೆ.