ಶ್ರೀನಿವಾಸಪುರದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ವಿತರಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ವಿತರಿಸಿದರು.
ಶ್ರೀನಿವಾಸಪುರ: ಪೌರ ಕಾರ್ಮಿಕರು ಆರೋಗ್ಯ ರಕ್ಷಣೆಗೆ ಸುರಕ್ಷಾ ಕವಚ ಧರಿಸಬೇಕು.  ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್‌ ಹೇಳಿದರು.
  ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ವಿತರಿಸಿ ಮಾತನಾಡಿ, ಕೈಗವಚ, ಬಾಯಿಗವಚ, ಬೂಟು ಹಾಗೂ ಹೆಲ್ಮೆಟ್‌ ವಿತರಿಸಲಾಗಿದೆ. ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವಾಗ ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
  ಪೌರ ಕಾರ್ಮಿಕರು ಪಟ್ಟಣದ ನಿಜವಾದ ಕ್ಷೇಮ ಪಾಲಕರು.  ಸ್ವಚ್ಛ ಸಮಾಜ ನಿರ್ಮಾಣಕ್ಕೆ ಸ್ವಚ್ಛ ಪರಿಸರ ಬೇಕಾಗುತ್ತದೆ. ಅದು ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ. ಪೌರ ಕಾರ್ಮಿಕರೂ ಸಹ ಸ್ವಚ್ಛತೆ ಪಾಲಿಸಬೇಕು ಎಂದು ಹೇಳಿದರು.
  ಪುರಸಭೆಯ ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿರಾಜ್‌, ಪರಿಸರ ಅಭಿಯಂತರ ಶೇಖರ್‌ರೆಡ್ಡಿ, ನಾಗೇಶ್‌ ಇದ್ದರು.