ಮಹಿಳಾ ಸ್ವಸಹಾಯ ಸಂಘಗಳಿಗೆ 10 ಕೋಟಿ ರೂ ಸಾಲ ವಿತ ರಣೆ , ವಾಣಿಜ್ಯ ಬ್ಯಾಂಕುಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ-ಶಾಸಕ ಕೆ.ಆರ್.ರಮೇಶ್‍ಕುಮಾರ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಮಹಿಳಾ ಸ್ವಸಹಾಯ ಸಂಘಗಳಿಗೆ 10 ಕೋಟಿ ರೂ ಸಾಲ ವಿತ ರಣೆ , ವಾಣಿಜ್ಯ ಬ್ಯಾಂಕುಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ-ಶಾಸಕ ಕೆ.ಆರ್.ರಮೇಶ್‍ಕುಮಾರ್

ಬ್ಯಾಂಕುಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದ ಮೇಲೆ ಸರ್ಕಾರದ ವಿವಿಧ ಇಲಾಖೆಗಳ ಹಣ ಈ ಬ್ಯಾಂಕುಗಳಲ್ಲಿ ಏಕೆ ಠೇವಣಿ ಇಡಬೇಕು ಎಂದು ಮಾಜಿ ಸ್ವೀಕರ್ ಮತ್ತು ಶಾಸಕ ಕೆ.ಆರ್.ರಮೇಶ್‍ಕುಮಾರ್

ಕೋಲಾರ:- ಸಾವಿರಾರು ಕೋಟಿ ರೂ ದೋಚಿಕೊಂಡು ಹೋಗುವ ಸಾಹುಕಾರರಿಗೆ ಸಾಲ ನೀಡುವ ವಾಣಿಜ್ಯ ಬ್ಯಾಂಕುಗಳಿಗೆ ಬಡವರ ಬಗ್ಗೆ ಕಾಳಜಿಯಿಲ್ಲ ಎಂದ ಮೇಲೆ ಸರ್ಕಾರದ ವಿವಿಧ ಇಲಾಖೆಗಳ ಹಣ ಈ ಬ್ಯಾಂಕುಗಳಲ್ಲಿ ಏಕೆ ಠೇವಣಿ ಇಡಬೇಕು ಎಂದು ಮಾಜಿ ಸ್ವೀಕರ್ ಮತ್ತು ಶಾಸಕ ಕೆ.ಆರ್.ರಮೇಶ್‍ಕುಮಾರ್ ಪ್ರಶ್ನಿಸಿದರು. ಸೋಮವಾರ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಾಗೂ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಹಾಯೋಗದಲ್ಲಿ 202 ಮಹಿಳಾ ಸ್ವಸಹಾಯ ಸಂಘಗಳಿಗೆ 10 ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.

ಸರ್ಕಾರಿ ಯೋಜನೆಗಳ ಅನುದಾನವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ವಾಣಿಜ್ಯ ಬ್ಯಾಂಕ್‍ಗಳು ನಿರ್ಲಕ್ಷ್ಯ ವಹಿಸುತ್ತಿರುವುದನ್ನು ತಪ್ಪಿಸಲು ಸರ್ಕಾರಿ ಇಲಾಖೆಗಳ ಅನುದಾನ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸರ್ಕಾರ ಯಾವುದೇ ಯೋಜನೆ ಜಾರಿ ಮಾಡಿದರು ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸಲು ಗುರಿ ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಡವರಿಗೆ ಸಹಾಯ ಮಾಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಅನುಕೂಲಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಸಾಲ ನೀಡಲು ವಾಣಿಜ್ಯ ಬ್ಯಾಂಕ್‍ಗಳಿಗೆ ಸೂಚಿಸುತ್ತದೆ. ಆದರೆ ಅವರು ಸಾವಿರಾರು ಕೋಟಿ ದೋಚಿಕೊಂಡು ಹೋಗುವ ಸಾಹುಕರರಿಗೆ ಸಾಲ ನೀಡುತ್ತಾರೆ ಹೊರತು, ಬಡವರಿಗೆ ಅಲ್ಲ ಎಂದು ದೂರಿದರು. ಬಡ ಮಹಿಳೆಯರು ಸಮಾಜದಲ್ಲಿ ಗೌರವದಿಂದ ಬದುಕಬೇಕು ಎಂಬುದು ನಮ್ಮ ಉದ್ದೇಶ, ಶೂನ್ಯ ಬಡ್ಡಿದರದಲ್ಲಿ ಮಹಿಳೆಯರಿಗೆ ಸಾಲ ನೀಡಬೇಕು ಎಂದು ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದೆ. ಆದರೆ ಇದಕ್ಕೆ ಕೆಲವರೆಲ್ಲಾ ಅಪಸ್ವರ ಮಾಡಿದರೂ ಲೆಕ್ಕಿಸದೆ ಮಹಿಳೆಯರಿಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡಲು ಬಜೆಟ್‍ನಲ್ಲಿ ಘೋಷಣೆ ಮಾಡಿದರು, ಇಂತಹ ಮಹತ್ತರ ಕಾರ್ಯವನ್ನು ಯಾವ ಸರ್ಕಾರವಾದರೂ ಮಾಡಿತೇ ಎಂದರು.

ದೇಶದಲ್ಲಿ ಶ್ರೀಮಂತರು ವಾಣಿಜ್ಯ ಬ್ಯಾಂಕ್‍ಗಳಿಂದ ಪಡೆದುಕೊಂಡಿರುವ 16 ಲಕ್ಷ ಕೋಟಿಯನ್ನು ತಿಂದು ತೇಗಿದ್ದಾರೆ. ಇದನ್ನು ಯಾವ ಬ್ಯಾಂಕಿನವರಾದರೂ ಕೇಳುತ್ತಿದ್ದಾರೆ. ಅವರ ಮೇಲೆ ಇರುವ ನಂಬಿಕೆ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ರೈತರ, ಮಹಿಳೆಯರ ಮೇಲೆ ಯಾಕಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. ಮಹಿಳೆಯರಿಗೆ ಕೊಡಲಾಗುತ್ತಿದ್ದ ಸಾಲದ ಪ್ರಮಾಣ 1 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಮಹಿಳೆಯರಿಗೆ ಸಾಲ ನೀಡಬೇಕಾದ ಸಂದರ್ಭದಲ್ಲಿ ಸಾಕಷ್ಟು ಮಂದಿ ವಿರುದ್ಧವಾಗಿಯೇ ಮಾತನಾಡಿದರು. ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸೋಸೈಟಿಗಳ ಆರ್ಥಿಕ ಅಭಿವೃದ್ಧಿಗೂ ಒತ್ತು ನೀಡಿದರು. ಆದರೆ ಈಗ ಖಾಸಗಿ ಬಡ್ಡಿ ಮಾಫಿಗಳವರಿಗೆ ಡಿಸಿಸಿ ಬ್ಯಾಂಕ್ ಕೆಲಸಗಳನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಅಣ್ಣಿಹಳ್ಳಿ ಕೃಷ್ಣಪ್ಪ ಹಾಗೂ ಶಾಸಕ ಕೆ.ಶ್ರೀನಿವಾಸಗೌಡರ ಸಹಕಾರದಿಂದ ಸೋಸೈಟಿ ಸಾವಿರಾರು ಮಹಿಳೆಯರಿಗೆ ಸಾಲ ನೀಡುವ ಶಕ್ತಿ ಹೊಂದಿದೆ. ಅವರಿಗೆ ಸಾಲ ಮರುಪಾವತಿ ಮಾಡಿದಾಗ ಗೌರವ ನೀಡಿದಂತಾಗುತ್ತದೆ ಎಂದರು.

ನನ್ನ ಪಾಲಿನ ದೇವರು ಜನ. ಅವರಿಗೆ ಮೋಸ ಮಾಡುವುದು ನನಗೆ ಗೊತ್ತಿಲ್ಲ. ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಅಗತ್ಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಒಂದು ಭಾಗದಲ್ಲಿ ಪ್ರವಾಹ ಅಗಿದ್ದರೆ, ನಮ್ಮ ದುರದೃಷ್ಟ ಮಳೆಯೆ ಅಗದೆ ಸಂಕಷ್ಟ ಎದುರಿಸುತ್ತಿದ್ದೆವೆ. ಇದರಿಂದ ಪಾರು ಮಾಡಲು ಕೆಸಿ ವ್ಯಾಲಿ ಯೋಜನೆ ಪೂರ್ಣಗೊಂಡು ನೀರು ಹರಿಯುತ್ತಿದೆ. ಎತ್ತಿನಹೊಳೆ ಹಾಗೂ ಯರಗೋಳ್ ಯೋಜನೆ ಪ್ರಗತಿಯಲ್ಲಿದ್ದು, ನೀರಿನ ಭವಣೆ ನೀಗಿಸಲು ಸತತ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಅಣ್ಣಿಹಳ್ಳಿ ಸೋಸೈಟಿ ಅಭಿವೃದ್ಧಿಹೊಂದಲು ಕೃಷ್ಣಪ್ಪ ಮತ್ತು ಶಾಸಕ ಕೆ.ಶ್ರೀನಿವಾಸಗೌಡರ ಶ್ರಮವೇ ಕಾರಣವಾಗಿದೆ ಎಂದರು.

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ರಾಜ್ಯದ ಇತರೆ ಬ್ಯಾಂಕ್‍ಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಹಿಸಲಾರದವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರಿಗೆ ತಕ್ಕ ಉತ್ತರ ತಾಯಂದಿಯೇ ನೀಡಬೇಕು ಎಂದು ಕೋರಿದರು. 202 ಮಹಿಳಾ ಸಂಘಗಳಿಗೆ 10 ಸಾಲ ನೀಡಲಾಗುತ್ತಿದ್ದು, ಪ್ರತಿಯೊಬ್ಬರ ಸದಸ್ಯರಿಗೆ 30 ಸಾವಿರದಿಂದ 1 ಲಕ್ಷದಷ್ಟು ಸಾಲ ಸಿಗುತ್ತದೆ. ಬ್ಯಾಂಕಿನ ಪ್ರಯತ್ನದಿಂದ ಖಾಸಗಿ ಬಡ್ಡಿ ಮಾಫಿಯ ಕಂಪನಿಗಳು ಬೀದಿಗೆ ಬಂದಿವೆ. ಮತ್ತೆ ಯಾರು ಸಹ ಅವರ ಬಳಿಗೆ ಸಾಲಕ್ಕೆ ಹೋಗಬಾರದು, ಪ್ರಾಮಾಣಿಕವಾಗಿ ಮರುಪಾವತಿ ಮಾಡಿದರೆ ಬ್ಯಾಂಕಿನಲ್ಲಿ ಸಾಲ ಸಿಗುತ್ತದೆ ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಗೌಡ, ಶ್ರೀನಿವಾಸಪುರ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಸಂಘದ ಉಪಾಧ್ಯಕ್ಷ ಅಣ್ಣಿಹಳ್ಳಿ ನಾಗರಾಜ್, ಕಾರ್ಯದರ್ಶಿ ಗೋಪಾಲಗೌಡ ಮತ್ತಿತರರು ಹಾಜರಿದ್ದರು.