ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಟೇಬಲ್ ಟೆನಿಸ್ ಟೂರ್ನಾಮೆಂಟ್ : ಕ್ರೀಡೆಯಿಂದ ಹಾಳಾಗುತ್ತಾರೆಂಬ ಭಾವನೆ ಪೋಷಕರಲ್ಲಿಇದೆ – ಗೌತಮ ಶೆಟ್ಟಿ

JANANUDI.COM NETWORK

ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಟೇಬಲ್ ಟೆನಿಸ್ ಟೂರ್ನಾಮೆಂಟ್ : ಕ್ರೀಡೆಯಿಂದ ಹಾಳಾಗುತ್ತಾರೆಂಬ ಭಾವನೆ ಪೋಷಕರಲ್ಲಿಇದೆ – ಗೌತಮ ಶೆಟ್ಟಿ


ಕುಂದಾಪುರ: ಆಗಸ್ಟ್ 21 ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಟೂರ್ನಾಮೆಂಟ್ 2019-20 ನ್ನು ಕುಂದಾಪುರದ ಟೋರ್ಪಡಸ್ ಸ್ಪೋಟ್ರ್ಸ್ ಕ್ಲಬ್ ಇದರ ಅಧ್ಯಕ್ಷರಾದ ಗೌತಮ ಶೆಟ್ಟಿ ಉದ್ಘಾಟಿಸಿದರು.
ಅವರು ಮಾತನಾಡಿ ಮಕ್ಕಳುಕ್ರೀಡೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಆದರೆ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿದರೆ ಹಾಳಾಗುತ್ತಾರೆ ಎಂಬ ಭಾವನೆ ಪೋಷಕರಲ್ಲಿಇದೆ, ಅದಕ್ಕಾಗಿ ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತಿಲ್ಲ. ಕ್ರೀಡೆಯಂತಹ ಪಾಠೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಪಠ್ಯ ವಿಷಯದಲ್ಲಿಯೂ ಸಹಕರಿಸುತ್ತದೆ. ಮಕ್ಕಳ ಮನಸ್ಸು ಏಕಾಗ್ರತೆ ತಂದುಕೊಳ್ಳಲು ಸಹಕರಿಸುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಶ್ವಸ್ಥರಾದ ಕೆ.ಶಾಂತಾರಾಮ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಶುಭಹಾರೈಸಿದರು.
ಈ ಸಂದರ್ಭದಲ್ಲಿವೇದಿಕೆಯಲ್ಲಿಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಜೇಮ್ಸ್ ಒಲಿವೆರಾ, ಮತ್ತುಕುಂದಾಪುರದ ಮನೋಜ್ ನಾಯರ್ ಉಪಸ್ಥಿತರಿದ್ದರು.
ಕಾಲೇಜಿನದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಅರುಣಎ.ಎಸ್ ವಂದಿಸಿದರು.