JANANUDI.COM NETWORK
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್, ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆ
ಕುಂದಾಪುರ, ಆ.15: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್ (ರಿ) ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ನೇರವೇರಿಸಿ ಸ್ವಾತಂತ್ರತ್ಸೊವದ ಶುಭವನ್ನು ಹಾರೈಸಿದರು. ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಕೂಡ ಸ್ವಾತಂತ್ರತ್ಸೊವದ ಶುಭವನ್ನು ಹಾರೈಸಿದರು
ಕಾರ್ಯಕ್ರಮದಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್ (ರಿ) ಇದರ ಗೌರವ ಅಧ್ಯಕ್ಷರಾದ ಭಾಸ್ಕರ ಪೂಜಾರಿ ವಕ್ವಾಡಿ, ಕಾರ್ಯದರ್ಶಿ ಮಾಣಿ ಉದಯ ಕುಮಾರ್, ಉಪಾಧ್ಯಕ್ಷರಾದ ಶೇಖರ ಪೂಜಾರಿ, ಜೆಮ್ಸ್ ರೆಬೇರೊ, ಭಾಸ್ಕರ ಶೇರೆಗಾರ್ , ಶುಭಕರ ಶೆಟ್ಟಿ, ವಿ.ಎನ್.ಗುಂಡು, ಜಯರಾಮ್ ಶೆಟ್ಟಿ, ಹಾಗೂ ಇತರ ಪದಾಧಿಕಾರಿಗಳು ಹಾಗೂ ಬ್ಲಾಕ್ ಯುವ ಕಾಂಗ್ರೆಸಿನ ಅಧ್ಯಕ್ಷರಾದ ಇಶ್ಚಿತಾರ್ಥ ಶೆಟ್ಟಿ ಪುರಸಭಾ ಸದಸ್ಯರಾದ ಅಬೂ ಮಹ್ಮದ್, ಬ್ಲಾಕ್ ಕಾಂಗ್ರೆಸಿನ ಕೇಶವ ಭಟ್,ಕೆ.ಶಿವಕುಮಾರ್, ಜ್ಯೋತಿ ಎಸ್. ನಾಯಕ್, ಜ್ಯೋತಿ ಮೊಗವೀರ, ಆಶಾ ಕರ್ವಾಲ್ಲೊ, ಸುವರ್ಣ ಆಲ್ಮೇಡಾ, ಆನಂದ ಪೂಜಾರಿ, ಹೇಮಾ, ಶೋಭಾ, ಸಚ್ಚಿದಾನಂದ ಮತ್ತಿರರು ಉಪಸ್ಥಿತರಿದ್ದರು.
ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನಿನ ಅಧ್ಯಕ್ಷ ಟಿ.ಲಕ್ಷ್ಮಣ ಶೆಟ್ಟಿ ಸ್ವಾಗತಿಸಿದರು.ಕೆ.ಆನಂದ ಪೂಜಾರಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.