ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ

JANANUDI.COM NETWORK

 

ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ


ಕುಂದಾಪುರ: ಕನ್ನಡ ಸಾಹಿತ್ಯದ ವಾಸ್ತವಿಕ ನೆಲೆಗಳ ಹೊಸ ಬಗೆಯ ಚಿಂತನೆಗಳ ಭಾಗವಾಗಿ ಹೆಚ್.ಎಸ್. ಅನುಪಮಾ ನಿಂತಿದ್ದಾರೆ ಅವರ ಕೃತಿಗಳಲ್ಲಿ ನಮ್ಮನ್ನು ನಾವೇ ಅರ್ಥ ಮಾಡಿಕೊಲ್ಳುವ ಚಿಂತನೆಗಳನ್ನು ಅವರ ಬರಹಗಳಾಗಲಿ ಅಥವಾ ಕವಿತೆಗಳಾಗಲಿ ಹಾಗೆ ಕಥೆಯಾಗಲಿ ಹುಟ್ಟುಹಾಕುತ್ತದೆ ಎಂದು ಲೇಖಕರಾದಶಿವಮೊಗ್ಗದ ಡಾ.ಎಸ್. ಸಿರಾಜ್ ಅಹಮದ್ ಹೇಳಿದರು. ಅಭಿಪ್ರಾಯಪಟ್ಟರು.
ಅವರುಆಗಸ್ಟ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪುರಸ್ಕøತಕೃತಿ“ಚಿವುಟಿದಷ್ಟೂಚಿಗುರು”ಕುರಿತು ಮಾತನಾಡುತ್ತಿದ್ದರು.
ಅನುಪಮಾ ವೃತ್ತಿಯಲ್ಲಿ ವೈದ್ಯೆಯಾದರೂ ಪ್ರವೃತ್ತಿಯಲ್ಲಿ ಹಲವಾರು ಕ್ಷೇತ್ರಗಳ ಬಾಗವಾಗಿ ನಿಂತಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡರೂ ಅವರು ಬಹಳ ವಾಸ್ತವಿಕ ನೆಲೆಯಲ್ಲಿ ಸಮಾಜವನ್ನು ನೋಡುವ ದೃಷ್ಟಿಕೋನ ಅವರ ಬರಹಗಳಲ್ಲಿ ಕಾಣುತ್ತದೆ. ನಾವು ಓದುಗರು ಅವನ್ನು ಬಹಳ ಬೇರೇನೆ ರೀತಿಯಲ್ಲಿಅರ್ಥ ಮಾಡಿಕೊಳ್ಳಬೇಕು. ಹೊಸತನದ ಹುಡುಕಾಟದಲ್ಲಿರುವ ಈ ವ್ಯವಸ್ಥಯಲ್ಲಿಅನುಪಮಾ ಅವರ ರಚನೆಗಳು ನಮ್ಮನ್ನು ರಾಜಕೀಯವಾಗಿ ಸಾಂಸ್ಕøತಿವಾಗಿ ಸಾಮಾಜಿಕವಾಗಿರುವಂತಹ ಅಂಶಗಳನ್ನು ಪರಿಪೂರ್ಣಗೊಳಿಸುತ್ತವೆಎಂದು ಹೇಳಿದರು. .
ಅವರ ಕೃತಿಗಳು ಹೊಸ ಆಯಾಮಗಳ ಬಾಗವಾಗಿರುತ್ತವೆ. ಪ್ರಶಸ್ತಿ ಪುರಸ್ಕøತಕೃತಿ“ಚಿವುಟಿದಷ್ಟೂಚಿಗುರು”ಇದರಲ್ಲಿನ ಕಥೆಗಳು ಸಮಾಜದ ಆತಂಕ, ತುಮುಲ, ನಂಬಿಕೆಗಳನ್ನು ಸಂಬಂಧ, ಈಗಿನ ಜೀವನಕ್ರಮದ ಯೋಚನಾಲಹರಿಗಳನ್ನು ಬೇರೆಬೇರೆ ವ್ಯಕ್ತಿತ್ವಗಳ ಮೂಲಕ ಓದುಗನಿಗೆ ತೆರೆದಿಡುತ್ತಾ ಹೋಗುತ್ತವೆ. ಇದಲ್ಲದೇಅವರ ಬಿಡುಗಣ್ಣಿನ ನೋಟಗಳು ಸೂಕ್ಷ್ಮ ಗ್ರಹಿಕೆಗಳು ಅನುಪಮಾ ಅವರ ಪ್ರತಿಯೊಂದು ರಚನೆಗಳು ನಾವು ನೀವು ಬದುಕುವ ಈ ವರ್ತಮಾನದ ಸಂಘರ್ಷಗಳನ್ನು ದೈನಂದಿನ ದಿನಚರಿಗಳನ್ನು ಹೇಳುತ್ತಾ ಹೋಗುತ್ತವೆ. ನಮ್ಮದೇ ಜೀವನದ ಸಂಗತಿಗಳೇನೋ ಇದು ಎನ್ನುವಂತೆ ಭಾಸವಾಗಿವಷ್ಟು ನಮ್ಮ ಅನುಭವಗಳ ಹೂರಣವಾಗಿ ನಮ್ಮಕಣ್ಮಂದೆ ಬಂದು ನಿಲ್ಲುತ್ತವೆ.ಎಂದು ಅಭಿಪ್ರಾಯಪಟ್ಟರು.
ಕೇವಲ ವರ್ತಮಾನದ ಬದುಕಿಗಷ್ಟೇ ಅವರರಚನೆ ಸೀಮಿತವಾಗಿಲ್ಲ. ಸಾಮಾಜಿಕ, ರಾಜಕೀಯ, ಸಂವಿಧಾನ, ಗೋಹತ್ಯೆ, ಗೋರಕ್ಷಣೆ, ಮಾತೃತ್ವದ ಹೃದಯದ ತುಮುಲಗಳು ಅತ್ಯಾಚಾರ, ಅನ್ಯಾಯ, ಹೋರಾಟ,ಚಿಂತಕರು ಪ್ರಾಜ್ಞರು ಪ್ರವಾಸ ಹೀಗೆ ಹತ್ತು ಹಲವು ವಿಷಯಗಳು ಅವರ ರಚನೆಗಳಲ್ಲಿ ಪಾರುಪತ್ಯೆ ಪಡೆದಿವೆ ಎಂದರೆ ಅತಿಶಯೋಕ್ತಿಅಲ್ಲ. ಇಷ್ಟೊಂದು ದೀರ್ಘ ಮತ್ತು ಸಂಕೀರ್ಣ ಸವಾಲುಗಳನ್ನು ಎದುರಿಸುವದರ ಮಧ್ಯೆನಾವು ನಮ್ಮನ್ನೇ ಅರ್ಥ ಮಾಡಿಕೊಂಡಷ್ಟು ಅನುಭವ ಅವರ ಪ್ರಶಸ್ತಿ ಕೃತಿಯಲ್ಲಿದೆ. ನಮ್ಮ ಬದುಕಿನರೀತಿ ನೀತಿಗಳು, ನಮ್ಮಗರಿಷ್ಠ ವಾಸ್ತವಿಕತೆಯ ತುಮುಲಗಳು ಸವಾಲುಗಳು ನಮ್ಮನ್ನು ಆವರಿಸಿಕೊಂಡಿದೆ ಎಂದರೆ ಅದರಿಂದ ಬಿಡಿಸಿಕೊಳ್ಳೋದು ಕಷ್ಟ.ಅದಕ್ಕೆಗರಿಷ್ಠ ಹಂತಹ ಮಾಹಿತಿಯೂಗರಿಷ್ಠ ಅರ್ಥಮಾಡಿಕೊಳ್ಳುವಿಕೆಯೂ ನಮ್ಮಲ್ಲಿ ಇರಬೇಕು. ಅಲ್ಲಿ ನಮ್ಮ ಅಭಿಪ್ರಾಯಗಳು ಸೋಲಬಹುದು ಹಾಗಿದ್ದಾಗ ಒಬ್ಬ ಸಾಹಿತಿ ಇಡಿ ಭೂಮಿಯನ್ನು ಕಿವಿಯಿಂದ ಕೇಳಿದಾಗ ಮಾತ್ರ ಅದು ಸಾಧ್ಯ. ಅನುಪಮಾ ಅಂತಹಒಬ್ಬ ಬರಹಗಾರರಲ್ಲಿ ಕಥೆಗಾರರಲ್ಲಿಒಬ್ಬರಾಗಿದ್ದಾರೆ. ವರೊಂದು ಕ್ಯಾನ್‍ವಾಸ್ ಇದ್ದ ಹಾಗೆ ಮನಸಿಗೆ ಅನಿಸಿದ್ದನ್ನು ಅನುಭವಿಸಿದ್ದನ್ನು ತನ್ನ ಕಥೆಗಳಲ್ಲಿ ಚಿತ್ರಿಕರಿಸುತ್ತಾ ಹೋಗುತ್ತಾರೆ. ಸಣ್ಣ ವಿಷಯ ವಿದ್ದರೂ ಅದರಲ್ಲಿ ಜೋವಂತಿಕೆ, ಭಾವನೆ ಮತ್ತು ಸಂವೇದನೆಯನ್ನುv Àುಂಬುವ ಕೆಲಸ ಕಥೆಗಾರನದ್ದಾಗಿರುತ್ತದೆ. ಅಂತಹ ಒಂದು ಪ್ರಯತ್ನ ಈ ಕೃತಿಯಲ್ಲಿ ಆಗಿದೆ. ಭೀನ್ನ ಆಲೋಚನಾ ಕ್ರಮ, ನೆಲೆಗಳು, ಚಿಂತನೆಗಳ ಮಧ್ಯೆ ಮಾನವೀಯ ಸಂಬಂಧಗಳ ಹುಡುಕಾಟದಲ್ಲಿ ಅನುಪಮಾ ಹೊಸದೊಂದನ್ನುP Àಟ್ಟಿಕೊಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಎಂದು ಅವರು ಹೇಳಿದರು.
ಡಾ.ಎಚ್.ಎಸ್.ಅನುಪಮಾ ಅವರು ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ತುಂಬಾ ಸಂತೋಷವೆನಿಸುತ್ತದೆ. ನನ್ನ ತಾಯಿಯ ಮನೆ ಮತ್ತುಗಂಡನ ಮನೆಯ ಸಂಬಂಧವನ್ನು ಈ ಪ್ರಶಸ್ತಿ ಗಟ್ಟಿಗೊಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್‍ಅವರು ಪ್ರಶಸ್ತಿ ಪ್ರದಾನ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಸಮಿತಿ ಸದಸ್ಯರುಗಳಾದ ಕೋಟ ಶಿವಾನಂದ ಕಾರಂತ, ವಸಂತ ಬನ್ನಾಡಿ ಮತ್ತುಜನಕಿ ಬ್ರಹ್ಮಾವರ, ಡಾ.ಹೆಚ್.ಶಾಂತಾರಾಮ್ ಅವರಧರ್ಮ ಪತ್ನಿ ವಿಜಯಲಕ್ಷ್ಮಿ ಶಾಂತಾರಾಮ್ ಬಸ್ರೂರು ಶಾರದಾ ಕಾಲೇಜಿನ ಪ್ರಾಮಶುಪಾಲರಾದ ಪ್ರೊ.ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿಸದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಯೋಜಕರಾದ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಡಾ.ಜಿ.ಎಮ್.ಗೊಂಡ ವಂದಿಸಿದರು. ಉಪನ್ಯಾಸಕಿ ರೋಹಿಣಿ ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿಸದರು. ಉಪನ್ಯಾಸಕಿ ಸವಿತಾ ಕೆ. ಪರಿಚಯಿಸಿದರು.
ಇಂದು ಬೆಳಿಗ್ಗೆ ಡಾ.ಹೆಚ್.ಶಾಂತಾರಾಮ್‍ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.