ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು

JANANUDI.COM NETWORK  PHOTOS: ALTON REBEIRO

ಕಥೊಲಿಕ್  ಸಭಾ ಕುಂದಾಪುರ ವಲಯ ಸಮಿತಿಯಿಂದ ಕುಂದಾಪುರದಲ್ಲಿ ಮುಸ್ಲಿಂ ಬಾಂಧವರಿಗೆ ಬ್ರಕೀದ್ ಹಬ್ಬದ  ಶುಭಾಶಯಗಳು

ಕುಂದಾಪುರ, ಆ.12: ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ಕೆಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಸದಸ್ಯರು ಕುಂದಾಪುರ ಹಂಗಳೂರು ಮೊಯಿದ್ದೀನ್ ಜುಮ್ಮಾ ಮಸೀದಿ ಭೇಟಿ ನೀಡಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷ ವಿನೋದ್ ಕ್ರಾಸ್ತಾ ಅವರು ಕೆಥೊಲಿಕ್ ಸಭಾ ಸಂಘಟನೆ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಮುಸ್ಲಿಂ ಬಾಂಧವರಿಗೆ ವಿವರಿಸಿದರಲ್ಲದೆ ಹಬ್ಬದ ಸಲುವಾಗಿ ಶುಭಾಶಯಗಳನ್ನು ಕೋರಿದರು.

ಕುಂದಾಪುರ ವಲಯ ಕೆಥೊಲಿಕ್ ಸಭಾ ಅಧ್ಯಕ್ಷರಾದ ಹೆರಿಕ್ ಗೊನ್ಸಾಲ್ವಿಸ್ ಮಸೀದಿಯ ಮುಖ್ಯಸ್ಥರಿಗೆ ಹೂಗುಚ್ಛ ನೀಡುವುದರೊಂದಿಗೆ ಶುಭಾಶಯ ಕೋರಿದರು

    ಕೆಥೊಲಿಕ್ ಸಭಾ ವಲಯ ಕಾರ್ಯದರ್ಶಿ ಲೀನಾ ತಾವ್ರೊ, ಕೋಶಾಧಿಕಾರಿ ವಿಲ್ಸನ್ ಡಿ ಆಲ್ಮೇಡಾ, ಕೇಂದ್ರಿಯ ಸಮಿತಿಯ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ವಲಯ ರಾಜಕೀಯ ಸಂಚಾಲಕರಾದ ಆರ್ಚಿಬಾಲ್ಡ್ ಕ್ವಾಡ್ರಸ್, ವಲಯ ಉಪಾಧ್ಯಕ್ಷರಾದ ಎಲ್ಟನ್ ರೆಬೆರೋ, ವಲಯ ಸಹಸಂಚಾಲಕಿ ಪ್ರೇಮಾ ಡಿಕುನ್ಹಾ, ಸಹ ಕೋಶಾಧಿಕಾರಿ ವಿಲ್ಫ್ರೇಡ್ ಮಿನೇಜಸ್ , ಮಸೀದಿ ಸಮಿತಿಯ ಅಧ್ಯಕ್ಷರಾದ ಭಾಷಾ ಸಾಹೇಬ್, ಕಾರ್ಯದರ್ಶಿ ಅಬ್ದುಲ್ ರಶೀದ್, ಎಮ್ ಶಫಿ, ಹಾಝಿ ಅಬು ಶೇಖ್, ಪಿ ಮೊಯ್ದಿನ್, ಬಾಬು ಕಲಂದರ್, ಅಶ್ರಫ್ ಯೂಸೂಫ್ ಮುಂತಾದವರು ಉಪಸ್ಥಿತರಿದ್ದರು.