ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ

ವರದಿ: ಚಂದ್ರಶೇಖರ ಬೀಜಾಡಿ

ಕೋಟೇಶ್ವರ ಗಾಣಿಗ ಯುವ ಸಂಘಟನೆ:ವರಮಹಾಲಕ್ಷ್ಮೀ ಪೂಜೆ


ಕುಂದಾಪುರ:ವರಮಹಾಲಕ್ಷ್ಮೀ ಪೂಜೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಕ್ರಮ ಕೇವಲ ಮನೆಯಲ್ಲಿ ಮಾಡಿ ನಮ್ಮ ಕುಟುಂಬದ ಬಗ್ಗೆ ಬೇಡಿಕೊಳ್ಳುವುದಕ್ಕಿಂತ ಎಲ್ಲರೂ ಒಟ್ಟು ಸೇರಿ ಮಾಡಿದಾಗ ದೇವರು ಬೇಗನೆ ಒಲಿಯುತ್ತಾನೆ ಎಂದು ಕುಂದಾಪುರ ವ್ಯಾಸರಾಜ ಮಠದ ಅರ್ಚಕ ವೇದಮೂರ್ತಿ ವಿಜಯ ಪೆಜತ್ತಾಯ ಹೇಳಿದರು.
ಅವರು ಶುಕ್ರವಾರ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರ ಸೌಧದಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಸಂದೇಶ ನೀಡಿದರು.
ವರಮಹಾಲಕ್ಷ್ಮೀ ಎಲ್ಲರಿಗೂ ಸುಖ,ಶಾಂತಿ,ನೆಮ್ಮದಿಯನ್ನು ಕೊಟ್ಟು,ಸಮಾಜವನ್ನು ಒಗ್ಗಟ್ಟಿನಿಂದ ಅಭಿವೃದ್ಥಿ ಪಥದಂತ ತೆಗೆದುಕೊಂಡು ಹೋಗುವ ಶಕ್ತಿ ಕರುಣಿಸಲಿ ಎಂದರು.
ವೇದಿಕೆಯಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಗೌರವಾಧ್ಯಕ್ಷ
ಮಂಜುನಾಥ ಹೊದ್ರೋಳಿ,ಕಾರ್ಯದರ್ಶಿ ಸಂತೋಷ ಗಾಣಿಗ,ಕೋಶಾಧಿಕಾರಿ ಉದಯ ಗಾಣಿಗ,ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಗೌರವಾಧ್ಯಕ್ಷೆ ಕಲಾವತಿ ಅಚ್ಯುತ್,ಕಾರ್ಯದರ್ಶಿ ವಿಜಯ ಕೃಷ್ಣಮೂರ್ತಿ, ಕೋಶಾಧಿಕಾರಿ ಕಲ್ಯಾಣಿ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಸ್ಥಾಪಕಾಧ್ಯಕ್ಷ ನಾಗರಾಜ ಬಿ.ಜಿ ಅತಿಥಿಗಳನ್ನು ಗೌರವಿಸಿದ್ದರು.
ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಅಭಿಲಾಷ್ ಬಿ.ಎ ಸ್ವಾಗತಿಸಿದರು.ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷೆ ಪ್ರಭಾವತಿ ಗಾಣಿಗ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.