JANANUDI NETWORK Photos : Eeugine Dsouza
ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಹಾನಿ
ಉಡುಪಿ ತಾಲೂಕಿನ ಪಾಂಗಳ ಸಿ.ಎಸ್.ಐ. ದೇವಾಲಯಕ್ಕೆ ಮಳೆಯಿಂದ ಭಾರಿ ಹಾನಿಯಾಗಿದ್ದು ದೇವಾಲಯದ ಮೆಲ್ಛಾವಣಿ ಮತ್ತು ಕೆಳ ಛಾವಣಿಗಳ ಹಂಚುಗಳು ಗಾಳಿ ಮಳೆಯಲ್ಲಿ ಹಾರಿ ಹೋಗಿದ್ದು ತುಂಬ ನಶ್ಟ ಉಂಟಾಗಿದೆ.
ಹಂಚುಗಳೆಲ್ಲಾ ದೇವಾಲಯದ ಒಳಗಡೆ ಮತ್ತು ಹೊರಗಡೆ ಚೆಲ್ಲಾ ಪಿಲ್ಲಿಯಾಗಿದ್ದು, ಆಸನಗಳ ಮೇಲೂ ಹಂಚುಗಳು ಬಿದ್ದಿವೆ.
ಕೆಲವರು ಆತಂಕಗೊಂಡು ಪಾಂಗ್ಳ ಚರ್ಚ್ ಧರ್ಮಗುರು ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರಿಗೆ ದೂರವಾಣಿ ಮೂಲಕ ಕೇಳತೊಡಗಿದ್ದಾರೆಂದು ಧರ್ಮಗುರುಗಳು ತಿಳಿಸಿದ್ದಾರೆ. ನಮ್ಮದು ಪಾಂಗ್ಳಾ ಚರ್ಚ್ ಅಥವ ಶಂಕರಪುರ ಚರ್ಚ್, ಹಾನಿಯಾದ ಚರ್ಚ್ ಸಿ.ಎಸ್.ಐ. ಪಾಂಗಳ ಎಂದು ಅವರು ತಿಳಿಸಿದ್ದಾರೆ.