ಕುಂದಾಪುರ ರೊಟಾರ್‍ಯಾಕ್ಟ್ ಕ್ಲಬ್ ಪದಗ್ರಹಣ – ಆಲ್ಡ್ರಿನ್ ಡಿಸೋಜಾ ಅಧ್ಯಕ್ಷರಾಗಿ ಆಯ್ಕೆ

JANANUDI NETWORK

ಕುಂದಾಪುರ ರೊಟಾರ್‍ಯಾಕ್ಟ್ ರೊಟಾರ್ಯಾಕ್ಟ್ ಕ್ಲಬ್ ಪದಗ್ರಹಣ – ಆಲ್ಡ್ರಿನ್ ಡಿಸೋಜಾ ಅಧ್ಯಕ್ಷರಾಗಿ ಆಯ್ಕೆ


ಕುಂದಾಪುರ,ಆ.6: ಕುಂದಾಪುರ ರೊಟಾರ್‍ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ರೋಟರಿ ಕ್ಲಬ್ ದಕ್ಷಿಣದ ರೋಟರಿ ಸಭಾಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಆಲ್ಡ್ರಿನ್ ಡಿಸೋಜಾ ಪುನರಾಯ್ಕೆಯಾಗಿದ್ದು ಅವರ ಪದಗ್ರಹಣವನ್ನು ರೋಟರಿ ಕ್ಲಬ್ ದಕ್ಷಿಣದ ಇದರ ಅಧ್ಯಕ್ಷ ರೋ|ದೇವರಾಜ್ ಕೆ. ಇವರು ನೇರವೇರಿಸಿಕೊಟ್ಟು ಶುಭ ಕೋರಿದರು. ಕಾರ್ಯದರ್ಶಿಯಾಗಿ ವಿನಯ್ ಗಾಣಿಗ, ಖಜಾಂಚಿಯಾಗಿ ವಿಲ್ಬನ್, ಸಹ ಕಾರ್ಯದರ್ಶಿಯಾಗಿ ರಂಜಿತ್ ಇವರುಗಳು ಆಯ್ಕೆಯಾಗಿದ್ದಾರೆ.
ಅತಿಥಿಗಳಾದ ಜಗನಾಥ್ ‘ಇವತ್ತಿನ ಯುವಕರು ಮೊಬಾಯ್ಲ್ ವಾಟ್ಸಪ್‍ಗಳ ಹಿಂದೆಯೇ ಇರುವುದನ್ನು ಬಿಟ್ಟು, ಸಮಾಜ ಸೇವೆಗಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ರೋಟರಿ ಸಂಸ್ಥೆಗಳಲ್ಲಿ ಸೇರಿಕೊಳ್ಳ ಬೇಕು’ ಎಂದರು. ಇನ್ನೊರ್ವ ಅತಿಥಿ ರೋ|ಪ್ರಕಾಶ್ ನಾಯಕ್ ‘ರೋಟರಿ ಸಂಸ್ಥೆಯಲ್ಲಿ ಹೆಚ್ಚೆಚ್ಚು ಯುವಕ ಯುವತಿಯರು ಸೇರ್ಪಡೆಗೊಂಡು, ರೊಟಾರ್‍ಯಾಕ್ಟ್ ಕ್ಲಬನ್ನು ಬಲಿಷ್ಟ ಸಂಸ್ಥೆಯನ್ನಾಗಿ ಮಾಡ ಬೇಕು. ರೊಟಾರ್‍ಯಾಕ್ಟ್ ಕ್ಲಬ್‍ಗಳು ಸಮಾಜಕ್ಕೆ ಒಳಿತಾಗುವಂತಹ ಶಿಬಿರಗಳನ್ನು , ಸಮಾಜಕ್ಕೆ ಒಳಿತಾಗು ಕೆಲಸಗಳಲ್ಲಿ ತೊಡಗಬೇಕು’ ಅಂದರು.
     ಮುಖ್ಯ ಅತಿಥಿ ರೋ| ಹೆಸಾರಂತ ವೈದ್ಯ ಡಾ|ರಾಮ್ ಮೋಹನ್ ‘ಒಂದು ಸಂಸ್ಥೆಗೆ ನಾವು ಸೇರಿಕೊಂಡ ಮೇಲೆ ಸಭೆ ಸಮಾರಂಭದ ಹಾಜರಾತಿಕೆಗೆ ಮಹತ್ವವನ್ನು ಕೊಡಬೇಕು. ರೋಟರಿ ಕ್ಲಬ್ ಮೂಲ ಅಮೇರಿಕವಾದರೂ, ರೊಟಾರ್‍ಯಾಕ್ಟ್ ಕ್ಲಬ್ ಯೋಜನೆಯ ಮೂಲ ಭಾರತವೇ, ಯುವಕರಿರುವಾಗಲೇ, ಮಕ್ಕಳಿಗೆ ಸಮಾಜ ಸೇವೆ, ನಾಯ್ಕತ್ವ ಗುಣ ಹೊಂದಿರ ಬೇಕೆಂಬ ಆಶಯದೊಂದಿಗೆ, ಭಾರತದಲ್ಲಿನ ರೋಟೆರಿಯನರು ಅದರ ಯೋಜನೆ ತಯಾರಿಸಿ ಅಮೇರಿಕಕ್ಕೆ ಕಳುಹಿಸಿಕೊಟ್ಟು, ಅದು ಅಮೇರಿಕನರಿಗೆ ಬಹಳ ಮೆಚ್ಚುಗೆಯಾಗಿ, ಅಲ್ಲಿ ಪ್ರಥಮ ರೊಟಾರ್‍ಯಾಕ್ಟ್ ಕ್ಲಬ್ ಆರಂಭಿಸಿ, ಎರಡನೆ ರೊಟಾರ್‍ಯಾಕ್ಟ್ ಕ್ಲಬ್ ಸಿಕಂದರಭಾಗ್‍ನಲ್ಲಿ ಆರಂಭಗೊಂಡಿದ್ದು ನಮ್ಮ ಹೆಮ್ಮೆಯ ವಿಚಾರವಾಗಿದೆ, ರೋಟೆರಿಯನರು ರೊಟಾರ್‍ಯಾಕ್ಟ್ ಕ್ಲಬ್‍ಗಳನ್ನು ಉತ್ತಮ ಮಟ್ಟದಲ್ಲಿ ಬೆಳಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪವರ್ ಲಿಪ್ಟಿಂಗ್ ಪಟು ಜಾಕ್ಸನ್ ಡಿಸೋಜಾ ಆನಗಳ್ಳಿ ಮತ್ತು ರಾಜ್ಯಾ ಮಟ್ಟದ ಪವರ್ ಲಿಪ್ಟಿಂಗ್ ಪಟು ಪವನ್ ಗಾಣಿಗರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬಿನ ಕಾಯದರ್ಶಿ ಶೋಭಾ ಭಟ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಾಮ್ಯುವೆಲ್ ಲುವಿಸ್ ಕಾರ್ಯಕ್ರ ನಿರೂಪಿಸಿದರು. ಕಾರ್ಯದರ್ಶಿ ವಿನಯ್ ಗಾಣಿಗ ವಂದಿಸಿದರು.