ವರದಿ: ವಾಲ್ಟರ್ ಮೊಂತೇರೊ
ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕಲ್ಯಾ ಸರಕಾರಿ ಫ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೇಜಿ ನಾಟಿ ಪ್ರಾತ್ಯಕ್ಷಿಕೆ ಆಯೋಜನೆ
ಗದ್ದೆಗಿಳಿದು ಕೃಷಿ ಬದುಕಿನ ಅನುಭವಪಡೆದ ವಿದ್ಯಾರ್ಥಿಗಳು
ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಕಲ್ಯಾ ಸರಕಾರಿ ಫ್ರೌಢಶಾಲೆ ಇದರ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್ಶಿಪ್ ಕಾರ್ಯಕ್ರಮದಡಿಯಲ್ಲಿ ಕೆದಿಂಜೆ ಶಿವನೇತ್ರ ಪ್ರಿಂಟರ್ಸ್ ಬಳಿ ನೇತ್ರಾವತಿ ಶೆಟ್ಟಿಯವರ ಮನೆಯ ಗದ್ದೆಯಲ್ಲಿ ನೇಜಿ ನಾಟಿ ಕಾರ್ಯ ವೈಖರಿಯ ಪ್ರಾತ್ಯಕ್ಷಿಕೆ, ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸೋಮವಾರ ಜರಗಿತು.
ಕಲ್ಯಾ ಸರಕಾರಿ ಫ್ರೌಢಶಾಲಾ ಮುಖ್ಯಶಿಕ್ಷಕಿ ಗದ್ದೆಯಲ್ಲಿ ನೇಜಿ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಅಬ್ಬನಡ್ಕ ಸತೀಶ್ ಪೂಜಾರಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ, ಆನಂದ ಪೂಜಾರಿ, ದಿನೇಶ್ ಪೂಜಾರಿ ಬಿರೋಟ್ಟು, ಸುರೇಶ್ ಪೂಜಾರಿ ಕಾಸ್ರಬೈಲು, ಧನಂಜಯ ಕುಲಾಲ್, ಬಾಲಕೃಷ್ಣ ಮಡಿವಾಳ, ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ, ಹರಿಣಿ ಪೂಜಾರಿ, ವೀಣಾ ಪೂಜಾರಿ, ಹರಿಣಾಕ್ಷಿ ಪೂಜಾರಿ, ಸುನೀಲ್ ಕುಲಾಲ್, ಸುನೀತಾ ಪಿಂಟೋ, ಅಶ್ವಿನಿ, ಆರತಿ ಮೊದಲಾದವರಿದ್ದರು.
ಕೃಷಿ ಬದುಕಿನ ಸಂಭ್ರಮದ ಪರಿಚಯ
ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಕೃಷಿ ಬದುಕಿನ ಪರಿಚಯ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಕೃಷಿ ಬದುಕಿನಲ್ಲಿರುವ ಸಂಭ್ರಮದ ಅರಿವನ್ನು ಕಟ್ಟಿಕೊಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.