ಬೀಜಾಡಿಯಲ್ಲಿ ಸಂಭ್ರಮದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

 

ವರದಿ: ಚಂದ್ರಶೇಖರ, ಬೀಜಾಡಿ 

ಬೀಜಾಡಿಯಲ್ಲಿ ಸಂಭ್ರಮದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ


ಕುಂದಾಪುರ: ಕುಂದಾಪ್ರ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದರ ಉಳಿವಿಗೆ ಎಲ್ಲರೂ ಶ್ರಮಿಸಬೇಕಾದೆ. ನಮ್ಮ ಹಿರಿಯರು ನೀಡಿದ ಭಾಷೆ, ಬದುಕಿನ ಬಗ್ಗೆ ಇಂದಿನ ಯುವ ಸಮೂಹಕ್ಕೆ ತಿಳಿದು ಕೊಂಡು ಸಾಗಬೇಕಿದೆ ಎಂದು ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎನ್.ನಿತ್ಯಾನಂದ ಹೇಳಿದರು.
ಅವರು ಗುರುವಾರ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಬೀಜಾಡಿ ಗೋಪಾಡಿ
ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಮಾತನಾಡಿ, ಕುಂದಾಪ್ರ ಭಾಷೆ ಬದುಕಿನ ಭಾಷೆಯಾಗಿದೆ.
ಕನ್ನಡದ ಭಾಷೆಯ ಉಳಿವಿಗೆ ಕುಂದಾಪ್ರ ಭಾಷೆಯ ಕೊಡುಗೆ ಅಪಾರ.ಕುಂದಾಪ್ರ ಭಾಷೆಯ ಮೇಲಿನ ಗೌರವದಿಂದ ಇಷ್ಟೊಂದು ಜನ ಸೇರಿರುವುದು ಈ ಭಾಷೆಯ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಕರ್ತ ವಸಂತ ಗಿಳಿಯಾರು,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಗಮಿಸಿ ಆಶ್ರಯದ ಶುಭ ನುಡಿಯನ್ನಾಡಿದರು.
ಸಂಸ್ಥೆಯ ಅಧ್ಯಕ್ಷ ಬಿ.ಮಂಜುನಾಥ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಅನೂಪ್ ಕುಮಾರ್ ಬಿ.ಆರ್ ವಂದಿಸಿದರು.

 

ಬೀಜಾಡಿ ಮಿತ್ರ ಸಂಗಮದ ಪ್ರಧಾನ ಕಾರ್ಯದರ್ಶಿ ಚಂದ್ರ ಬಿ.ಎನ್ ನೇತೃತ್ವದ ತಂಡ ಕುಂದಾಪ್ರ ಕನ್ನಡ ಜಾನಪದ ಹಾಡು 
ಧಿಮ್ಸಾನ್ ಎನ್ನಿರೋ ಧೀಂ ಗುಟ್ಕಂಡ್ ಕುಣಿರೋ ಎನ್ನುವ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬೀಜಾಡಿ ಶಾರದಾ ಗಾಣಿಗ ತಂಡ ಶೋಭಾನೆ ಹಾಡು ಹಾಡಿ ಎಲ್ಲರ ಮೆಚ್ಚುಗೆ ಪಡೆದರೆ,ಸಂಸ್ಥೆಯ ಮಾಜಿ ಅಧ್ಯಕ್ಷ ನಾಗರಾಜ ಬೀಜಾಡಿ ತಂಡ ಭತ್ತಕುಟ್ಟುವ ಹಾಡುನ್ನು ಭತ್ತ ಕುಟ್ಟುವ ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶನ ನೀಡಿ ಕುಂದಗನ್ನಡ ಸಂಸ್ಕøತಿ ಅನಾವರಣಗೊಳಿಸಿದರು.

 

ಅತಿಥಿಗಳ ಮಾತಿನಲ್ಲಿಮೀನುಗಾರಿಕೆಯ ಅಂಬು ಹಾಕುವುದು, ಕೃಷಿಕನ ಹೂಂಟಿ ಒಳಾಳ್ ಬಗ್ಗೆ ಮಾತನಾಡಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಆಸಾಡಿ ತಿಂಗಳಾದ ಕಾರಣ ಆಗಮಿಸಿದ ಕುಂದಾಪುರ ಕನ್ನಡದ ಅಭಿಮಾನಿಗಳಿಗೆ ಹಾಲ್ ಬಾಯಿ,ಪತ್ರೋಡೆ,ಕಜ್ಜಾಯ,ಸುಕ್ಕಿನುಂಡೆ,ಉಪ್ಕರಿ,ಕಡುಬು ಸಹಿತ 20ಕ್ಕೂ ಹೆಚ್ಚು ಬಗೆಯ ಲಘ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.