ಕುಂದಾಪುರ: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಪದಪ್ರದಾನ ಸಮಾರಂಭ

 

JANANUDI NETWORK

ಕುಂದಾಪುರ: ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ ಇಂಟರ್ಯಾಕ್ಟ್ ಪದಪ್ರದಾನ ಸಮಾರಂಭ


ಕುಂದಾಪುರ, ಜು.27: ಸ್ಥಳಿಯ ಸಂತ ಜೋಸೆಫ್ ಪ್ರೌಢ ಶಾಲೆಯಯ ಸಭಾಂಗಣದಲ್ಲಿ ಜುಲಾಯ್ 27 ರಂದು ಇಂಟರ್ಯಾಕ್ಟ್ ಕ್ಲನ್ ಪದಗ್ರಹಣ ಸಮಾರಂಭ ಕಾರ್ಯಕ್ರಮ ನೇರವೆರಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ವಾಯ್ಲೆಟ್ ತಾವ್ರೊ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಕ್ಲಬ್ ರಿವರ್ ಸೈಡ್ ಕುಂದಾಪುರ ಇದರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಪದಪ್ರದಾನವನ್ನು ನೆರವೇರಿಸಿ ‘ಮಕ್ಕಳು ವಿದ್ಯಾರ್ಥಿಗಳ ಹಂತದಲ್ಲಿಯೆ ಸೇವಾ ಮನೋಭಾವನೆಯನ್ನು ಮೂಡಿಸುವಲ್ಲಿ ರೋಟರಿ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತದೆ. ರೋಟರಿಯು ವಿದ್ಯಾರ್ಥಿಗಳಿಗೆ ಕಲಿಕೆಯ ಪರಿಕರಗಳನ್ನು ಹಾಗೂ ಸ್ವಚ್ಚತಾ ಕಿಟ್‍ಗಳನ್ನು ಒದಗಿಸಲಾಗುವುದು. ನಿಮ್ಮ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ಕಾರ್ಯ ಚಟುವಟಿಕೆಗಳನ್ನು ಉತ್ತಮವಾಗಿ ಮಾಡುತ್ತಾ, ಇಂಟರ್ಯಾಕ್ಟ್ ಕ್ಲಬನ್ನು ಬೆಳಸ ಬೇಕು’ ಎಂದು ಅವರು ತಿಳಿಸಿದರು.
ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಕುಮಾರಿ ರಂಜಿತಾ ಶೆಟ್ಟಿ ಪದಾಧಿಕಾರಿಗಳ ಪಟ್ಟಿಯನ್ನು ವಾಚಿಸಿದರು. ರೊ| ಮಂಜುನಾಥ್ ಶೆಟ್ಟಿ, ರೊ| ಸುಜಯ್ ಸುವರ್ಣ್, ರೊ|ರೊನಾಲ್ಡ್ ಡಿಮೆಲ್ಲೊ, ರೊ|ಉಲ್ಲಾಸ್ ಕ್ರಾಸ್ತಾ ಮತ್ತು ಶಿಕ್ಷಕ, ಶಿಕ್ಷಕೇತರ ವ್ರಂದದವರು ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಶೈಲೆಶ್ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.