JANANUDI NETWORK
ಹೇರಿಕುದ್ರುವಿನಲ್ಲಿ ದುರಾಶೆಯಿಂದ ಬಯಲು ಮತ್ತು ತೋಡುಗಳ ಮುಚ್ಚುಗಡೆ – ನೀರು ನಿಂತು ಸಾಂಕ್ರಾಮಿಕ ಹರಡುವ ಭೀತಿ – ಗ್ರಾಮಸ್ತರಿಂದ ಪರಿಹಾರಕ್ಕಾಗಿ ಮನವಿ
ಕುಂದಾಪುರ, ಜು.18: ಆನಗಳ್ಳಿ ಪಂಚಾಯತಿಗೆ ಸಂಬಂಧ ಪಟ್ಟ ಹೇರಿಕುದ್ರುವಿನಲ್ಲಿ ಕೆಲವು ಗ್ರಾಮಸ್ತರ ಅತಿಕ್ರಮಣದಿಂದ ಮತ್ತು ದುರಾಶೆಯಿಂದ ಬಯಲು ಪ್ರದೇಶ ಮತ್ತು ತೋಡುಗಳ ಮುಚ್ಚುಗಡೆ ಆಗಿ, ನೀರು ನದಿಗೆ ಹರಿಯದೆ, ಹೇರಿಕುದ್ರು ತಗ್ಗು ಪ್ರದೇಶವಾಗಿದ್ದು, ಆ ನೀರು ಅಲ್ಲೆ ನಿಂತು ನೀರು ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ, ಸಂಚಾರಕ್ಕೆ ಆನಾನುಕೂಲವಾಗುತ್ತೆ, ಅದಕ್ಕೆ ಪರಿಹಾರ ಕೋರಿ ಹೇರಿಕುದ್ರುವಿನ ಗ್ರಾಮಸ್ತರು ಆನಗಳ್ಳಿ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಗ್ರಾಮ ಪಂಚಾಯತ್ ಅಭಿವ್ರದ್ದಿ ಅಧಿಕಾರಿಗಳಿಗೆ 58 ಜನ ಸಹಿ ಮಾಡಿದ ಮನವಿಯನ್ನು ಸಲ್ಲಿಸಿದರು.
ಗ್ರಾಮಸ್ತರ ಮನವಿಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗೀತಾ ಎಸ್. ಮತ್ತು ಗ್ರಾಮ ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಅನಿಲ್ ಬೀರಾದರ್ ಇವರು ಸ್ವೀಕರಿಸಿದರು. ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಅನಿಲ್ ಬೀರಾದರ್ ‘ನಾನು ಆ ಜಾಗಗಳನ್ನು ನೋಡಿ ಪರೀಕ್ಷಿಸಿ ಈ ಬಗ್ಗೆ ವರದಿಯನ್ನು ಸಹಾಯಕ ಕಮಿಶನರಿಗೆ ಸಲ್ಲಿಸುತ್ತೇನೆ, ಅದರಂತೆ ಈ ಸಮಸ್ಯೆಯನ್ನು ಪರಿಹಾರ ಮಾಡಲು ಶ್ರಮಿಸುತೇನೆ’ ಎಂದು ಉತ್ತರ ನೀಡಿದರು.
ಗ್ರಾಮಸ್ತರ ಪರವಾಗಿ ಅಂತೋನಿ ಡಿಆಲ್ಮೇಡಾ ಅಧಿಕಾರಿಗಳಿಗೆ, ಪಂಚಾಯತ್ ಉಪಾಧ್ಯಕ್ಷೆ ಮತ್ತು ಸದಸ್ಯರಿಗೆ ಹೇರಿಕುದ್ರುವಿನ ಸಮಸೆಯನ್ನು ವಿವರಿಸಿ ‘ಸಾಂಕ್ತಮಿಕ ರೋಗ ಹರಡುವುದರ ಜೊತೆ, ಮನೆ ಸೂರುಗಳು ಬೀಳುವ ಸ್ಥಿತಿ ಬಂದಿದೆ, ಬಾವಿ ನೀರು ಕೂಡ ಕೆಟ್ಟಿದೆ, ಈ ಸಮಸ್ಯೆಯನ್ನು ಸಮರ್ಪಕವಾಗಿ ನಿವಾರಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಎದುರುಗಡೆ ಹರತಾಳವನ್ನು ಮಾಡುತ್ತೇವೆ, ಹಾಗೆಯೆ ಸಹಾಯಕ ಕಮಿಶನ ಮುಂದೆ ಆಗ್ರವನ್ನು ಮಾಡುತ್ತೇವೆ’ ಎಂದು ತಿಳಿಸಿದರು. ಮಾಜಿ ಪಂಚಾಯತ್ ಅಧ್ಯಕ್ಷ ಗಂಗಾಧರ್ ಶೆಟ್ಟಿ ಹಾಜರಿದ್ದು ಸಮಸ್ಯೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಜೂಲಿಯಾನ ಮಿನೇಜಸ್, ಲೀಡಿಯಾ ಡಿಆಲ್ಮೇಡಾ, ಫ್ರಾನ್ಸಿಸ್ ಬ್ರಗಾಂಜಾ, ಕಿರಣ್ ಪಾಯ್ಸ್, ರೇಖಾ ಆಲ್ಮೇಡಾ, ಸ್ಟೀವನ್ ರೆಬೆಲ್ಲೊ, ಅರುಣ್ ಡಿಸಿಲ್ವಾ, ಪ್ರೆಸಿಲ್ಲಾ ರೆಬೆಲ್ಲೊ ಮುಂತಾದ ಮುಖಂಡರು ಸೇರಿ ಸುಮಾರು 30 ಕ್ಕೂ ಹೆಚ್ಚು ಗ್ರಾಮಸ್ತರು ಹಾಜರಿದ್ದರು.