ಆರ್ ಟಿ ಐ ನಿರ್ಲಕ್ಷ್ಯ ನಿರ್ಗಮಿತ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಗೆ ದಂಡ.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಆರ್ ಟಿ ಐ ನಿರ್ಲಕ್ಷ್ಯ ನಿರ್ಗಮಿತ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಗೆ ದಂಡ.

ಶ್ರೀನಿವಾಸಪುರ: ಆರ್ ಟಿ ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ತಾಲೂಕಿನ ಗೌನಿಪಲ್ಲಿ ಗ್ರಾಮಪಂಚಾಯಿತಿ ನಿರ್ಗಮಿತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ    5 ಸಾವಿರ ರೂಪಾಯಿಗಳ ದಂಡವನು ವಿಧಿಸಿದೆ. ತಾಲೂಕಿನ ಗೌನಿಪಲ್ಲಿ ಗ್ರಾಮಪಂಚಾಯಿತಿಗ ಸಂಬಂಧಿಸಿದಂತೆ ವರ್ಗ-1  ಕುರಿತಂತೆ ಶ್ರೀನಿವಾಸಪುರ ಆರ್ ಟಿ ಐ ಮಾಹಿತಿ ಕಾರ್ಯಕರ್ತ ಶಬ್ಬೀರ್ ಆಹಮದ್ ಸುಮಾರು ಎರಡು ವರ್ಷಗಳ ಹಿಂದೆ ಮಾಹಿತಿ ಹಕ್ಕು ಆರ್ಜಿ ಸಲ್ಲಿಸಿದರು. ಅದರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಈ ಅರ್ಜಿಯನ್ನು ನಿರ್ಲಕ್ಷಿಸಿದ್ದರು ಈ ಕುರಿತು ಶಬ್ಬೀರ್ ಆಹಮದ್ ಮೇಲ್ಮನವಿ ಪ್ರಾಧಿಕಾರಕ್ಕೊ ಅರ್ಜಿಯನ್ನು ಸಲ್ಲಿಸಿದ್ದರು. ಮೇಲ್ಮನವಿ  ಪ್ರಾಧಿಕಾರವು ಅರ್ಜಿದಾರರು ಕೇಳಿರುವ  ಮಾಹಿತಿಯನ್ನು ನೀಡುವಂತೆ ಸುಚಿಸಿದತ್ತು ಆದರೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಆದೇಶವನು ಪಾಲಿಸಿರಲಿಲ್ಲ ಈ ಹಿನ್ನೆಲೆಯಲ್ಲಿ  ಮಾಹಿತಿ ಹಕ್ಕು ಆಯೋಗಕ್ಕೆ ದೂರ ಸಲ್ಲಿಸಲಾಗಿತು. ಲಭ್ಯ ಇದ್ದ ಮಾಹಿತಿ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿರುವುದಿಲ್ಲವೆಂದು  ಪರಿಗಣಿಸಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 20 (1) ರನ್ವಯ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿವಾದಿಯದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೆಂಕಟರಾಮರೆಡ್ಡಿ ಹಿಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ ಪ್ರಸ್ತುತ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುತ್ತುಕಪಲ್ಲಿ ಗ್ರಾಮ ಪಂಚಾಯತಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ ಆಗಿರುವ ಶ್ರೀ ವೆಂಕಟರಾಮರೆಡ್ಡಿ  ರಿಗೆ ರೂ 5 ಸಾವಿರ ದಂಡವನು ವಿಧಿಸಿದೆ. ಅವರಿಗೆ ವಿಧಿಸಿರುವ ದಂಡದ ಮೊತ್ತ ರೂ 5,000/-ಗಳನ್ನು ಸದರಿಯವರ ವೇತನದಿಂದ ಕಡಿತಗೊಳಿಸಿ, ಮುಂದಿನ ವಿಚಾರದಣೆ ದಿನಗಳೊಳಗಾಗಿ ಈ ದಂಡ ಮೊತ್ತ  ಸರ್ಕಾರದ ಲೆಕ್ಕ ಶೀರ್ಷಿಕೆ Head of Account 0070-60-118-0-01-000 receipts under RTI Act ಖಾತೆಗೆ ಜಮಾ ಮಾಡಿ ಜಮಾ ಮಾಡಿದ ರಸೀದಿಯೊಂದಿಗ ವರದಿ ಸಲ್ಲಿಸಬೇಕೆಂದು ಶ್ರೀ ರಾಜಣ್ಣ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯತಿ ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ ರವರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 19(8) (ಎ) ರನ್ವಯ ನಿದೇಶಿಸಿದೆ.